Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ

ರಾಹುಲ್  ಗಾಂಧಿ ಹಿಂದುಳಿದ ಸಮುದಾಯಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ.ಅವರು ಹೋದಲ್ಲೆಲ್ಲಾ ಒಬಿಸಿಗಳ ಕೋಪವನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯ ಅವರಿಗೆ ಅವಕಾಶ ನೀಡಿತ್ತು, ಅವರು ಕ್ಷಮೆ ಕೇಳಬಹುದಿತ್ತು.

ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ
ಸಂಜಯ್ ಜೈಸ್ವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 28, 2023 | 4:31 PM

ದೆಹಲಿ: ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿಯವರ (Rahul Gandhi) ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ (BJP) ಸಂಸದ ಸಂಜಯ್ ಜೈಸ್ವಾಲ್ (Sanjay Jaiswal) ಇಂದು ಗಾಂಧಿ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ನಡೆಸಿ ವಿವಾದಕ್ಕೀಡಾಗಿದ್ದಾರೆ. ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಜೈಸ್ವಾಲ್ ಹೇಳಿದ್ದು ಇದು 2,000 ವರ್ಷಗಳ ಹಿಂದಿನ ಚಾಣಕ್ಯನ ಮಾತುಗಳು ಎಂದಿದ್ದಾರೆ. ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಈ ತಿಂಗಳ ಆರಂಭದಲ್ಲಿ ಇದೇ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಅವರನ್ನು ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು. ಅವರನ್ನು ಭಾರತದಿಂದ ಹೊರಹಾಕಬೇಕು. ರಾಹುಲ್ ಗಾಂಧಿ ಭಾರತದವರಲ್ಲ. ನೀವು ಭಾರತದವರಲ್ಲ ಎಂದು ನಮಗೆ ತಿಳಿದಿದೆ.ವಿದೇಶಿ ಮಹಿಳೆಯಿಂದ ಹುಟ್ಟಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದ್ದರು. ರಾಹುಲ್ ಗಾಂಧಿ ಅದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಗ್ಯಾ ಮಾರ್ಚ್ 11 ರಂದು ಹೇಳಿದ್ದರು.

ರಾಹುಲ್ ಗಾಂಧಿ ವಿದೇಶದಲ್ಲಿ ದೇಶವನ್ನು ಅವಮಾನಿಸಿದ್ದಾರೆ. ರಾಹುಲ್ ಲಂಡನ್​​​ನಲ್ಲಿ ಹೇಳಿದ ಹೇಳಿಕೆಗಳನ್ನು ಉಲ್ಲೇಖಿಸಿದ ಜೈಸ್ವಾಲ್, ನಮ್ಮ ಪ್ರಜಾಪ್ರಭುತ್ವ, ನ್ಯಾಯಾಲಯಗಳು ಮತ್ತು ಪತ್ರಕರ್ತರು ತಪ್ಪು ಎಂದು ನೀವು ಹೇಳಿದರೆ ನೀವು ಭಾರತವನ್ನು ನಂಬುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ರಾಹುಲ್ ಪುನರಾನರ್ತಿತ ಅಪರಾಧಿ. ಅವರು ಪ್ರಧಾನಿ ಮೋದಿಯವರೊಂದಿಗೆ ಅಸಮಾಧಾನಗೊಂಡಿದ್ದಾರೆ. ಅವರು ತಮ್ಮನ್ನು ತಾವೇ ರಾಜಕುಮಾರ ಎಂದು ಪರಿಗಣಿಸಿದ್ದಾರೆ. ಆದರೆ ಕಳೆದ ಎರಡು ಅವಧಿಗಳಿಂದ ಪ್ರಧಾನಿ ಬಹುಮತದ ಸರ್ಕಾರವನ್ನು ರಚಿಸುತ್ತಿದ್ದಾರೆ ಎಂದು ಜೈಸ್ವಾಲ್ ಹೇಳಿದರು.

ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿಯನ್ನು ನಡೆಸಿರುವ ಬಿಜೆಪಿ ಇಂದು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಕಳ್ಳರು ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದ ಆಡಳಿತ ಪಕ್ಷದ ಸಂಸದರು, ಅವರು ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಹುಲ್  ಗಾಂಧಿ ಹಿಂದುಳಿದ ಸಮುದಾಯಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ.ಅವರು ಹೋದಲ್ಲೆಲ್ಲಾ ಒಬಿಸಿಗಳ ಕೋಪವನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯ ಅವರಿಗೆ ಅವಕಾಶ ನೀಡಿತ್ತು, ಅವರು ಕ್ಷಮೆ ಕೇಳಬಹುದಿತ್ತು. ಅವರ ಹೇಳಿಕೆಯು ನೀರವ್ ಮೋದಿ ಮತ್ತು ಲಲಿತ್ ಮೋದಿಯನ್ನು ಮಾತ್ರ ಉಲ್ಲೇಖಿಸಿದೆ ಎಂದು ಅವರು ನ್ಯಾಯಾಲಯದಲ್ಲಿ ಹೇಳಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ದೇಶ ಗಮನಿಸುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: Defamation Case: ಮಾನನಷ್ಟ ಮೊಕದ್ದಮೆ: ದೆಹಲಿ ಹೈಕೋರ್ಟ್​ನಿಂದ ಉದ್ಧವ್​, ಆದಿತ್ಯ ಠಾಕ್ರೆ ಸೇರಿ ಮೂವರ ವಿರುದ್ಧ ಸಮನ್ಸ್ ಜಾರಿ

ಏಪ್ರಿಲ್ 6 ರಿಂದ ಪ್ರಾರಂಭವಾಗಲಿರುವ ತನ್ನ ಒಬಿಸಿ ಅಭಿಯಾನದ ಪೋಸ್ಟರ್ ಮತ್ತು ಕರಪತ್ರವನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷ  ಜೆಪಿ  ನಡ್ಡಾ ಹರ್ಯಾಣದ ಮನೇಸರ್‌ನಿಂದ ಅದನ್ನು ಪ್ರಾರಂಭಿಸಲಿದ್ದಾರೆ.

‘ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮನೇಸರ್‌ನಿಂದ ಒಬಿಸಿ ಅಭಿಯಾನ, ಘರ್ ಘರ್ ಚಲೋ, ಗಾಂವ್ ಗಾಂವ್ ಚಲೋಗೆ ಚಾಲನೆ ನೀಡಲಿದ್ದಾರೆ. ಇದು ಬಿಜೆಪಿ ಸಂಸ್ಥಾಪನಾ ದಿನವಾದ ಏಪ್ರಿಲ್ 6 ರಿಂದ ಬಿಆರ್ ಅಂಬೇಡ್ಕರ್ ಜಯಂತಿಯ ಏಪ್ರಿಲ್ 14 ರವರೆಗೆ 1 ಕೋಟಿ ಹಳ್ಳಿಗಳನ್ನು ತಲುಪಲಿದೆ. ಏಪ್ರಿಲ್ 11ರಂದು ಜ್ಯೋತಿಬಾ ಫುಲೆ ಜಯಂತಿಯನ್ನೂ ಆಚರಿಸಲಿದೆ. ಪ್ರಧಾನಿ ಮೋದಿ ಒಬಿಸಿಗಳಿಗೆ ಏನು ಮಾಡಿದರು ಮತ್ತು ಯುಪಿಎ ಅವರಿಗಾಗಿ ಏನು ಮಾಡಿದೆ? ಕಾಂಗ್ರೆಸ್ ಅವರ ಹಿತಾಸಕ್ತಿಗಳನ್ನು ಹೇಗೆ ಹಾಳುಮಾಡಿದೆ ಎಂದು ನಾವು ಹೋಲಿಕೆ ಮಾಡುತ್ತೇವೆ ಎಂದು ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥ ಬಿಜೆಪಿ ಸಂಸದ ಕೆ ಲಕ್ಷ್ಮಣ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ