ಕೊಲೆ ಮಾಡಿ 31 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾದ ಮುಂಬೈ ಪೊಲೀಸರು

|

Updated on: Dec 31, 2023 | 9:49 AM

ಕೊಲೆ ಮಾಡಿ 31 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಭಿಸೆ ಎಂಬಾತ ಆರೋಪಿಯಾಗಿದ್ದು, 1992ರಲ್ಲಿ ಜಾಮೀನು ಪಡೆದಿದ್ದರೂ, ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆ ಮಾಡಿ 31 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾದ ಮುಂಬೈ ಪೊಲೀಸರು
ಬಂಧನ (ಸಾಂದರ್ಭಿಕ ಚಿತ್ರ)
Follow us on

ಕೊಲೆ ಮಾಡಿ 31 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಭಿಸೆ ಎಂಬಾತ ಆರೋಪಿಯಾಗಿದ್ದು, 1992ರಲ್ಲಿ ಜಾಮೀನು ಪಡೆದಿದ್ದರೂ, ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2003ರಿಂದ ಆರೋಪಿ ತಲೆಮರೆಸಿಕೊಂಡಿದ್ದ, ಆತ 1989ರಲ್ಲಿ ರಾಜು ಚಿಕ್ಕನನ್ನು ಕೊಲೆ ಮಾಡಿ ಬಳಿಕ ಧರ್ಮೇಂದ್ರ ಸರೋಜ್ ಎಂಬುವವರ ಕೊಲೆಗೆ ಪ್ರಯತ್ನಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಆರೋಪಿ ಸತ್ತಿರಬಹುದು ಎಂದು ಸ್ಥಳೀಯರು ಹೇಳಿದ್ದರು
ಪೊಲೀಸರು ಕಾಂದಿವಲಿಯ ಉಪನಗರದ ತುಲಾಸ್ಕರವಾಡಿಯಲ್ಲಿರುವ ಭಿಸೆ ಅವರ ನಿವಾಸದ ವಿಳಾಸಕ್ಕೆ ಹೋದಾಗ, ಆತ ಸತ್ತಿರಬಹುದು ಎಂದು ಸ್ಥಳೀಯರು ಹೇಳಿದ್ದರು.

ಮತ್ತಷ್ಟು ಓದಿ: ಹಾಸನ: ಪತ್ನಿ ತುಂಡುಡುಗೆ ಧರಿಸುತ್ತಾಳೆಂದು ಕತ್ತು ಸೀಳಿ ಕೊಲೆ ಮಾಡಿ ಎಸ್ಕೇಪ್ ಆದ ಪತಿ

ವಿಚಾರಣೆ ಸಂದರ್ಭದಲ್ಲಿ ಭಿಸೆ ಅವರ ಪತ್ನಿಯ ಮೊಬೈಲ್ ನಂಬರ್​ ಅನ್ನು ಪೊಲೀಸರು ಪಡೆದುಕೊಂಡಿದ್ದರು. ಆತ ಕುಟುಂಬ ಸದಸ್ಯರೊಂದಿಗೆ ನೆಲೆಸಿದ್ದ, ಮರಗಳನ್ನ ಕಡಿಯುವ ಗುದ್ದಿಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದ, ಆರೋಪಿಗೆ ಈಗ 62 ವರ್ಷ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ