ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಬಡವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಕಂಪನಿ

ಅದು ದೇಶದಲ್ಲಿ ಸುಮಾರು 85 ಶಾಖೆ ಹೊಂದಿರುವ ಕೇರಳ ಮೂಲದ ಫೈನಾನ್ಸ್ ಕಂಪನಿ. ಸದ್ಯ ಕೆಲ ದಿನಗಳಿಂದ ಕಂಪನಿ ಬಾಗಿಲು ಮುಚ್ಚಿದ್ದು, ಬಡವರು ಫೈನಾನ್ಸ್​ ಬಾಗಿಲು ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ಆ ಫೈನಾನ್ಸ್​ ನಂಬಿ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆ ಫೈನಾನ್ಸ್​ ಕಂಪನಿ ಯಾವುದು? ಏನಿದು ಸ್ಟೋರಿ? ಇಲ್ಲಿದೆ ಓದಿ...

ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಬಡವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಕಂಪನಿ
ರಾಯಲ್ ಟ್ರಾವಂಕೂರ್ ಫೈನಾನ್ಸ್​​ ಕಂಪನಿ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ವಿವೇಕ ಬಿರಾದಾರ

Updated on: Dec 09, 2023 | 2:45 PM

ಮಂಗಳೂರು, ಡಿಸೆಂಬರ್​​ 09: ಅದು ದೇಶದಲ್ಲಿ ಸುಮಾರು 85 ಶಾಖೆ ಹೊಂದಿರುವ ಕೇರಳ (Kerala) ಮೂಲದ ಫೈನಾನ್ಸ್ (Finance) ಕಂಪನಿ. ಸದ್ಯ ಕೆಲ ದಿನಗಳಿಂದ ಕಂಪನಿ ಬಾಗಿಲು ಮುಚ್ಚಿದ್ದು, ಬಡವರು ಫೈನಾನ್ಸ್​ ಬಾಗಿಲು ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ಆ ಫೈನಾನ್ಸ್​ ನಂಬಿ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆ ಫೈನಾನ್ಸ್​ ಕಂಪನಿ ಯಾವುದು? ಏನಿದು ಸ್ಟೋರಿ? ಇಲ್ಲಿದೆ ಓದಿ…

ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೂಲಿ ನಾಲಿ ಮಾಡಿ ಅದೆಷ್ಟೊ ಜನರು ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕಡಿಮೆ ಸಂಪಾದನೆಯಲ್ಲೂ ಒಂದಷ್ಟು ಹಣ ಉಳಿಸಬೇಕು, ಜೊತೆಗೆ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ರಾಷ್ಟ್ರಿಕೃತ ಬ್ಯಾಂಕ್ ಬಿಟ್ಟು ಫೈನಾನ್ಸ್​ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಸದ್ಯ ಇವರಿಗೆ ಬಡ್ಡಿ ಸಿಗುವುದಿರಲಿ ಹೂಡಿರುವ ಅಸಲಿ ಹಣ ಸಿಗುವು ಡೌಟ್​ ಆಗಿದೆ. ಏಕೆಂದರೆ ಇವರು ಹೂಡಿಕೆ ಮಾಡಿರುವ ರಾಯಲ್ ಟ್ರಾವಂಕೂರ್ ಎಂಬುವ ಫೈನಾನ್ಸ್​ ಕಂಪೆನಿ ಸದ್ದಿಲ್ಲದೆ ಮುಚ್ಚಿದೆ.

ಹೌದು ರಾಯಲ್ ಟ್ರಾವಂಕೂರ್​ ಫಾರ್ಮರ್ಸ್​ ಪ್ರೊಡ್ಯೂಸರ್ ಫೈನಾನ್ಸ್​ ಕಂಪನಿ ಸದ್ಯ ಮಂಗಳೂರಿನ ಒಂದು ಬ್ರ್ಯಾಂಚ್​​​ನಲ್ಲೇ ಸರಿ ಸುಮಾರು 65 ಲಕ್ಷ ರೂ. ವಂಚನೆ ಮಾಡಿದೆ. ಕೇರಳ ಮೂಲದ ಈ ಫೈನಾನ್ಸ್​ ಕಂಪನಿ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದು ಜನರಿಗೆ ನಂಬಿಸಿತ್ತು. ಹೀಗಾಗಿ ಕೂಲಿ ಕಾರ್ಮಿಕರು ಹೆಚ್ಚಾಗಿ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಈಗ ಕೈ ಸುಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸೈಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಅನಿವಾಸಿ ಭಾರತೀಯ

ರಾಯಲ್​ ಟ್ರವಾಂಕೂರ್ ಫೈನಾನ್ಸ್​ ಕಂಪನಿ ದೇಶದ ಎಲ್ಲೆಡೆ ಸುಮಾರು 85 ಬ್ರ್ಯಾಂಚ್​​ಗಳನ್ನು ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್​ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್​ ಕಂಪನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು ಸಿಬ್ಬಂದಿಗಳೂ ಸದ್ದಿಲ್ಲದೆ ಪರಾರಿಯಾಗಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್​ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ಆದರೆ ಇದೀಗ ಕಂಪನಿ ಬಾಗಿಲು ಮುಂಚಿಕೊಂಡು ಹೋಗಿದ್ದು, ಫೈನಾನ್ಸ್​ ಕಂಪೆನಿ ಆರಂಭಿಸಲು ಪರವಾನಿಗೆ ನೀಡಿರುವ ಸರ್ಕಾರವೇ ತಮ್ಮ ಹಣ ವಾಪಾಸು ನೀಡಲಿ ಅಂತ ಬೇಡಿಕೆ ಇಟ್ಟಿದ್ದಾರೆ.

ತಮಗಾದ ವಂಚನೆ ಬಗ್ಗೆ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆರಂಭದಲ್ಲಿ ಹಣ ನೀಡುವುದಾಗಿ ಹೇಳಿದ ಸಿಬ್ಬಂಧಿಗಳು ಇದೀಗ ಏಕಾ ಏಕಿ ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಒಟ್ಟಾರೆ ಅಧಿಕ ಬಡ್ಡಿ ನಂಬಿ ಕಷ್ಟದ ಹಣವನ್ನು ಹೂಡಿಕೆ ಮಾಡಿದ ಜನರು ಮಾತ್ರ ಈಗ ನ್ಯಾಯಕ್ಕಾಗಿ ಸರ್ಕಾರದ ಬಾಗಿಲು ತಟ್ಟುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ