Mann Ki Baat: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಯಲ್ಲಿ ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್(Mann Ki baat)​ನಲ್ಲಿ ಹೇಳಿದ್ದಾರೆ. ಪ್ರತಿಷ್ಠಿತ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಜೊತೆಗೆ ಸಂಗೀತವನ್ನು ಕೂಡ ಆರಾಧಿಸಲಾಗುತ್ತದೆ.

Mann Ki Baat: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ
ನರೇಂದ್ರ ಮೋದಿ

Updated on: Dec 28, 2025 | 12:26 PM

ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಯಲ್ಲಿ ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್(Mann Ki baat)​ನಲ್ಲಿ ಹೇಳಿದ್ದಾರೆ. ಪ್ರತಿಷ್ಠಿತ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಜೊತೆಗೆ ಸಂಗೀತವನ್ನು ಕೂಡ ಆರಾಧಿಸಲಾಗುತ್ತದೆ. ವಿಜ್ಞಾನದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಸಲಾಗುತ್ತದೆ. ಐಐಎಸ್ಸಿಯಲ್ಲಿ ವಿಜ್ಞಾನ ಮತ್ತು ಸಂಗೀತ ಹೇಗೆ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.

2025 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಹಲವು ಕ್ಷಣಗಳನ್ನು ನಮಗೆ ನೀಡಿದೆ. ರಾಷ್ಟ್ರೀಯ ಭದ್ರತೆಯಿಂದ ಕ್ರೀಡಾ ಕ್ಷೇತ್ರದವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ, ಭಾರತವು ಎಲ್ಲೆಡೆ ಬಲವಾದ ಛಾಪು ಮೂಡಿಸಿದೆ.

ದುಬೈ ಜನತೆಗೆ ಕನ್ನಡದ ಒಲವು
ದುಬೈನಲ್ಲಿ ವಾಸಿಸುವ ಕನ್ನಡ ಕುಟುಂಬಗಳ ಜನರ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೂಡಿತ್ತು. ತಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಆದರೆ ತಮ್ಮ ಭಾಷೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿಯೇ ಕನ್ನಡ ಪಾಠಶಾಲೆ ಹುಟ್ಟಿದೆ. ಮಕ್ಕಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಕಲಿಸಲಾಗುತ್ತದೆ.

ಆಪರೇಷನ್ ಸಿಂಧೂರ್

ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ವರ್ಷ ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದಿನ ಭಾರತ ತನ್ನ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಡೀ ಜಗತ್ತು ಕಂಡಿತ್ತು. ವಂದೇ ಮಾತರಂ 150 ವರ್ಷಗಳನ್ನು ಪೂರೈಸಿದಾಗಲೂ ಅದೇ ಭಾವನೆ ಕಂಡುಬಂದಿತ್ತು.

ಕ್ರಿಕೆಟ್

ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರೆ, ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಭಾರತದ ಹೆಣ್ಣುಮಕ್ಕಳು ಮಹಿಳಾ ಅಂಧರ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಏಷ್ಯಾ ಕಪ್ ಟಿ20ಯಲ್ಲೂ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಿತು ಎಂದು ಹೇಳಿದರು.

ತಮಿಳು ಕರಕಲಂ

ಈ ವರ್ಷ, ವಾರಾಣಸಿಯಲ್ಲಿ ನಡೆದ ‘ಕಾಶಿ ತಮಿಳು ಸಮಾಗಮ’ ಸಂದರ್ಭದಲ್ಲಿ, ತಮಿಳು ಕಲಿಕೆಗೆ ವಿಶೇಷ ಒತ್ತು ನೀಡಲಾಯಿತು. ‘ತಮಿಳು ಕಲಿಯಿರಿ – ತಮಿಳು ಕರಕಲಂ’ ಎಂಬ ವಿಷಯದ ಅಡಿಯಲ್ಲಿ, ವಾರಣಾಸಿಯ 50 ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಲಾಯಿತು. ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಇಂದು, ದೇಶದ ಇತರ ಭಾಗಗಳಲ್ಲಿ, ಯುವಕರು ಮತ್ತು ಮಕ್ಕಳಲ್ಲಿ ತಮಿಳು ಕಡೆಗೆ ಹೊಸ ಆಕರ್ಷಣೆ ಕಾಣುತ್ತಿದೆ ಎಂದು ನನಗೆ ಸಂತೋಷವಾಗಿದೆ. ಇದು ಭಾಷೆಯ ಶಕ್ತಿ. ಇದು ಭಾರತದ ಏಕತೆ ಎಂದರು.

ಮತ್ತಷ್ಟು ಓದಿ: ದಕ್ಷಿಣ ಕನ್ನಡ ಹಾಗೂ ತುಮಕೂರಿನ ಜೇನುತುಪ್ಪದ ಸ್ವಾದವನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ಮುಂದಿನ ತಿಂಗಳು 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುವುದು. ಅದೇ ದಿನ ಯುವ ನಾಯಕರ ಸಂವಾದವನ್ನು ಸಹ ಆಯೋಜಿಸಲಾಗುವುದು. ಭಾರತ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿಯೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ.

ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯರಾದರು. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಉಪಕ್ರಮಗಳು 2025 ಅನ್ನು ವಿಶೇಷವಾಗಿಸಿದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:58 am, Sun, 28 December 25