Obstetric ICUs: ರಾಜ್ಯದಲ್ಲಿ 14 ಹೊಸ ಪ್ರಸೂತಿ ತೀವ್ರ ನಿಗಾ ಘಟಕ ಸ್ಥಾಪನೆಗೆ ಮುಂದಾದ ಆರೋಗ್ಯ ಇಲಾಖೆ

ಸಂಕೀರ್ಣ ಗರ್ಭಾವಸ್ಥೆಯ ಪ್ರಕರಣಗಳನ್ನು ನಿಭಾಯಿಸಲು ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 14 ಹೊಸ ಪ್ರಸೂತಿ ತೀವ್ರ ನಿಗಾ ಘಟಕಗಳನ್ನು ತರುವ ಕಾರ್ಯವನ್ನು ಮಾಡುತ್ತಿದೆ.

Obstetric ICUs: ರಾಜ್ಯದಲ್ಲಿ 14 ಹೊಸ ಪ್ರಸೂತಿ ತೀವ್ರ ನಿಗಾ ಘಟಕ ಸ್ಥಾಪನೆಗೆ ಮುಂದಾದ ಆರೋಗ್ಯ ಇಲಾಖೆ
ಸಾಂದರ್ಭಿಕ ಚಿತ್ರ
Follow us
|

Updated on: Jul 14, 2023 | 4:15 PM

ಬೆಂಗಳೂರು, ಜುಲೈ 14: ರಾಜ್ಯದ ಆರೋಗ್ಯ ಇಲಾಖೆ ಗರ್ಭಿಣಿಯರಿಗಾಗಿ ವಿನೂತ ಯೋಜನೆ ತರುವ ಪ್ರಯತ್ನ ಮಾಡುತ್ತಿದೆ. ಸಂಕೀರ್ಣ ಗರ್ಭಾವಸ್ಥೆಯ ಪ್ರಕರಣಗಳನ್ನು ನಿಭಾಯಿಸಲು ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 14 ಹೊಸ ಪ್ರಸೂತಿ ತೀವ್ರ ನಿಗಾ ಘಟಕಗಳು (obstetric intensive care units) ಮುಂದಿನ ಮೂರು ತಿಂಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದ ಸಮಯದಲ್ಲಿ ಗರ್ಭಿಣಿಯರಿಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ, ಇನ್ನೂ ಗರ್ಭಧಾರಣೆಯನ್ನು ನಿಭಾಯಿಸಲು ಅನೇಕ ಸೌಲಭ್ಯಗಳು ಅಥವಾ ಪರಿಣತಿ ವೈದ್ಯರ ಕೊರತೆಗಳನ್ನು ಆಸ್ಪತ್ರೆಗಳಲ್ಲಿ ನಿಭಾಯಿಸಲು ಈ ಕ್ರಮವನ್ನು ತರಲಾಗುವುದು ಎಂದು ಉಪ ನಿರ್ದೇಶಕ (maternal health) ಡಾ ರಾಜ್‌ಕುಮಾರ್ ಎನ್ ಹೇಳಿದರು.

ಪ್ರಸೂತಿ ತೀವ್ರ ನಿಗಾ ಘಟಕಗಳು(OICU) ತೀವ್ರ ರಕ್ತಹೀನತೆ, ರೋಗಗ್ರಸ್ತವಾಗುವಿಕೆಗಳು, ಗರ್ಭಾವಸ್ಥೆಯ ಸಮಯದಲ್ಲಿ ಬರುವ ಮಧುಮೇಹ ಅಥವಾ ಇತರ ಅಂತಹ ತೊಡಕುಗಳನ್ನು ಹೊಂದಿರುವ ರೋಗಗಳನ್ನು ನಿಭಾಯಿಸಲು ತಜ್ಞರಿಗೆ ಅನುಕೂಲ ಮಾಡುತ್ತದೆ, ಇಂತಹ ಕಠಿಣ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಜತೆಗೆ ಸಿಸೇರಿಯನ್ ಹೆರಿಗೆಗಳ ಸಂಭವವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Department Job: ಫಾಮರ್ಸಿ ಅಧಿಕಾರಿ, ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಸ್ತುತ, 50% ಮಹಿಳೆಯರು ತಮ್ಮ ಪ್ರಸವಪೂರ್ವ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ, ಆದರೆ 20% ದಷ್ಟು ಮಹಿಳೆಯರಿಗೆ ಮಾತ್ರ ಅಲ್ಲಿ ಹೆರಿಗೆಯಾಗುತ್ತಾರೆ, ಆದರೆ ಉಳಿದ 30% ಮಹಿಳೆಯರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಾರೆ ಎಂದು ಡಾ ರಾಜ್‌ಕುಮಾರ್ ಹೇಳಿದರು. ಇಲ್ಲಿಯವರೆಗೆ, ರಾಜ್ಯಾದ್ಯಂತ ಒಂದು ವರ್ಷದಿಂದ 18 OICU ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 14 ಬರಲು ಬಾಕಿದೆ. ಕೊಪ್ಪಳ, ತುಮಕೂರು, ಕೋಲಾರ, ಶಿವಮೊಗ್ಗ, ಹಾಸನ ಮತ್ತು ಬೆಳಗಾವಿಯಲ್ಲಿ ಒಐಸಿಯುಗಳನ್ನು ಸ್ಥಾಪಿಸುವುದರೊಂದಿಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ಗಮನಹರಿಸುತ್ತಿದೆ.

ವಾಣಿ ವಿಲಾಸ ಆಸ್ಪತ್ರೆಯ (ಸ್ತ್ರೀರೋಗ ಮತ್ತು ಪ್ರಸೂತಿ) ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಸಿ ಅವರು ಪ್ರತಿದಿನ 30-45 ಹೆರಿಗೆಗಳನ್ನು ಮಾಡುತ್ತಾರೆ, ಅದರಲ್ಲಿ 50% ಹೆಚ್ಚಿನ ಅಪಾಯದ ಗರ್ಭಧಾರಣೆಗಳಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ