ಗಂಧದ ತುಂಡುಗಳನ್ನ ಕದ್ದ ಖತರ್ನಾಕ್ ಕಳ್ಳರನ್ನ ಯಾದಗಿರಿ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದರು, ಆದರೆ ಕಳ್ಳರ ಕಹಾನಿ ಕೇಳಿ ಶಾಕ್ ಆಗಿದ್ದಾರೆ!
ಅರಣ್ಯದಿಂದ ಕದ್ದು ಸಾಗಿಸುತ್ತಿದ್ದ ಶ್ರೀಗಂಧದ ತುಂಡುಗಳನ್ನ ವಶಕ್ಕೆ ಪಡೆದು ಯಾದಗಿರಿ ಯಾದಗಿರಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಶೇಖರಿಸಿಟ್ಟಿದ್ರು. ಆದ್ರೆ ಅದನ್ನು ಕಳ್ಳತನ ಮಾಡಲಾಗಿತ್ತು. ಕೊನೆಗೂ ಖತರ್ನಾಕ್ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಕಳ್ಳರ ಕಹಾನಿ ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ.
ಯಾದಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಶ್ರೀಗಂಧದ ತುಂಡುಗಳನ್ನ ವಶಕ್ಕೆ ಪಡೆದಿದ್ರು. ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ (sandalwood) ತುಂಡುಗಳನ್ನ ವಶಕ್ಕೆ ಪಡೆದು ಕಚೇರಿಯಲ್ಲಿ ಶೇಖರಿಸಿಟ್ಟಿದ್ರು. ಆದ್ರೆ 15 ದಿನಗಳ ಬಳಿಕ ಕಚೇರಿಯಲ್ಲಿ ಶೇಖರಿಸಿಟ್ಟಿದ್ದ ತುಂಡುಗಳನ್ನ ಕಚೇರಿಯಿಂದ್ಲೇ ಕಳ್ಳತನ (Thief) ಮಾಡಲಾಗಿತ್ತು. ಕೊನೆಗೂ ಶ್ರೀಗಂಧದ ತುಂಡುಗಳನ್ನ ಕದ್ದಿದ್ದ ಖತರ್ನಾಕ್ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಕಳ್ಳರ ಕಹಾನಿ ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕೆಂದರೆ ಈ ಕಳ್ಳರ ಖತರ್ನಾಕ್ ಲಿಂಕ್ ಯಾದಗಿರಿಯಿಂದ (Yadgiri) ಶಿವಮೊಗ್ಗಕ್ಕೆ (Shivamogga) ಹಬ್ಬಿದೆ.
ಹೌದು ಯಾದಗಿರಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಶೇಖರಿಸಿಟ್ಟದ ಶ್ರೀಗಂಧದ ಮರಗಳ ತುಂಡುಗಳ ಕಳ್ಳತನ ನಡೆದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದ ಶ್ರೀಗಂಧದ ಮರಗಳ ತುಂಡುಗಳನ್ನ ಕಳ್ಳರು ಕಚೇರಿಯಿಂದ್ಲೇ ಎಸ್ಕೇಪ್ ಮಾಡಿದ್ರು. ಘಟನೆ ನಡೆದ ಬಳಿಕ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪೊಲೀಸರು ಕೇಸ್ ದಾಖಲಾದ ಕೂಡ್ಲೆ ತನಿಖೆ ಶುರು ಮಾಡಿದ್ರು. ಇತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಳ್ಳತನದ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಓರ್ವ ಅಧಿಕಾರಿ ಹಾಗೂ ಓರ್ವ ಸಿಬ್ಬಂದಿಯನ್ನ ಅಮಾನತು ಮಾಡಿದ್ರು.
ಆದ್ರೆ ಕಚೇರಿಯಿಂದ ಸುಮಾರು 8 ಲಕ್ಷ ಮೌಲ್ಯದ 80 ಕೆ.ಜಿ ಶ್ರೀಗಂಧದ ತುಂಡುಗಳನ್ನ ಕಳ್ಳತನ ಮಾಡಿದವರು ಯಾರು ಅಂತ ಗೊತ್ತಾಗಿರಲಿಲ್ಲ. ಆದ್ರೆ ಪೊಲೀಸರು ಸತತ ತನಿಖೆ ನಡೆಸಿದ ಬಳಿಕ ಕಳ್ಳರ ಕರಾಮತ್ತು ಬಯಲಾಗಿದೆ. ಶಿವಮೊಗ್ಗದ ಜೈಲಿನಲ್ಲಿದ್ದ ಆರೋಪಿ ಅಜೀಜ್ ನಿಂದ ಯಾದಗಿರಿಯಲ್ಲಿ ನಡೆದಿದ್ದ ಶ್ರೀಗಂಧದ ತುಂಡುಗಳನ್ನ ಕಳ್ಳತನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಈ ಅಜೀಜ್ ಸದ್ಯ ಶಿವಮೊಗ್ಗದಲ್ಲಿಯೂ ಶ್ರೀಗಂಧದ ತುಂಡುಗಳನ್ನ ಕಳ್ಳತನ ಮಾಡಿದ ಕೇಸ್ ನಲ್ಲಿ ಅಂದರ್ ಆಗಿದ್ದಾನೆ. ಇದೆ ಅಜೀಜ್ ಮತ್ತು ಟೀಮ್ ಯಾದಗಿರಿಯಲ್ಲೂ ಕಳ್ಳತನ ಮಾಡಿದೆ ಅಂತ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದೆ ಕಾರಣಕ್ಕೆ ಯಾದಗಿರಿ ಪೊಲೀಸರು ಶಿವಮೊಗ್ಗಕ್ಕೆ ಹೋಗಿ ವಿಚಾರಣೆ ಮಾಡಿದ ಈ ಕಳ್ಳತನದಲ್ಲಿ ಅಜೀಜ್ ಸೇರಿ ಇನ್ನು ಐದು ಜನ ಭಾಗಿಯಾಗಿರೋದು ಗೊತ್ತಾಗಿದೆ.. ಇದೆ ಕಾರಣಕ್ಕೆ ಅಜೀಜ್ ಗೆ ಶಿವಮೊಗ್ಗ ಜೈಲಿನಲ್ಲೇ ಬಿಟ್ಟು ಇನ್ನುಳಿದ ಮಲ್ಲೇಶಿ, ಬಸವರಾಜ್ ಹಾಗೂ ಬಾಬಾಜಾನ್ ಗೆ ಅರೆಸ್ಟ್ ಮಾಡಿದ್ದಾರೆ. ಬಳಿಕ ಆರೋಪಿಗಳ ಬಳಿಯಿದ್ದ ಕಳ್ಳತನ ಮಾಡಿದ್ದ ಶ್ರೀಗಂಧದ ತುಂಡುಗಳನ್ನ ವಶಕ್ಕೆ ಪಡೆದಿದ್ದಾರೆ.
ಈ ಅಜೀಜ್ ಮತ್ತು ಉಳಿದವರು ಎಲ್ಲರೂ ಸಹ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.. ನಾಲ್ಕು ಮಂದಿಯನ್ನ ಅರೆಸ್ಟ್ ಮಾಡಿರುವ ಪೊಲೀಸರಿಗೆ ಇನ್ನಿಬ್ಬರು ಸಿಗದೆ ಎಸ್ಕೇಪ್ ಆಗಿದ್ದಾರೆ. ಅಜೀಜ್ ಮತ್ತು ಟೀಮ್ ಕೇವಲ ಶ್ರೀಗಂಧದ ಮರಗಳ ತುಂಡುಗಳನ್ನ ಕಳ್ಳತನ ಮಾಡುವ ಕೆಲಸ ಮಾಡುತ್ತೆ. ಯಾವುದೇ ಜಿಲ್ಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಕಚೇರಿಯಲ್ಲಿ ಶೇಖರಿಸಿಟ್ಟಿದ್ದನ್ನ ಗೊತ್ತಾದ್ರೆ ಸಾಕು ನಾಲ್ಕೈದು ದಿನಗಳು ಮೊದಲೇ ಆ ಜಿಲ್ಲೆಗೆ ಬಂದು ಪ್ಲಾನ್ ಮಾಡಿ ಕಳ್ಳತನ ಮಾಡುತ್ತೆ.
ಇದೆ ರೀತಿಯಲ್ಲಿ ಯಾದಗಿರಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶ್ರೀಗಂಧದ ಮರಗಳ ತುಂಡುಗಳನ್ನ ಶೇಖರಿಸಿಟ್ಟ ವಿಷಯ ಗೊತ್ತಾಗುತ್ತಿದ್ದ ಹಾಗೆ ಪ್ಲಾನ್ ಮಾಡಿಕೊಂಡು ಬಂದು ಕಳ್ಳತನ ಮಾಡಿದೆ. ಅಷ್ಟೇ ಅಲ್ದೆ ಪಕ್ಕದ ರಾಯಚೂರು ಜಿಲ್ಲೆಯಲ್ಲೂ ಇದೆ ಟೀಮ್ ಸುಮಾರು 600 ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನ ಕಳ್ಳತನ ಮಾಡಿದೆ. ಆರೋಪಗಳನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡುವ ರಾಯಚೂರಿನಲ್ಲೂ ಕಳ್ಳತನ ಮಾಡಿರುವ ವಿಷಯ ಹೇಳಿದ್ದಾರೆ.
ಇದೆ ಕಾರಣಕ್ಕೆ ರಾಯಚೂರಿನಲ್ಲಿ ಕಳ್ಳತನ ಆಗಿದ್ದ 35 ಕೆ.ಜಿ ಶ್ರೀಗಂಧದ ತುಂಡುಗಳು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಯಾದಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಿ ದಾಳಿ ಮಾಡಿ ಶ್ರೀಗಂಧದ ತುಂಡುಗಳನ್ನ ವಶಕ್ಕೆ ಪಡೆದಿದ್ರು ಅಂದ್ರೆ ಯಾದಗಿರಿ ತಾಲೂಕಿನ ಬಾಗಲಮಡು ಹಂದರಕಿ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ತಿಂಗಳುಗಳ ಹಿಂದೆ ಕಳ್ಳರು ಮರಗಳನ್ನ ಕಟ್ ಮಾಡಿ ತುಂಡುಗಳನ್ನ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ರು.
ಸರಿಯಾದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳ ಸಮೇತ ಶ್ರೀಗಂಧವನ್ನ ವಶಕ್ಕೆ ಪಡೆದಿದ್ರು. ವಶಕ್ಕೆ ಪಡೆದಿದ್ದ ಶ್ರೀಗಂಧವನ್ನ ಕಚೇರಿಯಲ್ಲಿ ಶೇಖರಿಸಿಟ್ಟಿದ್ರು. ಇದೆ ಶ್ರೀಗಂಧವನ್ನ ಕಳ್ಳರು ಕಳ್ಳತನ ಮಾಡಿದ್ರು. ಆದ್ರೆ ಕಳ್ಳತನ ನಡೆದ ಎರಡು ತಿಂಗಳಗಳ ಬಳಿಕ ಪೊಲೀಸರು ಕಳ್ಳತನ ಆಗಿದ್ದ ವಸ್ತುವಿನ ಜೊತೆ ಆರೋಪಿಗಳನ್ನ ಬಂಧಿಸಿದ್ದಾರೆ. ಒಟ್ನಲ್ಲಿ ಯಾದಗಿರಿ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದಿದ್ದ ಶ್ರೀಗಂಧದ ಮರಗಳ ತುಂಡುಗಳ ಕಳ್ಳತನ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಪೊಲೀಸರು ಕೊನೆಗೂ ಪ್ರಕರಣವನ್ನ ಭೇದಿಸಿ ಆರೋಪಿಗಳನ್ನ ಅಂದರ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ