AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೊಗರಿ ಸಂಗ್ರಹ ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಿದ ಕೇಂದ್ರ

ಅಗತ್ಯ ಸರಕುಗಳ ಕಾಯಿದೆ, 1955 ರ ಅಡಿಯಲ್ಲಿ ತೊಗರಿಗೆ  ಸಂಬಂಧಿಸಿದಂತೆ ಸ್ಟಾಕ್ ಬಹಿರಂಗಪಡಿಸುವಿಕೆಯನ್ನು ಜಾರಿಗೊಳಿಸಲು ಸರ್ಕಾರವು ಕಳೆದ ವರ್ಷ ಆಗಸ್ಟ್ 12 ರಂದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿತ್ತು.

ತೊಗರಿ ಸಂಗ್ರಹ ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಿದ ಕೇಂದ್ರ
ತೊಗರಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 28, 2023 | 1:52 PM

ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಮನ್ವಯದಲ್ಲಿ ಆಮದುದಾರರು, ಗಿರಣಿದಾರರು, ದಾಸ್ತಾನುಗಾರರು ಮತ್ತು ವ್ಯಾಪಾರಿಗಳು ಹೊಂದಿರುವ ತೊಗರಿ (Tur) ಸಂಗ್ರಹ ಮೇಲ್ವಿಚಾರಣೆ ಮಾಡಲು ಸರ್ಕಾರವು ಸಮಿತಿಯನ್ನು ರಚಿಸಿದೆ. ಉತ್ತಮ ಪ್ರಮಾಣದಲ್ಲಿ ಆಮದುಗಳು ನಿಯಮಿತವಾಗಿ ಬರುತ್ತಿದ್ದರೂ ಮಾರುಕಟ್ಟೆಯಲ್ಲಿ ಷೇರುಗಳನ್ನು ಬಿಡುಗಡೆ ಮಾಡದಿರುವ ವರದಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (food & public distribution) ತಿಳಿಸಿದೆ. ಮುಂಬರುವ ತಿಂಗಳುಗಳಲ್ಲಿ ಅನಗತ್ಯ ಬೆಲೆ ಏರಿಕೆಯ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ದೇಶೀಯ ಮಾರುಕಟ್ಟೆಯಲ್ಲಿ ಇತರ ಬೇಳೆಕಾಳುಗಳ ದಾಸ್ತಾನು ಸ್ಥಿತಿಯನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಅಗತ್ಯ ಸರಕುಗಳ ಕಾಯಿದೆ, 1955 ರ ಅಡಿಯಲ್ಲಿ ತೊಗರಿಗೆ  ಸಂಬಂಧಿಸಿದಂತೆ ಸ್ಟಾಕ್ ಬಹಿರಂಗಪಡಿಸುವಿಕೆಯನ್ನು ಜಾರಿಗೊಳಿಸಲು ಸರ್ಕಾರವು ಕಳೆದ ವರ್ಷ ಆಗಸ್ಟ್ 12 ರಂದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿತ್ತು.

ಇದಲ್ಲದೆ, ಸುಗಮ ಮತ್ತು ತಡೆರಹಿತ ಆಮದು ಮಾಡಲು ಅನುಕೂಲವಾಗುವಂತೆ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ (LDC) ಶೂನ್ಯ ಸುಂಕದ ಆಮದುಗಳಿಗೆ ಸಹ ಸುಂಕವು ಕಾರ್ಯವಿಧಾನದ ಅಡಚಣೆಗಳನ್ನು ಉಂಟುಮಾಡುವುದರಿಂದ LDC ಅಲ್ಲದ ದೇಶಗಳಿಂದ ತೊಗರಿ ಆಮದುಗಳಿಗೆ ಅನ್ವಯವಾಗುವ 10 ಪ್ರತಿಶತ ಸುಂಕವನ್ನು ಸರ್ಕಾರ ತೆಗೆದುಹಾಕಿದೆ.

ಇದನ್ನೂ ಓದಿ: Medicine Price Hike: ಏಪ್ರಿಲ್‌ನಿಂದ ಅಗತ್ಯ ಔಷಧಗಳ ಬೆಲೆ ಏರಿಕೆ; ಗ್ರಾಹಕರಿಗೆ ಮತ್ತೊಂದು ಶಾಕ್!

ಮುಂದಿನ ತಿಂಗಳುಗಳಲ್ಲಿ ತೊಗರಿ ಬೆಲೆಯನ್ನು ನಿಯಂತ್ರಣದಲ್ಲಿಡಲು ಸರ್ಕಾರದ ನಿರ್ಣಯವನ್ನು ಇದು ಸೂಚಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ