ಮುಂಜಾನೆ ಬಿಹಾರದ ಚೌರಾ ರೈಲ್ವೆ ಸ್ಟೇಶನ್​​ಗೆ ಮುತ್ತಿಗೆ ಹಾಕಿದ್ದ ಮಾವೋವಾದಿಗಳು; ಸುಮಾರು 2 ತಾಸು ರೈಲು ಸಂಚಾರ ಬಂದ್​

| Updated By: Lakshmi Hegde

Updated on: Jul 31, 2021 | 12:11 PM

ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್​ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್​ ಮಾಸ್ಟರ್​ ಬಿನಯ್​ ಕುಮಾರ್​ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್​ ಸಿಗ್ನಲ್​ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು ಎಂದು ಬೆದರಿಕೆ ಹಾಕಿದ.

ಮುಂಜಾನೆ ಬಿಹಾರದ ಚೌರಾ ರೈಲ್ವೆ ಸ್ಟೇಶನ್​​ಗೆ ಮುತ್ತಿಗೆ ಹಾಕಿದ್ದ ಮಾವೋವಾದಿಗಳು; ಸುಮಾರು 2 ತಾಸು ರೈಲು ಸಂಚಾರ ಬಂದ್​
ಬಿಹಾರ ರೈಲ್ವೆ ಸ್ಟೇಶನ್​
Follow us on

ಬಿಹಾರ (Bihar)ದ ಜಮುಯಿಯ ಚೌರಾ ರೈಲ್ವೆ ಸ್ಟೇಶನ್ (Railway Station)​​ನ್ನು ಇಂದು ಬೆಳಗ್ಗೆ ಸುಮಾರು 2 ತಾಸುಗಳ ಕಾಲ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕಾರಣ, ದೆಹಲಿ-ಹೌರಾಹ್​ ಮಾರ್ಗದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹತ್ಯೆಯಾದ ತಮ್ಮ ಒಡನಾಡಿಗಳ ಸ್ಮರಣಾರ್ಥ ಮಾವೋವಾದಿಗಳು ಇಲ್ಲಿ ಬಂದ್​ ನಡೆಸುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಬಂದ್​ನ ನಾಲ್ಕನೇ ದಿನ ರೈಲ್ವೆ ಸ್ಟೇಶನ್​ನ್ನು ಅವರು ಆಕ್ರಮಿಸಿಕೊಂಡಿದ್ದರು.

ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್​ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್​ ಮಾಸ್ಟರ್​ ಬಿನಯ್​ ಕುಮಾರ್​ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್​ ಸಿಗ್ನಲ್​ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು. ರೈಲುಗಳು ಮುಂದೆ ಚಲಿಸುವಂತಿಲ್ಲ. ಹಾಗೊಮ್ಮೆ ನಮ್ಮ ಮಾತನ್ನು ಮೀರಿದರೆ ಖಂಡಿತ ರೈಲ್ವೇ ಸ್ಟೇಶನ್​ನ್ನು ಸ್ಫೋಟಿಸುತ್ತೇವೆ ಎಂದು ಬೆದರಿಕೆ ಹಾಕಿದ. ಹಾಗಾಗಿ ರೈಲು ಸಂಚಾರ ತಡೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸ್ಟೇಶನ್​ಗೆ ತಾವು ಮುತ್ತಿಗೆ ಹಾಕಿರುವ ಬಗ್ಗೆ ನಿಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಬಿನಯ್​ ಕುಮಾರ್​ಗೆ ಹೇಳಿದರು. ಅಷ್ಟೇ ಅಲ್ಲ, ತಾವೇ ಮೈಕ್​ ಹಿಡಿದು, ಪ್ರಯಾಣಿಕರ ಬಳಿ, ನೀವೆಲ್ಲ ರೈಲಿನಲ್ಲಿಯೇ ಕುಳಿತುಕೊಂಡಿರಬೇಕು. ಯಾವ ಕಾರಣಕ್ಕೂ ಕೆಳಕ್ಕೆ ಇಳಿಯುವಂತಿಲ್ಲ ಎಂದೂ ಹೇಳಿದರು. ಅಷ್ಟರಲ್ಲಿ ಜಮುಯಿ ಎಸ್​ಪಿ ಪ್ರಮೋದ್​ ಕುಮಾರ್ ಮಂಡಲ್​ ಮತ್ತು ಪ್ಯಾರಾಮಿಲಿಟರಿ ಪಡೆಗಳು ಸ್ಥಳಕ್ಕೆ ಆಗಮಿಸಿದವು. ಮಾವೋವಾದಿಗಳು ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕರೆಸಿ, ಹೊಂಚು ಹಾಕಿ ದಾಳಿ ನಡೆಸಲು ಹೀಗೆಲ್ಲ ಪ್ಲ್ಯಾನ್​ ಮಾಡಿದ್ದರು ಎಂದು ಸಿಆರ್​​ಪಿಎಫ್​ ಅಧಿಕಾರಿಗಳು ಹೇಳಿದ್ದಾರೆ.

ಮಾವೋವಾದಿಗಳ ಮುತ್ತಿಗೆಯಿಂದ ಮುಂಜಾನೆ 3.20ರಿಂದ 5.30ರವರೆಗೆ ರೈಲು ಸಂಚಾರಗಳೆಲ್ಲ ಸ್ಥಗಿತಗೊಂಡಿದ್ದವು. ನಂತರ ಸ್ಫೋಟಕಗಳನ್ನೇನಾದರೂ ಇಡಲಾಗಿದೆಯಾ ಎಂದು ಹಳಿಗಳನ್ನೆಲ್ಲ ಪರಿಶೀಲನೆ ಮಾಡಲಾಯಿತು. 5.30ರ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ:ನೆರೆ ಸಂತ್ರಸ್ತರ ಕರೆ ಬಂದರೆ ಫೋನ್ ಎಸೆಯಬೇಕಂತ ಅನಿಸುತ್ತೆ; ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿಯ ಅಸಡ್ಡೆ ಮಾತುಗಳು ಫುಲ್ ವೈರಲ್

Maoists take over Chaura railway station in Bihar