ಉತ್ತರ ಪ್ರದೇಶ: ಬರೋಬ್ಬರಿ 4 ಕೋಟಿ ರೂ. ವಿದ್ಯುತ್ ಬಿಲ್​ ನೋಡಿ ಬೆಚ್ಚಿಬಿದ್ದ ಮನೆ ಮಾಲೀಕ, ಜುಲೈ 24ರೊಳಗೆ ಕಟ್ಬೇಕಂತೆ!

|

Updated on: Jul 19, 2024 | 10:06 AM

ವಿದ್ಯುತ್​ ಬಿಲ್​ ನೋಡಿ ಮನೆ ಮಾಲೀಕ ಬೆಚ್ಚಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅವರ ಮನೆಗೆ ಬರೋಬ್ಬರಿ 4 ಕೋಟಿ ರೂ. ವಿದ್ಯುತ್ ಬಿಲ್ ಬಂದಿದ್ದು, ಅಚ್ಚರಿ ಜತೆಗೆ ಆತಂಕ ಉಂಟು ಂಆಡಿದೆ. ಜುಲೈ 24ರೊಳಗೆ ಮೊತ್ತವನ್ನು ತುಂಬಬೇಕು ಎನ್ನುವ ಎಸ್​ಎಂಎಸ್ ಕೂಡ ಬಂದಿತ್ತು.

ಉತ್ತರ ಪ್ರದೇಶ: ಬರೋಬ್ಬರಿ 4 ಕೋಟಿ ರೂ. ವಿದ್ಯುತ್ ಬಿಲ್​ ನೋಡಿ ಬೆಚ್ಚಿಬಿದ್ದ ಮನೆ ಮಾಲೀಕ, ಜುಲೈ 24ರೊಳಗೆ ಕಟ್ಬೇಕಂತೆ!
Follow us on

ಒಂದೊಮ್ಮೆ ಒಂದು ತಿಂಗಳು ವಿದ್ಯುತ್ ಬಿಲ್​ ಹೆಚ್ಚು ಬಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಬರಬಹುದು ಸಾವಿರ, ಎರಡು ಸಾವಿರ ಬೇಡ ಮೂರು ಸಾವಿರ, ಈ ಮನೆಯ ಮಾಲೀಕರಿಗೆ ಬರೋಬ್ಬರಿ 4 ಕೋಟಿ ರೂ. ಬಿಲ್​ ಬಂದಿದೆ. 4ರ ಮುಂದಿರುವ ಸೊನ್ನೆ ನೋಡಿ ಕುಸಿದುಕುಳಿತಿದ್ದಾರೆ. ಅಷ್ಟೇ ಅಲ್ಲದೆ ಜುಲೈ 24ರ ಒಳಗೆ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯವೂ ಎದುರಾಗಿತ್ತು. ನಿಜವಾಗಿಯೂ ಅವರು ಅಷ್ಟು ವಿದ್ಯುತ್ ಬಳಕೆ ಮಾಡಿದ್ದಾರಾ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದಕ್ಕೆ ವಿದ್ಯುತ್ ವಿತರಣಾ ಸಂಸ್ಥೆಯ ತಪ್ಪಾದ ಮೀಟರ್ ರೀಡಿಂಗ್​ ಕಾರಣವಾಗಿದೆ. ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಸೆಕ್ಟರ್​ನ ಮನೆ ಸಂಖ್ಯೆ ಸಿ-103ರ ನಿವಾಸಿ ಬಸಂತ್ ಶರ್ಮಾ ಅವರಿಗೆ ಗುರುವಾರ ವಿದ್ಯುತ್ ಕಂಪನಿಯಿಂದ ಎಸ್​ಎಂಎಸ್​ ಬಂದಿದ್ದು, ಏಪ್ರಿಲ್​ 9ರಿಂದ ಜುಲೈ 18ರವರೆಗಿನ ಮೂರು ತಿಂಗಳ ಬಿಲ್ 4,02,31,842.31 ಆಗಿತ್ತು.

ನಿಗದಿತ ದಿನಾಂಕದೊಳಗೆ ಪಾವತಿ ಮಾಡಿದರೆ, ಗ್ರಾಹಕರು ಒಟ್ಟು ಮೊತ್ತದ ಮೇಲೆ 2.8 ಲಕ್ಷ ರೂಪಾಯಿ ರಿಯಾಯಿತಿ ಪಡೆಯಬಹುದು ಎಂದು ಎಸ್‌ಎಂಎಸ್‌ನಲ್ಲಿ ಹೇಳಲಾಗಿತ್ತು. ಅಧಿಕ ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ. ಮನೆಯನ್ನು ಬಾಡಿಗೆ ಕೊಟ್ಟಿದ್ದೇನೆ, ಮನೆಯಿಂದ ಕೆಲಸ ಮಾಡುವ ಬಾಡಿಗೆದಾರ ಮೂಲಭೂತವಾಗಿ ಎಷ್ಟು ಬೇಕೋ ಅಷ್ಟು ಮಾತ್ರ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ, ನಾನು ಊರಿನಿಂದ ಹೊರಗಿರುವ ಕಾರಣ ಎಸ್‌ಎಂಎಸ್ ಬಂದ ತಕ್ಷಣ ನಾನು ಡಿಸ್ಕಾಂನ ಜೂನಿಯರ್ ಎಂಜಿನಿಯರ್‌ಗೆ ಕರೆ ಮಾಡಿದೆ. ಬಿಲ್‌ನಲ್ಲಿನ ದೋಷವನ್ನು ಸರಿಪಡಿಸಿ ನನಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಶರ್ಮಾ ಹೇಳಿದ್ದಾರೆ.

ಮತ್ತಷ್ಟು ಓದಿ: Shocking News: ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್; ಶಾಕ್ ಆದ ಮಾಲೀಕ

ಶರ್ಮಾ ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಧಿಕೃತ ತರಬೇತಿಗಾಗಿ ಪ್ರಸ್ತುತ ಶಿಮ್ಲಾದಲ್ಲಿದ್ದಾರೆ. ಪತ್ನಿ ಪ್ರಿಯಾಂಕಾ ಹೆಸರಿನಲ್ಲಿ ಬಿಲ್ ನೀಡಲಾಗಿದೆ ಎಂದು ಹೇಳಿದರು. ಏಪ್ರಿಲ್ 8 ರಂದು 85,936 ಯೂನಿಟ್‌ಗಳ ಕೊನೆಯ ಮೀಟರ್ ರೀಡಿಂಗ್ ತೆಗೆದುಕೊಳ್ಳಲಾಗಿದೆ ಮತ್ತು ಜೂನ್ 22 ರಂದು 1,476 ರೂ ಪಾವತಿಸಲಾಗಿದೆ ಎಂದು ಬಿಲ್ ತೋರಿಸುತ್ತದೆ.

ಜುಲೈ 18 ರಂದು ತೆಗೆದುಕೊಂಡ ಪ್ರಸ್ತುತ ಮೀಟರ್ ರೀಡಿಂಗ್ 90,144 ಯುನಿಟ್ ಆಗಿದೆ. ಇದು ಬಾಕಿ ಇರುವ ಮೊತ್ತವನ್ನು 4.02 ಕೋಟಿ ರೂಪಾಯಿ ಎಂದು ಹೇಳುತ್ತಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ನಂತರ ಲೆಕ್ಕ ಹಾಕಿದ ನಿವ್ವಳ ಮೊತ್ತವು 3.98 ಕೋಟಿ ರೂಪಾಯಿ ಮತ್ತು ಪಾವತಿಸಬೇಕಾದ ಮೊತ್ತವು 3.75 ಲಕ್ಷ ರೂಪಾಯಿ.
ವಿದ್ಯುತ್ ಇಲಾಖೆ ದೂರಿನ ಬಗ್ಗೆ ತಕ್ಷಣ ಗಮನಹರಿಸಿದೆ ಎಂದು ಕ್ಷೇತ್ರದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ಶಿವಂ ತ್ರಿಪಾಠಿ ತಿಳಿಸಿದ್ದಾರೆ.

ಈ ವೇಳೆ ಮೀಟರ್ ರೀಡಿಂಗ್ ಸರಿಯಾಗಿ ತೆಗೆದುಕೊಂಡಿಲ್ಲ. ಈ ವಿಷಯವನ್ನು ಕ್ಷೇತ್ರದ ಉಪವಿಭಾಗಾಧಿಕಾರಿ (ಎಸ್‌ಡಿಒ) ಗಮನಕ್ಕೆ ತರಲಾಗಿದೆ. ಹೊಸ ರೀಡಿಂಗ್ ತೆಗೆದುಕೊಂಡು ಹೊಸ ಬಿಲ್ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದು ಮಾಲೀಕ ನಿಟ್ಟುಸಿರು ಬಿಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ