AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atiq Ahmed: ಅಪಹರಣ ಪ್ರಕರಣ: ಅತೀಕ್ ಅಹ್ಮದ್ ದೋಷಿ, ಜೀವಾವಧಿ ಶಿಕ್ಷೆ ನೀಡಿದ ಪ್ರಯಾಗರಾಜ್‌ ನ್ಯಾಯಾಲಯ

ಇಂದು ಮಧ್ಯಾಹ್ನ 2 ಗಂಟೆಯ ನಂತರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ

Atiq Ahmed: ಅಪಹರಣ ಪ್ರಕರಣ: ಅತೀಕ್ ಅಹ್ಮದ್ ದೋಷಿ, ಜೀವಾವಧಿ ಶಿಕ್ಷೆ ನೀಡಿದ ಪ್ರಯಾಗರಾಜ್‌ ನ್ಯಾಯಾಲಯ
ಅತೀಕ್ ಅಹ್ಮದ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2023 | 2:43 PM

ದೆಹಲಿ: 2006ರಲ್ಲಿ ಉಮೇಶ್‌ ಪಾಲ್‌ ಅಪಹರಣ (Umesh Pal Kidnapping Case) ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಅತೀಕ್‌ ಅಹ್ಮದ್‌ (Atiq Ahmed) ದೋಷಿ ಎಂದು ಪ್ರಯಾಗರಾಜ್‌ ನ್ಯಾಯಾಲಯ (Prayagraj Court) ತೀರ್ಪು ನೀಡಿದೆ.ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್, ಖಾನ್ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಎಂಪಿ/ಎಂಎಲ್ಎ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಈ ಹಿಂದೆ ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಅತೀಕ್ ಅಹ್ಮದ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಕೊಲೆ ಮತ್ತು ಅಪಹರಣ ಸೇರಿದಂತೆ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಾಜಿ ಸಂಸದ ಮತ್ತು ಶಾಸಕ ಅತೀಕ್ ಅಹ್ಮದ್ ಅವರನ್ನು ಸೋಮವಾರ ಉತ್ತರ ಪ್ರದೇಶ ಪೊಲೀಸರು 24 ಗಂಟೆಗಳ ರಸ್ತೆ ಪ್ರಯಾಣದ ನಂತರ ಗುಜರಾತ್ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತಂದಿದ್ದರು.

ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ 2005 ರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್​​ಗೆ ಶಿಕ್ಷೆಯಾಗಿದೆ. ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹಿಂಬದಿ ಸೀಟಿನಿಂದ ಹೊರಗಿಳಿಯುತ್ತಿದ್ದಾಗ ಉಮೇಶ್ ಪಾಲ್​​ನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಶೂಟೌಟ್‌ನಲ್ಲಿ ಕೊಲ್ಲಲ್ಪಟ್ಟರು.

2005 ರ ಕೊಲೆಯಲ್ಲಿ ಉಮೇಶ್ ಪಾಲ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದರಿಂದ ಅತಿಕ್ ಅಹ್ಮದ್ ಹತ್ಯೆಗೈದಿದ್ದಾನೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. 2006 ರಲ್ಲಿ, ಉಮೇಶ್ ಪಾಲ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದಾಗ ಬಂದೂಕು ತೋರಿಸಿ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ತೊಗರಿ ಸಂಗ್ರಹ ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಿದ ಕೇಂದ್ರ

2006ರ ಅಪಹರಣ ಪ್ರಕರಣದಲ್ಲಿ ಇಂದು ಪ್ರಯಾಗರಾಜ್ ನ್ಯಾಯಾಲಯದ ತೀರ್ಪು ನೀಡಿದೆ.

ನನ್ನ ಮಗ ಕಿಡ್ನಾಪ್ ಆಗಿ 18 ವರ್ಷಗಳಾಗಿವೆ. ಆತ ಫೈಟರ್ ಆಗಿದ್ದ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ನನ್ನ ಮಗನನ್ನು ಅಪಹರಿಸಿದ್ದಕ್ಕಾಗಿ ಆತನಿಗೆ (ಅತೀಕ್ ಅಹಮದ್) ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ನನ್ನ ಮಗನ ಕೊಲೆಗೆ ಮರಣದಂಡನೆ ವಿಧಿಸಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ ಮೇಲೆ ನನಗೆ ನಂಬಿಕೆ ಇದೆ ಎಂದು ಉಮೇಶ್ ಪಾಲ್ ತಾಯಿ ಶಾಂತಿ ದೇವಿ ಹೇಳಿದ್ದಾರೆ.

ಯಾರು ಈ ಅತೀಕ್ ಅಹ್ಮದ್, ಈತನ ಹಿನ್ನಲೆಯೇನು?

ಉತ್ತರ ಪ್ರದೇಶ ಪೊಲೀಸರ ಪ್ರಕಾರ ಮಾಜಿ ಮಾಫಿಯಾ ಸದಸ್ಯ, ಈಗ ರಾಜಕಾರಣಿಯಾಗಿರುವ ಅತೀಕ್ ಅಹ್ಮದ್ ತನ್ನ ಕುಟುಂಬದ ವಿರುದ್ಧ 160 ಕ್ಕೂ ಹೆಚ್ಚು ಕ್ರಿಮಿನಲ್ ದೂರುಗಳನ್ನು ದಾಖಲಿಸಿದ್ದಾರೆ. ಅತೀಕ್ 100 ಪ್ರಕರಣಗಳಲ್ಲಿ ಹೆಸರಿಸಲಾಗಿದ್ದು, ಅವರ ಸಹೋದರ ಅಶ್ರಫ್ ವಿರುದ್ಧ 52 ಪ್ರಕರಣಗಳು, ಅವರ ಪತ್ನಿ ಶೈಸ್ತಾ ಪ್ರವೀಣ್ ವಿರುದ್ಧ ಮೂರು ಪ್ರಕರಣಗಳು ಮತ್ತು ಅವರ ಮಕ್ಕಳಾದ ಅಲಿ ಮತ್ತು ಉಮರ್ ಅಹ್ಮದ್ ವಿರುದ್ಧ ತಲಾ ನಾಲ್ಕು ಮತ್ತು ಒಂದು ಪ್ರಕರಣಗಳು ದಾಖಲಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Tue, 28 March 23