ಪಂಜಾಬ್​​ನ ಹೋಶಿಯಾರ್‌ಪುರ್​​ನಲ್ಲಿ ಪೊಲೀಸ್ ಕಾರ್ಯಾಚರಣೆ: ಅಮೃತಪಾಲ್ ಸಿಂಗ್ ಶರಣಾಗುವ ಸಾಧ್ಯತೆ

|

Updated on: Mar 29, 2023 | 1:25 PM

PB10 CK 0527 ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಬಣ್ಣದ ಇನ್ನೋವಾ ಕಾರು ಹೋಶಿಯಾರ್‌ಪುರದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಪರಾರಿಯಾಗಿದ್ದು ಮೆಹ್ತಿಯಾನಾ ಗ್ರಾಮದ ಗುರುದ್ವಾರದ ಬಳಿ ಅದನ್ನು ಬಿಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು

ಪಂಜಾಬ್​​ನ ಹೋಶಿಯಾರ್‌ಪುರ್​​ನಲ್ಲಿ ಪೊಲೀಸ್ ಕಾರ್ಯಾಚರಣೆ: ಅಮೃತಪಾಲ್ ಸಿಂಗ್ ಶರಣಾಗುವ ಸಾಧ್ಯತೆ
ಅಮೃತಪಾಲ್ ಸಿಂಗ್
Follow us on

ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ (Amritpal Singh) ಮತ್ತು ಆತನ ಆಪ್ತ ಪಾಪಲ್​​ಪ್ರೀತ್ ಮಂಗಳವಾರ ಸಂಜೆ ಕಾರ್ ಚೇಸ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ನಂತರ ಪಂಜಾಬ್​​ನ (Punjab) ಹೋಶಿಯಾರ್‌ಪುರ್ ಜಿಲ್ಲೆಯ ಮರ್ನಾಯನ್ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಅರೆಸೈನಿಕ ಸಿಬ್ಬಂದಿಯನ್ನು ಸಹ ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಅಮೃತಪಾಲ್ ಸಿಂಗ್ ಶರಣಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿರುವುದಾಗಿ ಟಿವಿ9 ಭಾರತ್​​ವರ್ಷ್ ವರದಿ ಮಾಡಿದೆ. ಪರಾರಿಯಾಗಿರುವ ಅಮೃತಪಾಲ್ ಮತ್ತು ಅವರ ಸಹಾಯಕರು ಆ ವಾಹನದಲ್ಲಿ ಇರಬಹುದೆಂದು ಶಂಕಿಸಿ ಮಂಗಳವಾರ ಸಂಜೆ ಪಂಜಾಬ್ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ತಂಡವು ಫಗ್ವಾರಾದಿಂದ ಕಾರನ್ನು ಹಿಂಬಾಲಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PB10 CK 0527 ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಬಣ್ಣದ ಇನ್ನೋವಾ ಕಾರು ಹೋಶಿಯಾರ್‌ಪುರದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಪರಾರಿಯಾಗಿದ್ದು ಮೆಹ್ತಿಯಾನಾ ಗ್ರಾಮದ ಗುರುದ್ವಾರದ ಬಳಿ ಅದನ್ನು ಬಿಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕಾರಿನಲ್ಲಿ ಅಮೃತಪಾಲ್ ಮತ್ತು ಪಾಪಲ್ ಪ್ರೀತ್ ಮತ್ತು ಇತರ ಕೆಲವು ಸಹಚರರು ಇದ್ದರು ಎಂದು ಶಂಕಿಸಲಾಗಿದೆ.

ಮಾರ್ಚ್ 18 ರಂದು ಜಲಂಧರ್‌ನಲ್ಲಿ ಸಿಂಗ್ ಮತ್ತು ಆತನ ಸಹಚರರನ್ನು ಬಂಧಿಸಲು ಪಂಜಾಬ್ ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಅಮೃತಪಾಲ್ ಸಿಂಗ್ ಕಳೆದ 12 ದಿನಗಳಿಂದ ಪರಾರಿಯಾಗಿದ್ದಾನೆ. ಅಮೃತಪಾಲ್ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಅಂದಿನಿಂದ ಪಂಜಾಬ್, ಹರಿಯಾಣ ಮತ್ತು ದೆಹಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ವೇಷ ಮರೆಸಿ ಸುತ್ತಾಡುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: Disqualification Removed: ಲಕ್ಷದ್ವೀಪ ಸಂಸದ ಫೈಜಲ್ ಅನರ್ಹತೆ ರದ್ದು

ಪೂರ್ವ ದೆಹಲಿಯ ಮಧು ವಿಹಾರ್‌ನ ಬೀದಿಯಲ್ಲಿ ಅಮೃತಪಾಲ್ ಸಿಂಗ್ ಮತ್ತು ಪಾಪಲ್ ಪ್ರೀತ್ ತಿರುಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿ ಮಂಗಳವಾರ ಕಾಣಿಸಿಕೊಂಡಿತ್ತು. ಇವರಿಬ್ಬರು ಮಾಸ್ಕ್ ಧರಿಸಿದ್ದು ಅಮೃತಪಾಲ್ ಸನ್ ಗ್ಲಾಸ್, ಡೆನಿಮ್ ಜಾಕೆಟ್ ಮತ್ತು ಪೇಟ ಧರಿಸದೆ ಸುತ್ತಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Wed, 29 March 23