ಹೈದರಾಬಾದ್: ತೆಲುಗಿನ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಸ್. ಆರ್. ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಮಧುರನಗರದಲ್ಲಿ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 8 ವರ್ಷಗಳಿಂದ ಸೀರಿಯಲ್ಗಳಲ್ಲಿ ನಟಿಸುತ್ತಿದ್ದ ನಟಿ ಶ್ರಾವಣಿ, ಮಾ ಟೀವಿಯಲ್ಲಿ ಲೀಡ್ ಆಕ್ಟ್ರೆಸ್ ಆಗಿದ್ದಳು. ಈ ಮಧ್ಯೆ, ಟಿಮ್ ಟಾಕ್ ಮೂಲಕ ದೇವರಾಜ್ ರೆಡ್ಡಿ ಎನ್ನುವಾತ ಪರಿಚಯವಾಗಿದ್ದ.
ಕಾಲಾಂತರದಲ್ಲಿ ಅವನ ಕಿರುಕುಳ ಹೆಚ್ಚಾಗಿದೆ. ಅದನ್ನ ಸಹಿಸಲಾಗದೆ ನಟಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ದೇವರಾಜ್ ರೆಡ್ಡಿ ವಿರುದ್ದ ಶ್ರಾವಣಿ ಕುಟುಂಬಸ್ಥರು ಎಸ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Published On - 9:40 am, Wed, 9 September 20