Pulwama Encounter: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

Jammu Kashmir Encounter: ಜೈಷ್ ಸಂಘಟನೆಯ ಜೊತೆ ಮಾತ್ರವಲ್ಲದೆ ತಾಲಿಬಾನ್​ ಜೊತೆಗೂ ಅದ್ನಾನ್ ಅಲಿಯಾಸ್ ಲಂಬೂ​ ಸಂಪರ್ಕದಲ್ಲಿದ್ದ. 2019ರ ಪುಲ್ವಾಮಾ ದಾಳಿಯಲ್ಲೂ ಭಾಗಿಯಾಗಿದ್ದ ಆತನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.

Pulwama Encounter: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ
ಕಾಶ್ಮೀರದಲ್ಲಿ ಹತನಾದ ಜೈಷ್ ಸಂಘಟನೆಯ ಉಗ್ರ
TV9kannada Web Team

| Edited By: Sushma Chakre

Jul 31, 2021 | 2:36 PM

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಭೀಕರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ (JeM) ಉಗ್ರ ಅಬು ಸೈಫುಲ್ಲಾನನ್ನು ಇಂದು ಭಾರತೀಯ ಸೇನಾಪಡೆ ಪುಲ್ವಾಮಾದಲ್ಲಿ ಹೊಡೆದುರುಳಿಸಿದೆ. ಅದ್ನಾನ್, ಇಸ್ಮಾಯಿಲ್, ಲಂಬೂ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಅಬು ಸೈಫುಲ್ಲಾನನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ. ಈತ 2017ರಿಂದ ಕಾಶ್ಮೀರದ ಕಣಿವೆಯಲ್ಲಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆತ ಜೊತೆಗೆ ಇನ್ನೋರ್ವ ಉಗ್ರನನ್ನು ಕೂಡ ತ್ರಾಲ್​ನಲ್ಲಿ ಭಾರತೀಯ ಸೈನಿಕರು ಎನ್​ಕೌಂಟರ್ ಮಾಡಿದ್ದಾರೆ.

ಅಬು ಸೈಫುಲ್ಲಾ ಸರಣಿಯಾಗಿ ನಡೆದ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಇನ್ನೂ ಹಲವು ದಾಳಿಗಳಲ್ಲಿ ಈತನ ಪಾತ್ರವಿತ್ತು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕರಾದ ರವೂಫ್ ಅಝಾರ್, ಮೌಲಾನಾ ಮಸೂದ್ ಅಝರ್ ಹಾಗೂ ಅಮ್ಮರ್ ಜೊತೆಗೆ ಅಬು ಅಲಿಯಾಸ್ ಅದ್ನಾನ್​ ನಿಕಟ ಸಂಪರ್ಕ ಹೊಂದಿದ್ದ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2019ರಲ್ಲಿ ಅಫ್ಘಾನಿಸ್ತಾನ ಮತ್ತು ಭಾರತದ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಬಳಸಲಾಗಿದ್ದ ವಾಹನದಲ್ಲಿ ಐಇಡಿ ಇಟ್ಟು ಬ್ಲಾಸ್ಟ್​ ಮಾಡುವ ವಿಷಯದಲ್ಲಿ ಅದ್ನಾನ್​ ಬಹಳ ಪರಿಣತಿ ಹೊಂದಿದ್ದ. ಜೈಷ್ ಸಂಘಟನೆಯ ಜೊತೆ ಮಾತ್ರವಲ್ಲದೆ ತಾಲಿಬಾನ್​ ಜೊತೆಗೂ ಅದ್ನಾನ್​ ಸಂಪರ್ಕದಲ್ಲಿದ್ದ. ಆವಂತಿಪುರ, ಕಾಕ್​ಪುರ, ಪಂಪೋರ್, ಪುಲ್ವಾಮಾದಲ್ಲಿ ಜೈಷ್ ಸಂಘಟನೆ ಮತ್ತು ತಾಲಿಬಾನ್ ಸಂಘಟನೆಯನ್ನು ಬಲಗೊಳಿಸಲು ಅದ್ನಾನ್ ಸಹಾಯ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಮುಂಜಾನೆ ಎರಡು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 14 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಜಮ್ಮುವಿನ ಬಸ್ ನಿಲ್ದಾಣವೊಂದರಲ್ಲಿ ವಶಕ್ಕೆ ಪಡೆದಿದ್ದ 7 ಕೆಜಿ ಐಇಡಿ ಹಾಗೂ ಲಷ್ಕರ್-ಇ-ಮುಸ್ತಾಫಾ ಮುಖ್ಯಸ್ಥ ಹಿದಾಯತುಲ್ಲಾ ಮಲ್ಲಿಕ್ ಬಂಧನದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ಐಎ ಇಂದು ಜಮ್ಮುವಿನ 14 ಪ್ರದೇಶಗಳಲ್ಲಿ ದಾಳಿ ನಡೆಸಿತ್ತು.

ಈ ಎರಡೂ ಪ್ರಕರಣಗಳ ಸಂಬಂಧ ಎನ್ಐಎ ಅಧಿಕಾರಿಗಳು ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಅನಂತ್ ನಾಗ್, ಜಮ್ಮು ಮತ್ತು ಬನಿಹಾಲ್ ನಲ್ಲಿ ಇಂದು ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಂಧನಕ್ಕೊಳಗಾಗಿದ್ದ ಹಿದಾಯತುಲ್ಲಾ ಮಲ್ಲಿಕ್ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್​ಕೌಂಟರ್​​; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ

Terrorist Encounter: ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಉಗ್ರರ ಎನ್​ಕೌಂಟರ್, ಹುತಾತ್ಮರಾದ ಇಬ್ಬರು ಭಾರತೀಯ ಯೋಧರು

(Terrorists Encounter Jaish-e-Mohammed JeM Top terrorist involved in Pulwama attack killed in Kashmir by Army)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada