ಮಣಿಪುರದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಡಾ ಮತ್ತು ಕಾಂಗ್‌ಚುಪ್ ನಡುವಿನ ಹಳ್ಳಿಯಲ್ಲಿ ಗುಂಡು ಹಾರಿಸಲಾಗಿದೆ.ಗ್ರಾಮಸ್ಥರ ಪ್ರಕಾರ, ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಸ್ಥಳೀಯ ಮಹಿಳೆ ಸೇರಿದಂತೆ ಹತ್ತು ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಏಳು ಮಂದಿಯನ್ನು ಲ್ಯಾಂಫೆಲ್‌ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಮೂವರು ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕಾಂಗ್‌ಚುಪ್‌ನ ಗ್ರಾಮಸ್ಥರ ಪ್ರಕಾರ, ಶಸ್ತ್ರಸಜ್ಜಿತ ಉಗ್ರರು ಕಾಂಗ್‌ಚುಪ್ ಚಿಂಗ್‌ಖಾಂಗ್ ಪ್ರದೇಶದ ಸಮೀಪದಲ್ಲಿರುವ ಮೈತೆಯ್ ಗ್ರಾಮಗಳ ಕಡೆಗೆ ಗುಂಡು ಹಾರಿಸಿದರು.
ಮತ್ತಷ್ಟು ಓದಿ: ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿ ಸಿಸಿಬಿ ಬಲೆಗೆ
ಇಂಫಾಲ್ ಪಶ್ಚಿಮದ ಸಿಂಗ್ಡಾ ಕಡಂಗ್‌ಬಂಡ್ ಪ್ರದೇಶದ ಸಮೀಪವಿರುವ ಗ್ರಾಮಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ವರದಿ ತಿಳಿಸಿದೆ.
ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ ಮತ್ತು ಗುಂಡಿನ ಕಾಳಗ ಕೆಲವು ಗಂಟೆಗಳ ಕಾಲ ಮುಂದುವರೆಯಿತು. ಈ ಸ್ಥಳದಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕೌಟ್ರುಕ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ, ವಿವರಗಳನ್ನು ನಿರೀಕ್ಷಿಸಲಾಗಿದೆ. ಕಾಂಪೋಕ್ಪಿ ಜಿಲ್ಲೆಯ ಸಮೀಪದ ಸೆಕ್ಮೈ ಪ್ರದೇಶದಿಂದ ಭಾನುವಾರ ಮಧ್ಯಾಹ್ನ ಇಬ್ಬರು ಯುವಕರು ನಾಪತ್ತೆಯಾದ ನಂತರ ಇಂಫಾಲ್ ಕಣಿವೆಯಲ್ಲಿ ಉದ್ವಿಗ್ನತೆ ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ