ಗದಗ: ಮೆಣಸಿನಕಾಯಿ ತೋಟ ಕಾವಲು ಕಾಯುತ್ತಿದ್ದ ರೈತ ಕಾರ್ಮಿಕನನ್ನು ಕೊಂದು ರುಂಡ ಕದ್ದೊಯ್ದ ಹಂತಕರು

ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನಿನೊಂದರಲ್ಲಿ ಮೆಣಸಿನಕಾಯಿ ತೋಟದ ಕಾವಲುಗಾರನಾಗಿದ್ದ ರೈತ ಕಾರ್ಮಿಕ ಗುಡಿಸಲಲ್ಲಿ ಮಲಗಿದ್ದ ವೇಳೆ ಹಂತಕರು ಕೊಲೆ ಮಾಡಿ ರುಂಡ ಕದ್ದೊಯ್ದಿದ್ದಾರೆ. ರೈತ ಕಾರ್ಮಿಕನ ಭೀಕರ ಹತ್ಯೆಗೆ ಇಡೀ ಗದಗ ಜಿಲ್ಲೆ ರೈತರು ಬೆಚ್ಚಿಬಿದ್ದಿದ್ದಾರೆ.

ಗದಗ: ಮೆಣಸಿನಕಾಯಿ ತೋಟ ಕಾವಲು ಕಾಯುತ್ತಿದ್ದ ರೈತ ಕಾರ್ಮಿಕನನ್ನು ಕೊಂದು ರುಂಡ ಕದ್ದೊಯ್ದ ಹಂತಕರು
ಸಾಂದರ್ಭಿಕ ಚಿತ್ರ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on:Dec 09, 2023 | 2:45 PM

ಗದಗ, ಡಿ.09: ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿ ರುಂಡ ಕತ್ತರಿಸಿ ದುಷ್ಕರ್ಮಿಗಳು ಕದ್ದೊಯ್ದ (Murder) ಘಟನೆ ಗದಗ (Gadag) ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನಿನೊಂದರಲ್ಲಿ ನಡೆದಿದೆ. ಮೆಣಸಿನಕಾಯಿ ತೋಟದ ಕಾವಲುಗಾರನಾಗಿದ್ದ ರೈತ ಕಾರ್ಮಿಕನನ್ನು ಹಂತಕರು ಕೊಲೆ ಮಾಡಿ ರುಂಡ ಕದ್ದೊಯ್ದಿದ್ದಾರೆ.

ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಮೆಣಸಿನಕಾಯಿ ಬೆಳೆ ಕಾಯಲು ಇದ್ದ ವ್ಯಕ್ತಿಯನ್ನ ಮಾರಾಕಾಸ್ತ್ರಗಳಿಂದ ಕತ್ತು ಕತ್ತರಿಸಿ ರುಂಡದೊಂದಿಗೆ ಪರಾರಿಯಾಗಿದ್ದಾರೆ. ಕೊಲೆಗೀಡಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನಮಪ್ಪ ವಜ್ರದ (65) ‌ಎಂದು ತಿಳಿದು ಬಂದಿದೆ.

ಗುಡಿಸಲಿನಲ್ಲಿ ದೇಹ ಮಾತ್ರ ಇದ್ದು, ಬೆಳಿಗ್ಗೆ ಜಮೀನು ಮಾಲೀಕರು ಬಂದು ನೋಡಿದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭೀಕರ ಕೊಲೆಯಿಂದಾಗಿ ಸುತ್ತಮುತ್ತಲಿನ ರೈತರು ಬೆಚ್ಚಿ ಬಿದ್ದಿದ್ದಾರೆ. ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹಾವೇರಿ ಜಿಲ್ಲಾಸ್ಪತ್ರೆಗೆ ಬರುವ ನೂರಾರು ಜನರಿಗೆ ಪ್ರತಿ ದಿನ ಅನ್ನಸಂತರ್ಪಣೆ; ತಂದೆಯ ಸ್ಮರಣಾರ್ಥ ಬಡವರ ಹಸಿವು ನೀಗಿಸುತ್ತಿರುವ ಮಗ

ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯ ಬರ್ಬರ ಹತ್ಯೆ

ಇನ್ನು ಮತ್ತೊಂದೆಡೆ ಹಳೆ ವೈಷಮ್ಯದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದಲ್ಲಿ ಯೋಗೇಶ್​​ (34) ಎಂಬ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಪೈಂಟ್​​ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯೋಗೇಶ್​ನನ್ನು ತಡರಾತ್ರಿ ಕೊಲೆ ಮಾಡಲಾಗಿದ್ದು ಕೊಲೆಗೆ ಹಳೆ ವೈಷಮ್ಯ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಆರ್​ಎಸ್​​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಲೆ ಆರೋಪಿಗಳನ್ನು ಹುಡುಕಲಾಗುತ್ತಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:18 pm, Sat, 9 December 23