ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಸಾಂಪ್ರದಾಯಿಕ ಉಡುಗೆ ತ್ಯಜಿಸಿ ಕೋಟ್,ಕನ್ನಡಕ ಧರಿಸಿದ ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್
ಸಿಸಿಟಿವಿ ದೃಶ್ಯಾವಳಿಗಳು ಅಮೃತಸರದಿಂದ ಮಾರ್ಚ್ 20 ರಂದು ದಾಖಲಾಗಿವೆ. ಅಮೃತಪಾಲ್ ಅಲ್ಲಿನ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಎಂದು ಹೇಳಲಾಗಿದೆ.
ದೆಹಲಿ: ಪಂಜಾಬ್ ಪೊಲೀಸರ (Punjab Police) ಬಳಿಯಿಂದ ಪರಾರಿಯಾಗಿರುವ ತೀವ್ರಗಾಮಿ ಸಿಖ್ ಬೋಧಕ ಅಮೃತಪಾಲ್ ಸಿಂಗ್(Amritpal Singh) ತಪ್ಪಿಸಿಕೊಳ್ಳುವಾಗ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು. ಸಾಮಾನ್ಯವಾಗಿ ಸಾಂಪ್ರದಾಯಿಕ ಧಾರ್ಮಿಕ ಉಡುಪಿನಲ್ಲಿ ಕಂಡುಬರುವ ಸಿಂಗ್ ಕಪ್ಪು ಕನ್ನಡಕವನ್ನು ಕೂಡಾ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಿಸಿಟಿವಿ ದೃಶ್ಯಾವಳಿಗಳು ಅಮೃತಸರದಿಂದ ಮಾರ್ಚ್ 20 ರಂದು ದಾಖಲಾಗಿವೆ. ಅಮೃತಪಾಲ್ ಅಲ್ಲಿನ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಎಂದು ಹೇಳಲಾಗಿದೆ. ಈತ ಅಮೃತಸರದಿಂದ ಹರ್ಯಾಣದ ಕುರುಕ್ಷೇತ್ರಕ್ಕೆ ತೆರಳಿದ್ದರು ಅಲ್ಲಿಂದ ದೆಹಲಿಗೆ ತೆರಳಿದ್ದ ಎಂದು ವಿಡಿಯೊಗಳು ಬಹಿರಂಗಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಆತ ನಿನ್ನೆ ಸನ್ಯಾಸಿಯ ವೇಷದಲ್ಲಿ ಬಸ್ ಟರ್ಮಿನಲ್‌ನಲ್ಲಿ ಇಳಿದಿದ್ದ ಎಂದು ಹೇಳಲಾಗಿದೆ.
ದೆಹಲಿ ಮತ್ತು ಪಂಜಾಬ್ ಪೊಲೀಸರ ತಂಡಗಳು ಇಂದು ಬೆಳಿಗ್ಗೆಯಿಂದ ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ಅಂತರ ರಾಜ್ಯ ಬಸ್ ಟರ್ಮಿನಲ್‌ನಲ್ಲಿ ಹಾಜರಿದ್ದು, ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿವೆ.
ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ತನಗೆ ಆಶ್ರಯ ನೀಡಿದ ಮಹಿಳೆಯ ಮನೆಯಿಂದ ಆತ ಹೋಗುವುದನ್ನು ಸಿಸಿಟಿವಿ ಕ್ಯಾಮೆರಾಗಳು ಕೊನೆಯದಾಗಿ ತೋರಿಸಿದವು. ಆತ ಮುಖ ಮರೆಮಾಚಲು ಛತ್ರಿಯನ್ನು ಹಿಡಿದಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಹರಿಯಾಣದ ಕುರುಕ್ಷೇತ್ರದಲ್ಲಿರುವ ತನ್ನ ಮನೆಯಲ್ಲಿ ಅಮೃತಪಾಲ್ ಸಿಂಗ್ ಮತ್ತು ಆತನ ಸಹಾಯಕ ಪಾಪಲ್ ಪ್ರೀತ್ ಸಿಂಗ್ ಅವರಿಗೆ ಆಶ್ರಯ ನೀಡಿದ ಮಹಿಳೆ ಬಲ್ಜೀತ್ ಕೌರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಯತ್ನ, ಕಾನೂನು ಜಾರಿಗೆ ಅಡ್ಡಿಪಡಿಸುವುದು ಮತ್ತು ಅಶಾಂತಿ ಸೃಷ್ಟಿಸಿದ ಆರೋಪ ಹೊತ್ತಿರುವ ಅಮೃತಪಾಲ್ ಕಳೆದ ಶನಿವಾರದಿಂದ ಪರಾರಿಯಾಗಿದ್ದ, ಅಧಿಕಾರಿಗಳು ಅವರ ವಾಹನವನ್ನು ತಡೆಯಲು ಪ್ರಯತ್ನಿಸಿ ಸೋತಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಕೋರ್ಟ್ಗೆ ಕಾಂಗ್ರೆಸ್ ಯಾಕೆ ಹೋಗಿಲ್ಲ? ಸಿಟಿ ರವಿ ಪ್ರಶ್ನೆ
ಅಮೃತಪಾಲ್ ಸಿಂಗ್ ಬಂಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿಯನ್ನು ಜನರು ನಂಬಬಾರದು. ಬಂಧನವಾದಾಗಲೆಲ್ಲಾ ಪೊಲೀಸರು ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡುತ್ತಾರೆ ಎಂದು ಬಟಿಂಡಾ ಎಸ್‌ಎಸ್‌ಪಿ ಗುಲ್ನೀತ್ ಖುರಾನಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ