ಮಾಂಝಿ ಕುಟುಂಬ ಭೇಟಿ ಮಾಡಿದ ಮೋದಿ: ರಾಮಾಯಣಕ್ಕೂ ಈ ಕುಟುಂಬಕ್ಕೂ ಏನು ನಂಟು?

ಸೂರಜ್ ಮಾಂಝಿ ಅವರು ನಿಶಾದ್ ರಾಜ್ ಅವರ ವಂಶಸ್ಥರು ಎಂದು ಹೇಳಲಾಗುತ್ತದೆ. ಅವರು ತಮ್ಮ 14 ವರ್ಷಗಳ 'ವನವಾಸ' ಸಮಯದಲ್ಲಿ ದೋಣಿಯಲ್ಲಿ ಗಂಗಾ ನದಿ ದಾಟಲು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತೆಗೆ ಸಹಾಯ ಮಾಡಿದ್ದರು. ರಾಮಾಯಣದಲ್ಲಿ, ನಿಶಾದ್ ರಾಜ್ ಭಗವಾನ್ ಶ್ರೀರಾಮನ ಆಪ್ತ ಸ್ನೇಹಿತ ಮತ್ತು ಭಕ್ತ ಎಂದು ವಿವರಿಸಲಾಗಿದೆ.

ಮಾಂಝಿ ಕುಟುಂಬ ಭೇಟಿ ಮಾಡಿದ ಮೋದಿ: ರಾಮಾಯಣಕ್ಕೂ ಈ ಕುಟುಂಬಕ್ಕೂ ಏನು ನಂಟು?
ಪ್ರಧಾನಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Dec 30, 2023 | 8:46 PM

ದೆಹಲಿ ಡಿಸೆಂಬರ್ 30: ಅಯೋಧ್ಯೆಗೆ (Ayodhya) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ನಗರದಲ್ಲಿ ಸೂರಜ್ ಮತ್ತು ಮೀರಾ ಮಾಂಝಿ (Mira Manjhi) ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಸೂರಜ್ ಮಾಂಝಿ ಅವರು ನಿಶಾದ್ ರಾಜ್ ಅವರ ವಂಶಸ್ಥರು ಎಂದು ಹೇಳಲಾಗುತ್ತದೆ. ಅವರು ತಮ್ಮ 14 ವರ್ಷಗಳ ‘ವನವಾಸ’ ಸಮಯದಲ್ಲಿ ದೋಣಿಯಲ್ಲಿ ಗಂಗಾ ನದಿ ದಾಟಲು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತೆಗೆ ಸಹಾಯ ಮಾಡಿದ್ದರು.

ರಾಮಾಯಣದಲ್ಲಿ, ನಿಶಾದ್ ರಾಜ್ ಭಗವಾನ್ ಶ್ರೀರಾಮನ ಆಪ್ತ ಸ್ನೇಹಿತ ಮತ್ತು ಭಕ್ತ ಎಂದು ವಿವರಿಸಲಾಗಿದೆ. ಅದೇ ವೇಳೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ 10 ಕೋಟಿ ಫಲಾನುಭವಿಯಾಗಿರುವ ಮೀರಾ ಮಾಂಝಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ನಾನು ಅವರಿಗಾಗಿ ಚಹಾವನ್ನು ಸಿದ್ಧಪಡಿಸಿದೆ. ಅದು ನನಗೆ ಕನಸಿನಂತೆ ಇತ್ತು. ಸರ್ಕಾರದ ಯೋಜನೆಗಳ ಪ್ರಯೋಜನಗಳ ಬಗ್ಗೆ ಪ್ರಧಾನಿ ಮೋದಿ ಕೇಳಿದರು. ನನ್ನ ಜೀವನದುದ್ದಕ್ಕೂ ನಾನು ಈ ಕ್ಷಣವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಟಿವಿ 9 ಭಾರತವರ್ಷ್ ಜತೆ ಮಾತನಾಡಿದ ಮೀರಾ ಮಾಂಝಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮೀರಾ ಮನೆಯಲ್ಲಿ ಚಹಾ ಸೇವಿಸಿದರು. ಜನವರಿ 22 ರ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ಮೋದಿ ಆಹ್ವಾನ ನೀಡಬಹುದು ಎಂಬ ವರದಿಗಳಿವೆ. ಆದರೆ, ಅದರ ಬಗ್ಗೆ ಅಧಿಕೃತ ದೃಢೀಕರಣ ಇರಲಿಲ್ಲ. ಈ ಹಿಂದೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರಕ್ಕೆ ಭೇಟಿ ನೀಡಿದಾಗ ಅವರ ಮನೆಯಲ್ಲಿ ಊಟ ಮಾಡಿದ ಸಂದರ್ಭದಲ್ಲಿ ಮಾಂಝಿ ಕುಟುಂಬ ಸುದ್ದಿಯಾಗಿತ್ತು.

ಶನಿವಾರ, ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ 15,700 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಉದ್ಘಾಟಿಸಿದ ಯೋಜನೆಗಳಲ್ಲಿ ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣ (ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ) ಸೇರಿವೆ. ಪ್ರಧಾನಮಂತ್ರಿ ಅವರು ಎರಡು ಅಮೃತ್ ಭಾರತ್ ಮತ್ತು ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್‌ಶೋ ನಡೆಸಿದರು ಮತ್ತು ಅದರ ಮಾರ್ಗದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರು ಅವರನ್ನು ಸ್ವಾಗತಿಸಿದರು. ಮೋದಿಯವರು ತಮ್ಮ ಕಾರಿನಿಂದ ಜನರ ಕಡೆಗೆ ಕೈ ಬೀಸಲು ತಮ್ಮ ವಾಹನದ ಬಾಗಿಲು ತೆರೆದರು. ಜನರು ಹೂವಿನ ದಳಗಳನ್ನು ಸುರಿಸಿ, ಅವರನ್ನು ಹೊಗಳಿ ಘೋಷಣೆಗಳನ್ನು ಕೂಗಿದರು. ಪ್ರಧಾನಿಯವರು ಮಾರ್ಗದುದ್ದಕ್ಕೂ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳನ್ನು ವೀಕ್ಷಿಸಿದರು.

ಇದನ್ನೂ ಓದಿ: ಅಯೋಧ್ಯೆ: ಉಜ್ವಲಾ ಯೋಜನೆಯ ಫಲಾನುಭವಿ ಮನೆಗೆ ಮೋದಿ ಭೇಟಿ; ಚಹಾ ಜತೆ ಚಿಟ್ ಚಾಟ್

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಲತಾ ಮಂಗೇಶ್ಕರ್ ಚೌಕ್‌ಗೆ ಭೇಟಿ ನೀಡಿದ್ದು, ಅಲ್ಲಿ ಬೃಹತ್ ಗಾತ್ರದ ವೀಣೆಯನ್ನು ಅಳವಡಿಸಲಾಗಿದೆ. ಅವರ ಭೇಟಿಯ ವೇಳೆ ಲತಾ ಮಂಗೇಶ್ಕರ್ ಹಾಡಿದ ಭಕ್ತಿಗೀತೆಯನ್ನು ನುಡಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ