AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಖಾಸುಮ್ಮನೆ ರೋಗಿಗಳನ್ನು ಐಸಿಯುಗೆ ದಾಖಲಿಸುವಂತಿಲ್ಲ, ಹೊಸ ನಿಯಮಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ

ಇನ್ನುಮುಂದೆ ಸುಖಾಸುಮ್ಮನೆ ರೋಗಿಗಳನ್ನು ತೀವ್ರ ನಿಗಾ ಘಟಕ(ಐಸಿಯು)ಕ್ಕೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ(Central Government) ಹೇಳಿದ್ದು, ಈ ಸಂಬಂಧ ಹೊಸ ನಿಯಮಗಳನ್ನು ರೂಪಿಸಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ರೋಗಿಯ ಅಗತ್ಯವನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಐಸಿಯು ದಾಖಲಾತಿಗೆ ಸಂಬಂಧಿಸಿದ ಈ ನಿಯಮಗಳನ್ನು ಕ್ರಿಟಿಕಲ್ ಕೇರ್ ಮೆಡಿಸಿನ್​ನಲ್ಲಿ ಪರಿಣತಿ ಹೊಂದಿರುವ 24 ಉನ್ನತ ವೈದ್ಯರ ಸಮಿತಿಯು ರಚಿಸಿದೆ.

ಸುಖಾಸುಮ್ಮನೆ ರೋಗಿಗಳನ್ನು ಐಸಿಯುಗೆ ದಾಖಲಿಸುವಂತಿಲ್ಲ, ಹೊಸ ನಿಯಮಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ
ಐಸಿಯುImage Credit source: STAT News
ನಯನಾ ರಾಜೀವ್
|

Updated on: Dec 31, 2023 | 8:40 AM

Share

ಇನ್ನುಮುಂದೆ ಸುಖಾಸುಮ್ಮನೆ ರೋಗಿಗಳನ್ನು ತೀವ್ರ ನಿಗಾ ಘಟಕ(ಐಸಿಯು)ಕ್ಕೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ(Central Government) ಹೇಳಿದ್ದು, ಈ ಸಂಬಂಧ ಹೊಸ ನಿಯಮಗಳನ್ನು ರೂಪಿಸಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ರೋಗಿಯ ಅಗತ್ಯವನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಐಸಿಯು ದಾಖಲಾತಿಗೆ ಸಂಬಂಧಿಸಿದ ಈ ನಿಯಮಗಳನ್ನು ಕ್ರಿಟಿಕಲ್ ಕೇರ್ ಮೆಡಿಸಿನ್​ನಲ್ಲಿ ಪರಿಣತಿ ಹೊಂದಿರುವ 24 ಉನ್ನತ ವೈದ್ಯರ ಸಮಿತಿಯು ರಚಿಸಿದೆ.

ಎಂಥಾ ಪರಿಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಬಹುದು?

ಈ ಸಮಿತಿಯು ಯಾವ ರೋಗಿಗಳನ್ನು ಎಂಥಾ ಪರಿಸ್ಥಿತಿಯಲ್ಲಿ ಐಸಿಯುನಲ್ಲಿ ದಾಖಲಿಸಬೇಕು, ಯಾರನ್ನು ಐಸಿಯುಗೆ ದಾಖಲಿಸುವ ಅಗತ್ಯವಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ರೋಗಿಗೆ ಪ್ರಜ್ಞೆ ಇಲ್ಲದಿರುವುದು ಅಥವಾ ಕೃತಕ ಉಸಿರಾಟದ ಸಹಾಯದ ಅಗತ್ಯವಿರಬೇಕಾಗುತ್ತದೆ. ತೀವ್ರವಾದ ಮೇಲ್ವಿಚಾರಣೆಯ ಅಗತ್ಯವಿರುವ ಯಾವುದೇ ರೋಗಿಗೆ ತೀವ್ರ ಅನಾರೋಗ್ಯದ ಸಂದರ್ಭಗಳಲ್ಲಿ ಐಸಿಯು ಆರೈಕೆಯನ್ನು ಶಿಫಾರಸು ಮಾಡಲಾಗಿದೆ.

ಟೈಮ್ಸ್​ ಆಫ್​ ಇಂಡಿಯಾದ ವರದಿ ಪ್ರಕಾರ, ಯಾವುದೋ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಪರಿಸ್ಥಿತಿ ಹದಗೆಡಬಹುದು ಎನ್ನುವ ಸಂದರ್ಭದಲ್ಲಿ ಐಸಿಯುವನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಸುಖಾಸುಮ್ಮನೆ ಇದ್ಯಾವುದೂ ಕಾರಣವಿಲ್ಲದಿರುವ ರೋಗಿಯನ್ನು ಐಸಿಯುನಲ್ಲಿ ದಾಖಲು ಮಾಡಿಕೊಳ್ಳದಂತೆ ಆಸ್ಪತ್ರೆಗೆ ಸೂಚನೆ ನೀಡಲಾಗಿದೆ.

ನಿಜವಾಗಿಯೂ ಯಾರಿಗೆ ಐಸಿಯು ಅಗತ್ಯವಿರುತ್ತದೆಯೋ ಅವರು ಪಡೆಯುವಂತಾಗಲಿ ಎಂಬುದು ಈ ನಿಯಮದ ಉದ್ದೇಶವಾಗಿದೆ. ಕೆಲವೊಮ್ಮೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿದ್ದರೂ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇನ್ಯಾವುದೋ ರೋಗಿಗೆ ಗಂಭೀರ ಸಮಸ್ಯೆಯಿದ್ದರೆ ಆ ಸಮಯದಲ್ಲಿ ಐಸಿಯುನಲ್ಲಿ ಹಾಸಿಗೆ ದೊರೆಯದೆ ಚಿಕಿತ್ಸೆಯಿಂದ ವಂಚಿತರಾಗಬೇಕುತ್ತದೆ ಹಾಗಾಗಿ ಈ ನಿಯಮ ಉತ್ತಮ ಎಂದೇ ಹೇಳಬಹುದು.

ಈ ಮಾರ್ಗಸೂಚಿಗಳ ಅಭಿವೃದ್ಧಿ ಸಮಿತಿಯಲ್ಲಿರುವ ಡಾ. ಆರ್​ಕೆ ಮಣಿ ಮಾತನಾಡಿ, ಈ ನಿಯಮದಿಂದಾಗಿ ಹೆಚ್ಚು ಅಗತ್ಯವಿರುವ ರೋಗಿಗಳು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಭಾರತದಲ್ಲಿ 1 ಲಕ್ಷ ಐಸಿಯು ಹಾಸಿಗೆಗಳಿವೆ

ಭಾರತವು ಸುಮಾರು 1 ಲಕ್ಷ ಐಸಿಯು ಹಾಸಿಗೆಗಳನ್ನು ಹೊಂದಿದೆ. ಆದರೆ ತೀರಾ ಅಗತ್ಯವಿರುವ ರೋಗಿಗಳಿಗೆ ಐಸಿಯು ಹಾಸಿಗೆಗಳು ಲಭ್ಯವಾಗುತ್ತಿಲ್ಲದ ಕಾರಣ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಐಸಿಯು ಹಾಸಿಗೆಯ ವೆಚ್ಚವು ಸಾಮಾನ್ಯ ಹಾಸಿಗೆಗಳಿಗಿಂತ 5-10 ಪಟ್ಟು ಹೆಚ್ಚಿರುತ್ತದೆ. ಅನಗತ್ಯವಾಗಿ ಐಸಿಯುಗೆ ದಾಖಲಾಗುತ್ತಿರುವ ಬಗ್ಗೆ ಈ ಹಿಂದೆಯೂ ದೂರುಗಳು ಬಂದಿದ್ದವು.

ಈ ನಿಯಮಗಳನ್ನು ವೈದ್ಯರ ಮಾರ್ಗದರ್ಶನಕ್ಕಾಗಿ ಮಾತ್ರ, ಐಸಿಯು ದಾಖಲಾತಿ ಅಥವಾ ಡಿಸ್ಚಾರ್ಜ್​ ಎರಡೂ ವೈದ್ಯರ ವಿವೇಚನೆಗೆ ಬಿಡಲಾಗಿದೆ. ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ರೋಗಿಗಳನ್ನು ಪರೀಕ್ಷಿಸಲು ಪ್ರೋಟೋಕಾಲ್‌ಗಳನ್ನು ಹೊಂದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ