AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯಾ ಧಾಮ್ ಜಂಕ್ಷನ್‌ನಿಂದ ಹೊಸ ವಂದೇ ಭಾರತ್, ಅಮೃತ್ ಭಾರತ್; ಹೊಸ ರೈಲುಗಳ ವಿಶೇಷತೆ ಏನು?

ಅಯೋಧ್ಯಾ ಧಾಮ್ ನಿಲ್ದಾಣದಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ಎಂಟು ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅವು: ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ಅಮೃತ್ ಭಾರತ್, ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್. 

ರಶ್ಮಿ ಕಲ್ಲಕಟ್ಟ
|

Updated on: Dec 30, 2023 | 9:05 PM

Share

ಅಯೋಧ್ಯೆ ಡಿಸೆಂಬರ್ 30 : ಜನವರಿ 22 ರಂದು ಐತಿಹಾಸಿಕ ರಾಮಮಂದಿರ (Ram mandir) ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಮೊದಲು ಶನಿವಾರ ಅಯೋಧ್ಯೆಗೆ (Ayodhya) ತಮ್ಮ ಪ್ರಮುಖ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ನವೀಕರಿಸಿದ ಅಯೋಧ್ಯಾ ಧಾಮ್ ಜಂಕ್ಷನ್‌ನಿಂದ ಎಂಟು ಹೊಸ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ರೈಲುಗಳು ಆರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಎರಡು ಹೊಸ ರೈಲುಗಳನ್ನು ಒಳಗೊಂಡಿವೆ.

ಅಯೋಧ್ಯಾ ಧಾಮ್ ರೈಲು ನಿಲ್ದಾಣ

ಅಯೋಧ್ಯಾ ಧಾಮ್ ಜಂಕ್ಷನ್ ಎಂದು ಕರೆಯಲ್ಪಡುವ ಪರಿಷ್ಕೃತ ಅಯೋಧ್ಯೆ ರೈಲು ನಿಲ್ದಾಣದ ಹಂತ I ಅನ್ನು 240 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡವು ಭಗವಾನ್ ರಾಮನ ಯುಗದ ಪೌರಾಣಿಕ ವಿಷಯದೊಂದಿಗೆ ಬೆಸೆದುಕೊಂಡಿರುವ ಆಧುನಿಕ ವಾಸ್ತುಶಿಲ್ಪವನ್ನು ಹೊಂದಿದೆ.

ಇದು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲೋಕ್‌ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು ಮತ್ತು ಕಾಯುವ ಹಾಲ್‌ಗಳಂತಹ ಎಲ್ಲಾ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ನಿಲ್ದಾಣದ ಕಟ್ಟಡವು ‘ಎಲ್ಲರಿಗೂ ಪ್ರವೇಶಿಸಬಹುದಾದ’ ಮತ್ತು ‘ಐಜಿಬಿಸಿ ಪ್ರಮಾಣೀಕೃತ ಹಸಿರು ನಿಲ್ದಾಣ ಕಟ್ಟಡ’ವಾಗಿರುತ್ತದೆ.

ಹೊಸ ರೈಲು ಮಾರ್ಗಗಳು ಮತ್ತು ವಿಶೇಷತೆಗಳು

ಅಯೋಧ್ಯಾ ಧಾಮ್ ನಿಲ್ದಾಣದಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ಎಂಟು ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅವು: ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ಅಮೃತ್ ಭಾರತ್, ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್. ಹೊಸ ಅಮೃತ್ ಭಾರತವು ಸೂಪರ್‌ಫಾಸ್ಟ್ ನಾನ್-ಎಸಿ ಪ್ಯಾಸೆಂಜರ್ ರೈಲುಗಳ ಹೊಸ ವರ್ಗವಾಗಿದೆ. ಇವುಗಳು LHB ಪುಶ್-ಪುಲ್ ರೈಲುಗಳಾಗಿದ್ದು, ಉತ್ತಮ ವೇಗವರ್ಧನೆಗಾಗಿ ಎರಡೂ ತುದಿಗಳಲ್ಲಿ ಎಂಜಿನ್‌ಗಳನ್ನು ಹೊಂದಿದೆ. ಇದು ರೈಲು ಪ್ರಯಾಣಿಕರಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಆಸನಗಳು, ಉತ್ತಮ ಲಗೇಜ್ ರ್ಯಾಕ್‌ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಹೋಲ್ಡರ್‌ಗಳು, ಎಲ್‌ಇಡಿ ದೀಪಗಳು, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಮಾಂಝಿ ಕುಟುಂಬ ಭೇಟಿ ಮಾಡಿದ ಮೋದಿ: ರಾಮಾಯಣಕ್ಕೂ ಈ ಕುಟುಂಬಕ್ಕೂ ಏನು ನಂಟು?

ಆರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು

  • ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್, ದೆಹಲಿ
  • ಶ್ರೀ ಮಾತಾ ವೈಷ್ಣೋ ದೇವಿ, ಕತ್ರಾ-ನವದೆಹಲಿ
  • ಅಮೃತಸರ-ದೆಹಲಿ
  • ಕೊಯಮತ್ತೂರು-ಬೆಂಗಳೂರು ಕ್ಯಾಂಟ್
  • ಮಂಗಳೂರು-ಮಡ್ಗಾಂವ್
  • ಜಲ್ನಾ-ಮುಂಬೈ

ಅಯೋಧ್ಯೆಯಿಂದ ಉದ್ಘಾಟನೆಗೊಂಡ ಇತರ ರೈಲ್ವೆ ಯೋಜನೆಗಳು

2300 ಕೋಟಿ ಮೌಲ್ಯದ ಮೂರು ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದರು. ಯೋಜನೆಗಳು ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. ಅವುಗಳಲ್ಲಿ ರೂಮಾ ಚಕೇರಿ-ಚಾಂದೇರಿ ಮೂರನೇ ಸಾಲಿನ ಯೋಜನೆ, ಜೌನ್‌ಪುರ್-ತುಳಸಿ ನಗರ, ಅಕ್ಬರ್‌ಪುರ್-ಅಯೋಧ್ಯೆ, ಸೊಹಾವಾಲ್-ಪತ್ರಾಂಗ ಮತ್ತು ಜೌನ್‌ಪುರ-ಅಯೋಧ್ಯೆ-ಬಾರಾಬಂಕಿ ದ್ವಿಗುಣಗೊಳಿಸುವ ಯೋಜನೆಯ ಸಫ್ದರ್‌ಗಂಜ್-ರಸೌಲಿ ವಿಭಾಗಗಳು ಮತ್ತು ಮಲ್ಹೌರ್-ದಲಿಗಂಜ್ ರೈಲ್ವೆ ವಿಭಾಗದ ದ್ವಿಗುಣಗೊಳಿಸುವ ಮತ್ತು ವಿದ್ಯುದೀಕರಣ ಯೋಜನೆಸೇರಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ