ಮಹಾರಾಷ್ಟ್ರ: ತಂದೆಯಿಂದ ಹಣ ವಸೂಲಿ ಮಾಡಲು, ಕಿಡ್ನ್ಯಾಪ್​ ಆಗಿದ್ದೇನೆಂದು ನಾಟಕವಾಡಿ ಸಿಕ್ಕಿಬಿದ್ದ ಮಗ

ತಂದೆಯಿಂದ ಹಣ ಪಡೆಯಲು ಮಗನೊಬ್ಬ ತಾನು ಕಿಡ್ನ್ಯಾಪ್​ ಆಗಿದ್ದೇನೆ ಎಂದು ನಾಟಕವಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ. ವಸಾಯಿಯ ಫಾದರ್ವಾಡಿ ಪ್ರದೇಶದ ನಿವಾಸಿಯೊಬ್ಬರು ತಮ್ಮ ಮಗ ಡಿಸೆಂಬರ್ 7 ರಂದು ಮನೆಯಿಂದ ಹೊರಗೆ ಹೋಗಿದ್ದ ಆದರೆ ಹಿಂತಿರುಗಿಲ್ಲ ಎಂದು ಇಲ್ಲಿನ ವಲಿವ್ ಪೊಲೀಸರಿಗೆ ದೂರು ನೀಡಿದ್ದರು.

ಮಹಾರಾಷ್ಟ್ರ: ತಂದೆಯಿಂದ ಹಣ ವಸೂಲಿ ಮಾಡಲು, ಕಿಡ್ನ್ಯಾಪ್​ ಆಗಿದ್ದೇನೆಂದು ನಾಟಕವಾಡಿ ಸಿಕ್ಕಿಬಿದ್ದ ಮಗ
ಅಪಹರಣ
Image Credit source: NDTV

Updated on: Dec 10, 2023 | 9:51 AM

ತಂದೆಯಿಂದ ಹಣ ಪಡೆಯಲು ಮಗನೊಬ್ಬ ತಾನು ಕಿಡ್ನ್ಯಾಪ್​ ಆಗಿದ್ದೇನೆ ಎಂದು ನಾಟಕವಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ. ವಸಾಯಿಯ ಫಾದರ್ವಾಡಿ ಪ್ರದೇಶದ ನಿವಾಸಿಯೊಬ್ಬರು ತಮ್ಮ ಮಗ ಡಿಸೆಂಬರ್ 7 ರಂದು ಮನೆಯಿಂದ ಹೊರಗೆ ಹೋಗಿದ್ದ ಆದರೆ ಹಿಂತಿರುಗಿಲ್ಲ ಎಂದು ಇಲ್ಲಿನ ವಲಿವ್ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಡಿಸೆಂಬರ್ 8 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಅದರ ಬಗ್ಗೆ ತನಿಖೆ ನಡೆಸುತ್ತಿರುವಾಗ, ದೂರುದಾರರಿಗೆ ಅವರ ಮಗನಿಂದ ಕರೆ ಬಂದಿತ್ತು. ಮೂವರು ವ್ಯಕ್ತಿಗಳು ತನ್ನನ್ನು ಅಪಹರಿಸಿ, ಸೆರೆಯಲ್ಲಿಟ್ಟಿದ್ದಾರೆ, 30 ಸಾವಿರ ಕೊಟ್ಟಿಲ್ಲವೆಂದರೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದ.

ಹಣ ಕಳುಹಿಸಲು ಮಗ ತನ್ನ ತಂದೆಗೆ ಕ್ಯೂಆರ್ ಕೋಡ್ ಅನ್ನು ಸಹ ಕಳುಹಿಸಿದ್ದ. ನಂತರ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಯಿತು ಮತ್ತು ಅವರು ವಸೈ, ವಿರಾರ್, ನಲ್ಲಸೊಪಾರ ಮತ್ತು ಇತರ ಸ್ಥಳಗಳಲ್ಲಿ ಹುಡುಕಾಟ ಆರಂಭಿಸಿದರು.

ಮತ್ತಷ್ಟು ಓದಿ: ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ, ಕಬಾಬ್ ತರುತ್ತೇನೆಂದು ಹೋದವ ಹೆಣವಾಗಿ ಪತ್ತೆ

ಯುವಕನನ್ನು ಶನಿವಾರ ವಸಾಯಿ ಫಾಟಾದಲ್ಲಿ ಪತ್ತೆ ಮಾಡಲಾಯಿತು. ಪೊಲೀಸರು ಆತನನ್ನು ವಿಚಾರಿಸಿದಾಗ ತಂದೆಯಿಂದ ಹಣ ಬೇಕೆಂದು ಕೇಳಿದ್ದೆ, ಆದರೆ ತಂದೆ ಕೊಡಲು ಒಪ್ಪಿರಲಿಲ್ಲ, ಹೀಗಾಗಿ ಆತ ತನ್ನ ತಂದೆಯಿಂದ ಹಣ ವಸೂಲಿ ಮಾಡಲು ಅಪಹರಣ ನಾಟಕವನ್ನು ರೂಪಿಸಿದ್ದಾಗಿ ತಿಳಿಸಿದ್ದಾನೆ. 20 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ