ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಗುಂಡಿನ ದಾಳಿ, ಓರ್ವ ಸಾವು

ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ರಾಜ್ಯದ ಕಾಂಗ್‌ಪೋಕ್ಪಿ, ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳ ಗಡಿ ಪ್ರದೇಶಗಳ ಹಲವಾರು ಸ್ಥಳಗಳಲ್ಲಿ ಮೈಥಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮತ್ತು ಕುಕಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಗುಂಡಿನ ದಾಳಿ ನಡೆದಿದೆ. ಅದರಲ್ಲಿ ಓರ್ವ ಪ್ರಾಣ ಕಳೆದುಕೊಂಡಿದ್ದಾರೆ.

ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಗುಂಡಿನ ದಾಳಿ, ಓರ್ವ ಸಾವು
ಮಣಿಪುರ ಹಿಂಸಾಚಾರ
Image Credit source: Indian Express

Updated on: Feb 15, 2024 | 9:38 AM

ಮಣಿಪುರದ ಇಂಫಾಲ್(Imphal) ಪೂರ್ವ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಗ್ರಾಮಸ್ಥರೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಂಗಳವಾರ ಎರಡು ಸಮುದಾಯಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 25 ವರ್ಷದ ಗ್ರಾಮಸ್ಥರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಸಗೋಲ್ಸೆಮ್ ಲೋಯಾ ಎಂದು ಗುರುತಿಸಲಾಗಿದೆ.ಅವರನ್ನು ಇಂಫಾಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿಯಿಂದ, ಪುಖಾವೊ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಗುಂಡಿನ ಘಟನೆಗಳು ವರದಿಯಾಗುತ್ತಿವೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 3 ಜನ ಸಾವು

ಇಂಫಾಲ್ ಪೂರ್ವ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಮಾಜವಿರೋಧಿಗಳು ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಅಧಿಕಾರಿಗಳು ಭದ್ರತಾ ಸಿಬ್ಬಂದಿಯೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ತೆರಳಿದ್ದಾರೆ.

ಮೂಲಗಳ ಪ್ರಕಾರ, ಇಂಫಾಲ್ ಪೂರ್ವ ಜಿಲ್ಲೆಯ ಗಡಿ ಪ್ರದೇಶಗಳಾದ ಟ್ವಿಚಿನ್, ಫಾಮೋಲ್, ಸಿಮೋಲ್ ಗ್ರಾಮ (ಕುಕಿ ಗ್ರಾಮ) ಮತ್ತು ಥಮ್ನಾಪೊಕ್ಪಿ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಮಧ್ಯಾಹ್ನ 3 ಗಂಟೆಗೆ, ಸಿಮೋಲ್ ಗ್ರಾಮದಲ್ಲಿ ನಿಯೋಜಿಸಲಾದ 20 ಜಾಟ್ ರೆಜಿಮೆಂಟ್ ಮಾರ್ಟರ್ ಶೆಲ್‌ಗಳನ್ನು ಹಾರಿಸುವ ಮೂಲಕ ಮಧ್ಯಪ್ರವೇಶಿಸಿತು.

ನಾಲ್ಕು ಗಂಟೆ ಸುಮಾರಿಗೆ ಗುಂಡಿನ ದಾಳಿ ನಿಂತಿತು. ಮೂಲಗಳ ಪ್ರಕಾರ, ಗುಂಡಿನ ದಾಳಿಯಲ್ಲಿ 20 ಜಾಟ್ ರೆಜಿಮೆಂಟ್‌ನ ಅಧಿಕಾರಿ ಗಾಯಗೊಂಡಿದ್ದಾರೆ. ಇದಾದ ನಂತರ ಭದ್ರತಾ ಪಡೆಗಳು ನೊಂಗಡಾ ಪ್ರದೇಶಕ್ಕೆ ಬಂದು ವಾಹನಗಳ ಶೋಧ ಕಾರ್ಯ ಆರಂಭಿಸಿದವು. ಗುಂಡಿನ ದಾಳಿಯ ನಂತರ, ಸೇನೆಯು ನೋಂಗ್ರೆಲ್ ಸೇತುವೆಯ ಮೇಲೆ ವಾಹನಗಳ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.