Amritpal Singh: ಸನ್ಗ್ಲಾಸ್, ಡೆನಿಮ್ ಜಾಕೆಟ್ ಧರಿಸಿ ದೆಹಲಿ ರಸ್ತೆಯಲ್ಲಿ ಕಾಣಿಸಿಕೊಂಡ ಅಮೃತಪಾಲ್ ಸಿಂಗ್
ಅಮೃತಪಾಲ್ ಸಿಂಗ್ ಮತ್ತು ಪಾಪಲ್ ಪ್ರೀತ್ ಸಿಂಗ್ ಹರ್ಯಾಣದ ಕುರುಕ್ಷೇತ್ರದ ಮೂಲಕ ದೆಹಲಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಇನ್ನೂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದಾನೆಯೇ ಅಥವಾ ರಾಷ್ಟ್ರ ರಾಜಧಾನಿಯಿಂದಲೂ ತಪ್ಪಿಸಿಕೊಂಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ
ದೆಹಲಿ: ಪಂಜಾಬ್‌ನಿಂದ ಪರಾರಿಯಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಪೊಲೀಸರಿಂದ ತಲೆಮರೆಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ (Amritpal Singh)ದೆಹಲಿಯಲ್ಲಿ ಕಾಣಿಸಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಪಾಲ್ ಸಿಂಗ್ ಪೋಲಿಸರಿಂದ ತಪ್ಪಿಸಿಕೊಳ್ಳಲು ಸಿಖ್ ಟರ್ಬನ್ ಧರಿಸದೆ, ಸನ್ ಗ್ಲಾಸ್, ಡೆನಿಮ್ ಜಾಕೆಟ್ ಧರಿಸಿದ್ದರು. ಸಿಸಿಟಿವಿ ವಿಡಿಯೊದಲ್ಲಿ ಅವರ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಕೂಡ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್ ಧರಿಸಿದ್ದರು.ಮಾರ್ಚ್ 18 ರಂದು ಪಂಜಾಬ್‌ನಲ್ಲಿ (Punjab) ಆತನನ್ನು ಬಂಧಿಸಲು ಪೊಲೀಸರು ತೆರಳಿದ ಮೂರು ದಿನಗಳ ನಂತರ ಮಾರ್ಚ್ 21ರಂದು ದೆಹಲಿಯಲ್ಲಿ (Delhi) ಕಾಣಿಸಿಕೊಂಡಿರುವುದಾಗಿ ಸಿಸಿಟಿವಿ ವಿಡಿಯೊ ತೋರಿಸಿದೆ.
ಅಮೃತಪಾಲ್ ಸಿಂಗ್ ಮತ್ತು ಪಾಪಲ್ ಪ್ರೀತ್ ಸಿಂಗ್ ಹರ್ಯಾಣದ ಕುರುಕ್ಷೇತ್ರದ ಮೂಲಕ ದೆಹಲಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಇನ್ನೂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದಾನೆಯೇ ಅಥವಾ ರಾಷ್ಟ್ರ ರಾಜಧಾನಿಯಿಂದಲೂ ತಪ್ಪಿಸಿಕೊಂಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ನಕಲಿ ಪಾಸ್‌ಪೋರ್ಟ್ ಬಳಸಿ ಆತ ಗಡಿ ದಾಟಲು ಪ್ರಯತ್ನಿಸಬಹುದು ಎಂಬ ಶಂಕೆ ಇಂದ ನೆರೆಯ ನೇಪಾಳವು ಈಗಾಗಲೇ ಅಮೃತಪಾಲ್ ಸಿಂಗ್ನ್ನು ತನ್ನ ಕಣ್ಗಾವಲು ಪಟ್ಟಿಗೆ ಸೇರಿಸಿದೆ. ಇಬ್ಬರು ವಾಟೆಂಡ್ ವ್ಯಕ್ತಿಗಳು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿ ಬೇರೊಂದು ಮನೆಯಲ್ಲಿ ಆಶ್ರಯ ಪಡೆದಿರುವುದನ್ನು ತೋರಿಸುವ ಹಲವಾರು ಸಿಸಿಟಿವಿ ಕ್ಲಿಪ್‌ಗಳು ಪಂಜಾಬ್‌ನಿಂದ ಓಡಿಹೋದ ವಾರದಿಂದ ಇಲ್ಲಿಯವರೆಗೆ ಕಾಣಿಸಿಕೊಂಡಿವೆ. ಈ ದೃಶ್ಯಾವಳಿಗಳು ಅವರು ರಾಜ್ಯದಿಂದ ಹೇಗೆ ತಪ್ಪಿಸಿಕೊಂಡರು ಎಂಬುದರ ಕುರಿತು ಪೊಲೀಸರಿಗೆ ಉತ್ತಮ ಚಿತ್ರಣವನ್ನು ರೂಪಿಸಲು ಸಹಾಯ ಮಾಡಿದೆ.
ಅಮೃತಪಾಲ್ ಸಿಂಗ್ “ವಾರಿಸ್ ಪಂಜಾಬ್ ದೇ” ನ ಮುಖ್ಯಸ್ಥ. ಇದು ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಪ್ರಾರಂಭಿಸಿದ ಮೂಲಭೂತ ಸಂಘಟನೆಯಾಗಿದೆ. ಮಂಗಳವಾರ ಅಮೃತಪಾಲ್ ಸಿಂಗ್ ಮತ್ತು ಪಾಪಲ್ ಪ್ರೀತ್ ಸಿಂಗ್ ಎನರ್ಜಿ ಡ್ರಿಂಕ್ ಸೇವಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಆತನನ್ನು ಹಿಡಿಯಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾದ ಒಂದು ದಿನದ ನಂತರ ಈ ಫೋಟೊ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Tue, 28 March 23