ಮೊಬೈಲ್ ಗೇಮ್ನಲ್ಲಿ ಮೂರು ಬಾರಿ ಸೋತಿದ್ದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ಬ್ಲೇಡ್ನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು ಕಟಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆರೆಂಗ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸೌಮ್ಯ ರಂಜನ್ ನಾಯಕ್ ಎಂದು ಗುರುತಿಸಲಾದ ವ್ಯಕ್ತಿ ಮೊಬೈಲ್ ಗೇಮ್ ಆಡುತ್ತಿದ್ದರು ಮತ್ತು ಅವರು ಮೂರು ಬಾರಿ ಸೋತಿದ್ದರು, ನಂತರ ಅವನು ತನ್ನ ಕತ್ತು ಸೀಳಿಕೊಂಡರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ಪೋಷಕರು ಅವರನ್ನು ಅಂಗುಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಮೊದಲು ಬ್ಲೂ ವೇಲ್ ಎಂಬ ಮಾರಣಾಂತಿಕ ಮೊಬೈಲ್ ಗೇಮ್ನಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಟವನ್ನು ಆಟವನ್ನಾಗಿ ಮಾತ್ರ ಪರಿಗಣಿಸಬೇಕು ತೀರಾ ಮನಸ್ಸಿಗೆ ತೆಗೆದುಕೊಂಡರೆ ಇಡೀ ಜೀವನವೇ ಹಾಳಾಗುವುದು ಎಂಬುದನ್ನು ಮರೆಯಬಾರದು.
ಮತ್ತಷ್ಟು ಓದಿ: ಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5
ಮಗಳ ಮೊಬೈಲ್ ಗೇಮ್ ಚಟದಿಂದ 52 ಲಕ್ಷ ರೂ. ಕಳೆದುಕೊಂಡ ಅಮ್ಮ
ಚೀನಾದಲ್ಲಿ (China) 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್‌ಗಾಗಿ (online game) 449,500 ಯುವಾನ್ (ಅಂದಾಜು ರೂ 52,19,809) ಖರ್ಚು ಮಾಡಿದ್ದು ಅಮ್ಮನ ಬ್ಯಾಂಕ್ ಖಾತೆಯನ್ನೇ (Bank Account) ಖಾಲಿ ಮಾಡಿಬಿಟ್ಟಿದ್ದಾಳೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ನ ಪ್ರಕಾರ, ಶಾಲೆಯ ಸಮಯದಲ್ಲಿ ಆಕೆಯ ಅತಿಯಾದ ಫೋನ್ ಬಳಕೆಯನ್ನು ಬಾಲಕಿಯ ಶಿಕ್ಷಕರು ಗಮನಿಸಿದ್ದರು. ಈ ಬಾಲಕಿ ಪೇ-ಟು-ಪ್ಲೇ ಆಟವಾಡುತ್ತಿರಬಹುದು ಎಂದು ಶಂಕಿಸಿ ಆತಂಕಗೊಂಡ ಶಿಕ್ಷಕಿ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ತಾಯಿ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಮಗಳು ಉಳಿತಾಯದ ಹಣವನ್ನು ಪೋಲು ಮಾಡಿರುವ ಸಂಗತಿ ಗೊತ್ತಾಗಿದೆ.
ವಾಂಗ್ ಎಂಬ ಹುಡುಗಿಯ ತಾಯಿ ತನ್ನ ಬ್ಯಾಂಕ್ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಉಳಿದದ್ದು 0.5 ಯುವಾನ್ (ಸುಮಾರು ರೂ. 5).ಹಣ ಕಳೆದುಕೊಂಡು ಆಘಾತಕ್ಕೊಳಗಾದ ಆ ತಾಯಿ, ಮಗಳು ಯಾವ ರೀತಿಯಲ್ಲಿ ಹಣ ಖರ್ಚು ಮಾಡಿದ್ದಾಳೆ ಎಂದು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪುಟಗಳನ್ನು ತೋರಿಸಿರುವ ವಿಡಿಯೊ ವೈರಲ್ ಆಗಿದೆ .
ಹುಡುಗಿಯ ತಂದೆ ಈ ಬಗ್ಗೆ ಮಗಳಲ್ಲಿ ವಿಚಾರಿಸಿದಾಗ ತಾನು ಆಟಗಳನ್ನು ಖರೀದಿಸಲು 120,000 ಯುವಾನ್ (ಅಂದಾಜು ರೂ 13,93,828) ಮತ್ತು ಹೆಚ್ಚುವರಿ 210,000 ಯುವಾನ್ (ಸುಮಾರು ರೂ 24,39,340) ಖರ್ಚು ಮಾಡಿದ್ದನ್ನು ಆಕೆ ಒಪ್ಪಿಕೊಂಡಳು. ಇದಲ್ಲದೆ, ಅವಳು ತನ್ನ ಕನಿಷ್ಠ 10 ಸಹಪಾಠಿಗಳಿಗೆ ಆಟಗಳನ್ನು ಖರೀದಿಸಲು ಮತ್ತೊಂದು 100,000 ಯುವಾನ್ (ಸುಮಾರು 11,61,590 ರೂ.) ಬಳಸಿರುವುದಾಗಿ ಹೇಳಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:48 am, Sun, 18 February 24