ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ದೇಶದ ಪ್ರಜಾಪ್ರಭುತ್ವವಲ್ಲ: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ

G Kishan Reddy: ಸಚಿವ ಸಂಪುಟದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆ ಹರಿದು ಹಾಕುವುದು ಸಾಂವಿಧಾನಿಕವೇ? ಇದು ಪ್ರಜಾಪ್ರಭುತ್ವವೇ? ರಾಹುಲ್ ಗಾಂಧಿಯವರ ಆಕ್ಷೇಪಾರ್ಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಪಕ್ಷಗಳು ಇರುವುದು ಹಾಸ್ಯಾಸ್ಪದ

ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ದೇಶದ ಪ್ರಜಾಪ್ರಭುತ್ವವಲ್ಲ: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ
ಜಿ ಕಿಶನ್ ರೆಡ್ಡಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2023 | 7:59 PM

ದೇಶದಲ್ಲಿ ಅಪಾಯದಲ್ಲಿರುವುದು ಪ್ರಜಾಪ್ರಭುತ್ವವಲ್ಲ,ಕಾಂಗ್ರೆಸ್ ಪಕ್ಷ (Congress) ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಹೇಳಿದ್ದಾರೆ. ರಾಹುಲ್ ಗಾಂಧಿ (Rahul gandhi) ಅವರ ಕುಟುಂಬ, ಕಾಂಗ್ರೆಸ್ ಪಕ್ಷ ಮತ್ತು ಅವರನ್ನು ಬೆಂಬಲಿಸುವ ಪಕ್ಷಗಳು ಅವರವರ ಲಾಭಕ್ಕಾಗಿ ಮಾಡಿದ ಪ್ರಯತ್ನಗಳು ವ್ಯರ್ಥವಾಗುತ್ತಿವೆ ಎಂದು ರೆಡ್ಡಿ ಹೇಳಿದ್ದಾರೆ. ಮಂಗಳವಾರ ಸಂಸತ್ತಿನ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವರು ರಾಹುಲ್ ಗಾಂಧಿ ಅವರು ಕಾನೂನಿನ ತಪ್ಪು ಭಾಗದಲ್ಲಿರುವುದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಂಸತ್ತಿನ ಸದಸ್ಯರು ಅಥವಾ ವಿಧಾನಸಭೆಯ ಸದಸ್ಯರು ಎರಡು ವರ್ಷಗಳವರೆಗೆ ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಪು ನೀಡಿದ ನಂತರ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಸಮಾಜವಾದಿ ಪಕ್ಷದ ಶಾಸಕ ಆಜಂ ಖಾನ್, ಅದಕ್ಕಿಂತ ಮುಂಚೆ ತಮಿಳುನಾಡು ಸಿಎಂ ಜಯಲಲಿತಾ ಅವರು ನ್ಯಾಯಾಲಯದ ತೀರ್ಪಿನಿಂದ ಸದಸ್ಯತ್ವದಿಂದ ವಂಚಿತರಾಗಿದ್ದರು. ಹೀಗಿರುವಾಗ ರಾಹುಲ್ ಗಾಂಧಿ ಸ್ಪೆಷಲ್ ಎಂದು ಪರಿಗಣಿಸುವುದೇತಕೆ ಎಂದು ರೆಡ್ಡಿ ಕೇಳಿದ್ದಾರೆ.

ಇದನ್ನೂ ಓದಿ:19 ಪಕ್ಷಗಳ ಬೆಂಬಲವಿದೆ, ರಾಹುಲ್ ಗಾಂಧಿ ತಮ್ಮ ಬಂಗಲೆ ಬಗ್ಗೆ ಚಿಂತಿಸುತ್ತಿಲ್ಲ: ಕಾಂಗ್ರೆಸ್

ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗುವ ರಾಹುಲ್ ಗಾಂಧಿ ಒಮ್ಮೆ ಇತಿಹಾಸವನ್ನು ಅವಲೋಕಿಸಬೇಕು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಮಾತನ್ನು ಪಾಲಿಸದ ವಿವಿಧ ರಾಜ್ಯ ಸರ್ಕಾರಗಳ ವಿರುದ್ಧ 356 ನೇ ವಿಧಿಯನ್ನು (ರಾಷ್ಟ್ರಪತಿ ಆಳ್ವಿಕೆ) 50 ಬಾರಿ ದುರುಪಯೋಗಪಡಿಸಿಕೊಂಡು ವಿವಿಧ ರಾಜ್ಯ ಸರ್ಕಾರಗಳನ್ನು ಉರುಳಿಸಿದರು ಎಂಬುದನ್ನು ನೆನಪಿನಲ್ಲಿಡಬೇಕು. ರಾಹುಲ್ ಗಾಂಧಿಯವರ ಕುಟುಂಬ ರಾಜ್ಯ ಸರ್ಕಾರಗಳನ್ನು ಬೀಳಿಸಲು 356 ನೇ ವಿಧಿಯನ್ನು 75 ಕ್ಕೂ ಹೆಚ್ಚು ಬಾರಿ ದುರುಪಯೋಗಪಡಿಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಸುಮಾರು 90 ಬಾರಿ ರಾಜ್ಯ ಸರ್ಕಾರಗಳನ್ನು ಉರುಳಿಸಿದ್ದು ನಿಜವಲ್ಲವೇ, ಅವುಗಳಲ್ಲಿ 75 ಕ್ಕೂ ಹೆಚ್ಚು ಜವಾಬ್ದಾರಿಯನ್ನು ರಾಹುಲ್ ಗಾಂಧಿ ಅವರ ಕುಟುಂಬ ಮಾತ್ರ ವಹಿಸಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಮಾತ್ರ ರಾಜ್ಯ ಸರ್ಕಾರಗಳನ್ನು ಬೀಳಿಸಲು 356 ನೇ ವಿಧಿಯನ್ನು 50 ಬಾರಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.

ತಮ್ಮದೇ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದುಹಾಕಿದ ರಾಹುಲ್ ಗಾಂಧಿ ಈಗ ಬೊಬ್ಬಿಡುತ್ತಿರುವುದು ವಿಪರ್ಯಾಸ. ಸಚಿವ ಸಂಪುಟದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆ ಹರಿದು ಹಾಕುವುದು ಸಾಂವಿಧಾನಿಕವೇ? ಇದು ಪ್ರಜಾಪ್ರಭುತ್ವವೇ? ರಾಹುಲ್ ಗಾಂಧಿಯವರ ಆಕ್ಷೇಪಾರ್ಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಪಕ್ಷಗಳು ಇರುವುದು ಹಾಸ್ಯಾಸ್ಪದ.ರಾಹುಲ್ ಗಾಂಧಿಯವರ ಸಂಸತ್ತಿನ ಸದಸ್ಯತ್ವ ರದ್ದತಿಯನ್ನು ವಿರೋಧಿಸುತ್ತಿರುವ ಮತ್ತು ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ಬೆಂಬಲಿಸುತ್ತಿರುವ ರಾಜಕೀಯ ಪಕ್ಷಗಳು ಆಯಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಪಾವಿತ್ರ್ಯತೆಯನ್ನು ಕಸಿದುಕೊಳ್ಳುತ್ತಿವೆ ಎಂದು ಸಚಿವರು ಹೇಳಿದ್ದಾರೆ.

ನ್ಯಾಯಾಲಯಗಳು ಮತ್ತು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ರಾಹುಲ್ ಗಾಂಧಿ ಅವರ ಕುಟುಂಬ ನೈತಿಕ ಹಕ್ಕನ್ನು ಕಳೆದುಕೊಂಡಿದೆ.ರಾಹುಲ್ ಗಾಂಧಿಯವರು ಭಾರತೀಯ ಸಂಸ್ಥೆಗಳು ಮತ್ತು ಭಾರತವನ್ನು ಹೀಯಾಳಿಸುವುದು ತಮ್ಮ ನೆಚ್ಚಿನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.ಅಲಹಾಬಾದ್ ನ್ಯಾಯಾಲಯದ ತೀರ್ಪನ್ನು ಕಟ್ಟುನಿಟ್ಟಾಗಿ ವಿರೋಧಿಸಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದನ್ನು ರಾಹುಲ್ ನೆನಪಿಸಿಕೊಂಡರೆ ಒಳ್ಳೆಯದು ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ

ಈ ವೇಳೆ ಕಿಶನ್ ರೆಡ್ಡಿ ಅವರು ದೇಶಾದ್ಯಂತ 2013 ರಿಂದ ಅನರ್ಹಗೊಂಡ ಸಂಸದರು/ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲಾ ಪಕ್ಷಗಳ ನಾಯಕರು ಇದ್ದಾರೆ. ಇವರು ಯಾರೂ ಪ್ರಜಾಪ್ರಭುತ್ವ ವಿರೋಧಿ ಎಂದು ಘೋಷಣೆ ಮಾಡಿಲ್ಲ ಎಂದಿದ್ದಾರೆ.

2013 ರಿಂದ ದೇಶದಾದ್ಯಂತ ಅನರ್ಹಗೊಂಡ ಪ್ರತಿನಿಧಿಗಳು

ರಾಹುಲ್ ಗಾಂಧಿ (ಕಾಂಗ್ರೆಸ್) – 2023

ಆಜಂ ಖಾನ್ (ಸಮಾಜವಾದಿ ಪಾರ್ಟಿ) – 2022

ಅನಂತ್ ಸಿಂಗ್ (ಆರ್ ಜೆಡಿ) – 2022

ಅನಿಲ್ ಕುಮಾರ್ ಸಹಾನಿ (ಆರ್ ಜೆಡಿ – 2022

ವಿಕ್ರಮ್ ಸಿಂಗ್ ಸೈನಿ (ಬಿಜೆಪಿ) – 2022

ಪ್ರದೀಪ್ ಚೌಧರಿ (ಕಾಂಗ್ರೆಸ್, ಹರ್ಯಾಣ) – 2021

ಜೆ. ಜಯಲಲಿತಾ (ಎಐಎಡಿಎಂಕೆ) – 2017

ಕಮಲ್ ಕಿಶೋರ್ ಭಗತ್ (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) – 2015

ಸುರೇಶ್ ಹಲ್ವಾಂಕರ್ (ಬಿಜೆಪಿ) – 2014

ಟಿ.ಎಂ.ಸೆಲ್ವಗಣಪತಿ (ಡಿಎಂಕೆ) – 2014

ಬಾಬನರಾವ್ ಘೋಲುಪ್ (ಶಿವಸೇನಾ) – 2014

ಎನೋಸ್ ಎಕ್ಕಾ (ಜಾರ್ಖಂಡ್ ಪಕ್ಷ) – 2014

ಆಶಾ ರಾಣಿ (ಬಿಜೆಪಿ) – 2013

ರಶೀದ್ ಮಸೂದ್ (ಕಾಂಗ್ರೆಸ್) – 2013

ಲಾಲು ಪ್ರಸಾದ್ ಯಾದವ್ (ಆರ್ ಜೆಡಿ) – 2013

ಜಗದೀಶ್ ಶರ್ಮಾ (ಜೆಡಿಯು) – 2013

ಪಪ್ಪು ಕಲಾನಿ (ಕಾಂಗ್ರೆಸ್) 2013

ರಾಹುಲ್ ಗಾಂಧಿಯವರ ಕುಟುಂಬ ಹೇರಿದ ತುರ್ತು ಪರಿಸ್ಥಿತಿಗಳು: ಒಟ್ಟು 76

ಜವಾಹರಲಾಲ್ ನೆಹರು: 8

ಇಂದಿರಾ ಗಾಂಧಿ 50

ರಾಜೀವ್ ಗಾಂಧಿ: 6

ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದಾಗ ಮನಮೋಹನ್ ಸಿಂಗ್: 12

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Tue, 28 March 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ