ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ, ಕಬಾಬ್ ತರುತ್ತೇನೆಂದು ಹೋದವ ಹೆಣವಾಗಿ ಪತ್ತೆ
ಪ್ಲಂಬಿಂಗ್ ಹಾಗೂ ಪೆಯಿಂಟ್ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಯೋಗೇಶ್, ನೆನ್ನೆ ಸಹಾ ಕೆಲಸಕ್ಕೆಂದು ಹೊಸಳ್ಳಿ ಗ್ರಾಮಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಪತ್ನಿಗೆ ಕಾಲ್ ಮಾಡಿ, ಮಕ್ಕಳಿಗೆ ಕಬಾಬ್ ತಿನ್ನಲು ತರುತ್ತೇನೆ ಎಂದು ಹೇಳಿದ್ದರು. ಬೆಳಗ್ಗೆ 5.30 ರ ಸುಮಾರಿಗೆ ರಸ್ತೆಯ ಪಕ್ಕದಲ್ಲಿಯೇ ಹೆಣವಾಗಿ ಬಿದ್ದಿರುವುದನ್ನ ನೋಡಿ ಕುಟುಂಸ್ಥರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ.

ಮಂಡ್ಯ, ಡಿಸೆಂಬರ್ 9: ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕಾರೇಕುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಳ್ಳಂಬೆಳಗ್ಗೆ ಜಮೀನು ಕೆಲಸಕ್ಕೆಂದು ತೆರಳುತ್ತಿದ್ದವರು ಕೊಲೆಯ ವಿಚಾರ ಕೇಳಿ ಆತಂಕಕ್ಕೊಳಗಾಗಿದ್ದರೆ, ಕಬಾಬ್ ತರುತ್ತೇನೆಂದು ಹೋದವನು ಹೆಣವಾಗಿ ಪತ್ತೆಯಾಗಿದ್ದನ್ನು ತಿಳಿದು ಮೃತ ವ್ಯಕ್ತಿಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರೇಕುರ ಗ್ರಾಮದ ಯೋಗೇಶ್ (34) ಎಂಬವರೇ ಕೊಲೆಯಾದ ದುರ್ದೈವಿ.
ಪ್ಲಂಬಿಂಗ್ ಹಾಗೂ ಪೆಯಿಂಟ್ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಯೋಗೇಶ್, ನೆನ್ನೆ ಸಹಾ ಕೆಲಸಕ್ಕೆಂದು ಹೊಸಳ್ಳಿ ಗ್ರಾಮಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಪತ್ನಿಗೆ ಕಾಲ್ ಮಾಡಿ, ಮಕ್ಕಳಿಗೆ ಕಬಾಬ್ ತಿನ್ನಲು ತರುತ್ತೇನೆ ಎಂದು ಹೇಳಿದ್ದರು. ಆದರೆ ಎಷ್ಟು ಹೊತ್ತಾದರೂ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಮಂಜುಳ ಮಲಗಿದ್ದರು. ಕಾಲ್ ಮಾಡಿದರೂ ನಾಟ್ ರೀಚಬಲ್ ಬರುತ್ತಿತ್ತು. ಆದರೆ ಬೆಳಗ್ಗೆ 5.30 ರ ಸುಮಾರಿಗೆ ರಸ್ತೆಯ ಪಕ್ಕದಲ್ಲಿಯೇ ಹೆಣವಾಗಿ ಬಿದ್ದಿರುವುದನ್ನ ನೋಡಿ ಕುಟುಂಸ್ಥರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ. ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಯೋಗೇಶ್ ಮೃತದೇಹ ಪತ್ತೆಯಾಗಿದೆ. ದುರ್ಷರ್ಮಿಗಳು ಪರಾರಿಯಾಗಿದ್ದಾರೆ.
ಕೆಲ ವರ್ಷಗಳ ಕೆಳಗೆ ಯೋಗೇಶ್, ಬೆಂಗಳೂರಿನಿಂದ ಬಂದು ಕಾರೇಕುರ ಗ್ರಾಮದಲ್ಲಿ ವಾಸವಾಗಿದ್ದರು. ಪೆಯಿಂಟ್ ಕೆಲಸ ಮಾಡುತ್ತಿದ್ದ ಯೋಗೇಶ್, ಅಕ್ಕಪಕ್ಕದ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಇದ್ದರು. ಯಾರ ಜೊತೆ ಕೂಡ ದ್ವೇಷ ಮಾಡಿಕೊಂಡಿರಲಿಲ್ಲ. ಆದರೆ ಅಂತಹ ವ್ಯಕ್ತಿಯನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಹನ್ನೊಂದು ಗಂಟೆಯ ನಂತರ ಘಟನೆ ನಡೆದಿದೆ.
ಇದನ್ನೂ ಓದಿ: ಗದಗ: ಮೆಣಸಿನಕಾಯಿ ತೋಟ ಕಾವಲು ಕಾಯುತ್ತಿದ್ದ ರೈತ ಕಾರ್ಮಿಕನನ್ನು ಕೊಂದು ರುಂಡ ಕದ್ದೊಯ್ದ ಹಂತಕರು
ಘಟನೆ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕಕೊಂಡು ತನಿಕೆ ಆರಂಭಿಸಿದ್ದಾರೆ.
ಒಟ್ಟಾರೆ ಗ್ರಾಮದಲ್ಲಿಯೇ ನಡೆದ ಮರ್ಡರ್ ಕೇಸ್ ಇಡೀ ಗ್ರಾಮವನ್ನೇ ಆತಂಕಕ್ಕೆ ಒಳಗಾಗುವಂತೆ ಮಾಡಿದ್ದು, ಆರೋಪಿಗಳ ಬಂಧನನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ