ಸೈಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಅನಿವಾಸಿ ಭಾರತೀಯ
ಬೆಂಗಳೂರು ನಗರದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿದ್ದು, ಇದನ್ನು ನಿಗ್ರಹಿಸಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅದಾಗ್ಯೂ, ಸಬೈರ್ ಚೋರರು ಜನಸಾಮಾನ್ಯರನ್ನು ವಂಚಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ, ವಿದೇಶದಲ್ಲಿರುವ ಬೆಂಗಳೂರು ಮೂಲದ ವ್ಯಕ್ತಿಗೆ ಸೈಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು, ಡಿ.7: ವಿದೇಶದಲ್ಲಿರುವ ಬೆಂಗಳೂರು (Bengaluru) ಮೂಲದ ವ್ಯಕ್ತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಹಣ ಕಳೆದು ಕೊಂಡ ಅನಿವಾಸಿ ಭಾರತೀಯ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಜಾಹಿರಾತು ಮುಖಾಂತರ ರಾಘವೇಂದ್ರ ಪ್ರಸಾದ್ ಎಂಬವರನ್ನು ಜೆಪಿ ನಗರದ ರಿಯಲ್ ಎಸ್ಟೇಟ್ ಕಂಪನಿ ಪರಿಚಯಿಸಿಕೊಂಡಿದೆ. ನಂತರ ಹೂಡಿಕೆ ಮಾಡಿಸಿಕೊಂಡು ಸೈಟ್ ಬುಕ್ ಮಾಡಿದ್ದಾರೆ. ಈಗಾಗಲೇ ವಿವಿಧ ಹಂತಗಳಲ್ಲಿ 30 ಲಕ್ಷ ಹಣ ಜಮೆ ಮಾಡಿಸಿಕೊಂಡಿದೆ. ಹಣ ಜಮೆಯಾದ ಬಳಿಕ ಬುಕ್ ಮಾಡಿದ್ದ ಸೈಟ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: ಅನಾವಶ್ಯಕ ಗರ್ಭಕೋಶ ಶಸ್ತ್ರ ಚಿಕಿತ್ಸೆ; ಸರ್ಕಾರಿ ವೈದ್ಯನ ವಂಚನೆಗೆ ಸುವರ್ಣ ವಿಧಾನಸೌಧ ಬಳಿ ಮಹಿಳೆಯರಿಂದ ಧರಣಿ
ಈ ವಿಚಾರ ತಿಳಿದ ರಾಘವೇಂದ್ರ ಪ್ರಸಾದ್ ಅವರು ಕಂಪನಿಯನ್ನು ಪ್ರಶ್ನಿಸಿದಾಗ ಬೇರೆ ಸೈಟ್ ನೀಡುವುದಾಗಿ ತಿಳಿಸಿದೆ. ಈ ವೇಳೆ ಹೂಡಿಕೆ ಹಣ ವಾಪಾಸ್ ನೀಡುವಂತೆ ರಾಘವೇಂದ್ರ ಅವರು ಕಂಪನಿಗೆ ಮನವಿ ಮಾಡಿದ್ದಾರೆ. ಆದರೇ ಆರು ತಿಂಗಳಿಂದ ಹಣ ಕೊಡದೆ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ನ್ಯಾಯ ಕೊಡಿಸುವಂತೆ ರಾಘವೇಂದ್ರ ಅವರು ನಗರ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 am, Thu, 7 December 23