ಐವರು ಮಕ್ಕಳಿದ್ದರೂ ಈ ತಾಯಿ ಅನಾಥೆ.. ಕೊರೊನಾ ಬಂತು ಅಂತಾ ಊರ ಹೊರಗೆ ಶಿಫ್ಟ್ ಮಾಡಿದ್ರು
ಹೈದರಾಬಾದ್: ಮಹಾಮಾರಿ ಕೊರೊನಾದಿಂದ ಎಲ್ಲವೂ ಬದಲಾಗಿದೆ. ಹಣ ಇದ್ದವರಿಗೆ ಬೆಡ್ಸಿಗದೆ ಜೀವದ ಬೆಲೆ ಏನು ಎಂಬುದನ್ನು ಅರ್ಥ ಮಾಡಿಸಿದ್ರೇ.. ಸಾಮಾನ್ಯರಿಗೆ ಒಂದು ಹೊತ್ತಿನ ಊಟವೂ ಇಲ್ಲದೆ ಪರಿತಪಿಸುವಂತಹ ಸಮಯವನ್ನೇ ನಿರ್ಮಾಣ ಮಾಡಿದೆ. ಆದ್ರೆ ಇಲ್ಲಿ ಹೇಳಲು ಹೊರಟಿರೋದು ಒಬ್ಬ ಬಡ ತಾಯಿಯ ಕಥೆ.. ತಾಯಿಯೇ ದೇವರು. ತಾಯಿ ತನ್ನ ಕಷ್ಟವನ್ನು ಮಕ್ಕಳಿಗೆ ಗೊತ್ತಾಗದಂತೆ ಮಕ್ಕಳನ್ನ ಪ್ರೀತಿಯಿಂದ ಬೆಳೆಸ್ತಾಳೆ. ಆದರೆ ಅದೇ ಮಕ್ಕಳು ತಾಯಿಗೆ ಹೆಚ್ಚಿನ ನೋವು ಕೊಡ್ತಾರೆ. ಹೌದು ತೆಲಂಗಾಣದ ಪೀಚರ ಹಳ್ಳಿಯಲ್ಲಿ 82 ವರ್ಷದ ವೃದ್ಧೆಗೆ […]
ಹೈದರಾಬಾದ್: ಮಹಾಮಾರಿ ಕೊರೊನಾದಿಂದ ಎಲ್ಲವೂ ಬದಲಾಗಿದೆ. ಹಣ ಇದ್ದವರಿಗೆ ಬೆಡ್ಸಿಗದೆ ಜೀವದ ಬೆಲೆ ಏನು ಎಂಬುದನ್ನು ಅರ್ಥ ಮಾಡಿಸಿದ್ರೇ.. ಸಾಮಾನ್ಯರಿಗೆ ಒಂದು ಹೊತ್ತಿನ ಊಟವೂ ಇಲ್ಲದೆ ಪರಿತಪಿಸುವಂತಹ ಸಮಯವನ್ನೇ ನಿರ್ಮಾಣ ಮಾಡಿದೆ. ಆದ್ರೆ ಇಲ್ಲಿ ಹೇಳಲು ಹೊರಟಿರೋದು ಒಬ್ಬ ಬಡ ತಾಯಿಯ ಕಥೆ..
ತಾಯಿಯೇ ದೇವರು. ತಾಯಿ ತನ್ನ ಕಷ್ಟವನ್ನು ಮಕ್ಕಳಿಗೆ ಗೊತ್ತಾಗದಂತೆ ಮಕ್ಕಳನ್ನ ಪ್ರೀತಿಯಿಂದ ಬೆಳೆಸ್ತಾಳೆ. ಆದರೆ ಅದೇ ಮಕ್ಕಳು ತಾಯಿಗೆ ಹೆಚ್ಚಿನ ನೋವು ಕೊಡ್ತಾರೆ. ಹೌದು ತೆಲಂಗಾಣದ ಪೀಚರ ಹಳ್ಳಿಯಲ್ಲಿ 82 ವರ್ಷದ ವೃದ್ಧೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ವೃದ್ಧೆಯ ಮಕ್ಕಳು ಆಕೆಯನ್ನ ಮನೆಯಿಂದ ಹೊರಗೆ ಕಳಿಸಿದ್ದಾರೆ. ವೃದ್ಧ ತಾಯಿ ಎಂದೂ ನೋಡದೆ ಅಮಾನವೀಯವಾಗಿ ವರ್ತಿಸಿದ್ದಾರೆ.
ವೃದ್ಧೆಗೆ ನಾಲ್ಕು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಈ ಪೈಕಿ ಒಬ್ಬ ಮಗ ಮೃತಪಟ್ಟಿದ್ದಾನೆ. ಓರ್ವ ಮಗನ ಹೆಸರಲ್ಲಿ ಎರಡು ಮನೆಗಳಿವೆ. ಆದರೆ ತಾಯಿಗೆ ಕೊರೊನಾ ಇರುವುದು ತಿಳಿಯುತ್ತಿದ್ದಂತೆ ಮನೆಯಲ್ಲಿ ಜಾಗವಿಲ್ಲ ಎಂದು ಕೃಷಿ ಭೂಮಿಗೆ ಸ್ಥಳಾಂತರಿಸಿದ್ದಾರೆ. ಈಗಾಗಲೇ ಕುಟುಂಬದಲ್ಲಿ ಐವರಿಗೆ ಕೊರೊನಾ ದೃಢವಾಗಿದೆ.
ಆದರೆ ಈ ತಾಯಿಗೆ ಮಾತ್ರ ಈ ಶಿಕ್ಷೆ. ವಯಸ್ಸಾದ ಸಮಯದಲ್ಲಿ ನೋಡಿಕೊಳ್ಳಬೇಕಾದ ಮಕ್ಕಳೇ ಹೀಗೆ ಬೀದಿ ಪಾಲು ಮಾಡಿದ್ದಾರೆ. ಒಬ್ಬ ಮಗ ತಾಯಿಯನ್ನು ಕೃಷಿ ಭೂಮಿಯಲ್ಲಿ ಚಿಕ್ಕದಾಗಿ ಬ್ಯಾನರ್ನಲ್ಲಿ ನಿರ್ಮಿಸಿದ ಜಾಗದಲ್ಲಿ ಮಲಗಲು ಬಿಟ್ಟು ತಾನು ಕಾರಿನಲ್ಲಿ ಹೋಗಿ ಮಲಗುವಂತಹ ವ್ಯವಸ್ಥೆಯನ್ನು ಮಾಡಿದ್ದಾನೆ.
ಕುಟುಂಬಸ್ಥರಿಗೆ ಮನವೊಲಿಸಿದ ಅಧಿಕಾರಿಗಳು ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಕುಟುಂಬಸ್ಥರನ್ನು ಸೇರಿಸಿ ಮಾತನಾಡಿದ್ದಾರೆ. ಈ ವೇಳೆ ವೃದ್ಧೆಯ ಎರಡನೆಯ ಮಗ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿಯೂ ಮತ್ತು ಮೂರನೆಯ ಮಗ ಕೊರೊನಾ ಚಿಕಿತ್ಸೆಗೆ ತಗುಲುವ ಎಲ್ಲಾ ಖರ್ಚುಗಳನ್ನು ಭರಿಸುದಾಗಿಯೂ ಕುಟುಂಬಸ್ಥರ ಜೊತೆ ಮಾತನಾಡಿ, ವ್ಯವಸ್ಥೆ ಮಾಡಿದ ನಂತರ ASI ಉಮಾಕಾಂತ್ ತಿಳಿಸಿದ್ದಾರೆ.