AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chelur Taluk: ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನೂತನ ಚೇಳೂರು ತಾಲೂಕು ಕೇಂದ್ರ ಉದ್ಘಾಟಿಸಿದ ಸಚಿವ ಸುಧಾಕರ್

ಬೆಂಗಳೂರಿನಿಂದ ಚೇಳೂರಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಆಂದ್ರ- ಕರ್ನಾಟಕ ಗಡಿನಾಡಲ್ಲಿ ಇಂದು ಸಚಿವ ಸುಧಾಕರ್ ಹವಾ ಸೃಷ್ಟಿಸಿದ್ದಾರೆ. ನೂತನ ಚೇಳೂರು ತಾಲೂಕು ಕೇಂದ್ರ ಉದ್ಘಾಟಿಸುವ ಮೂಲಕ ಗಡಿನಾಡಲ್ಲಿ ಬಿಜೆಪಿ ಅರಳಿಸಲು ಮೆಗಾ ಪ್ಲಾನ್ ಹಾಕೊಂಡಿದ್ದಾರೆ. ಉದ್ಘಾಟನೆ ನಂತರ ಮಾತನಾಡಿದ ಸಚಿವರು ಬಿಜೆಪಿಗೆ ಮತ ಹಾಕಿದರೆ ಅಭಿವೃದ್ಧಿಗೆ ಮತ ಹಾಕಿದಂತೆ ಎಂಬ ಸಂದೇಶ ರವಾನಿಸಿದ್ದಾರೆ.

Chelur Taluk: ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನೂತನ ಚೇಳೂರು ತಾಲೂಕು ಕೇಂದ್ರ ಉದ್ಘಾಟಿಸಿದ ಸಚಿವ ಸುಧಾಕರ್
ನೂತನ ಚೇಳೂರು ತಾಲೂಕು ಕೇಂದ್ರ ಉದ್ಘಾಟನೆಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಸಚಿವ ಡಾ.ಕೆ. ಸುಧಾಕರ್
Rakesh Nayak Manchi
|

Updated on: Mar 28, 2023 | 6:50 PM

Share

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಿಂದ ವಿಭಜನೆಗೊಂಡ ನೂತನ ಚೇಳೂರು ತಾಲೂಕು ಕೇಂದ್ರವನ್ನು (Cheluru Taluk Centre) ಇಂದು (ಮಾರ್ಚ್ 28) ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K Sudhakar) ಅವರು ಉದ್ಘಾಟಿಸಿದರು. ಬೆಂಗಳೂರಿನಿಂದ ಚೇಳೂರಿಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿ ಹವಾ ಸೃಷ್ಟಿಸಿದ ಸಚಿವರು, ತಾಲೂಕು ಕೇಂದ್ರವನ್ನು ಉದ್ಘಾಟಿಸುವ ಮೂಲಕ ಆಂದ್ರ-ಕರ್ನಾಟಕ ಗಡಿನಾಡಲ್ಲಿ ಮತಬೇಟೆ ಆರಂಭಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸುಧಾಕರ್, ಬಿಜೆಪಿಗೆ ಮತ ಹಾಕಿದರೆ ಅಭಿವೃದ್ಧಿಗೆ ಮತ ಹಾಕಿದಂತೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಆರಿಸುವಂತೆ ಮನವಿ ಮಾಡಿದರು. ಅಲ್ಲದೆ, ಬಿಜೆಪಿ ಶಾಸಕರು ಬಂದರೆ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ನೂತನ ಚೇಳೂರು ತಾಲೂಕು ಕೇಂದ್ರ ಉದ್ಘಾಟನೆ ವಿಚಾರದಲ್ಲಿ ಸಂಬಂಧಿ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರ ಮುನಿಸುಗೊಂಡಿದ್ದಾರೆ. 10 ಗಂಟೆಗೆ ಕಾರ್ಯಕ್ರಮ ನಿಗಧಿಯಾಗಿದ್ದರೂ ಮದ್ಯಾಹ್ನ 2 ಗಂಟೆಯಾದರೂ ಸಚಿವರು ಆಗಮಿಸಿಲ್ಲ. ಹೀಗಾಗಿ ಸುಧಾಕರ್ ಮೇಲೆ ಮುನಿಸುಗೊಂಡ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಸಚಿವರು ಆಗಮಿಸುವ ಮುನ್ನವೇ ಹೊರಟು ಹೋಗಿದ್ದಾರೆ. ಒಂದೊಂದು ದಿನ ಒಂದೊಂದು ದಿನಾಂಕ ಹಾಗೂ ಸಮಯ ನಿಗಧಿ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರಾದ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುದ್ದೇನಹಳ್ಳಿಗೆ ಐಐಟಿ ಸ್ಥಾಪನೆ ಕೋರಿ ಪ್ರಧಾನಿ ಮೋದಿಗೆ ಮನವಿ: ಸಚಿವ ಸುಧಾಕರ್

ಸಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಚೇಳೂರನ್ನು ತಾಲೂಕಾಗಿ ಘೋಷಣೆ ಮಾಡಿದ್ದರು. ಆದರೆ ಸ್ವಂತ ಕಟ್ಟಡ ಕಲ್ಪಿಸಲು ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಲಕ್ಷ್ಯವಹಿಸಿರಲಿಲ್ಲ. ಇದರಿಂದ ಸ್ಥಳೀಯರ ಅನೇಕ ವರ್ಷಗಳ ಕನಸು ಕನಸಾಗಿಯೇ ಉಳಿದಿತ್ತು. ಹೀಗಾಗಿ ಪಟ್ಟಣದ ಹೊರವಲಯದ ಗೆರಿಗಿರೆಡ್ಡಿಪಾಳ್ಯದಲ್ಲಿ ನಿರ್ಮಿಸಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿ ಆರಂಭಿಸಲು ಮುಂದಾಗಿದ್ದರು. ಅದರಂತೆ ಆಮಂತ್ರಣ ಪತ್ರ ಮುದ್ರಿಸಿ ಹಂಚಲಾಗಿತ್ತು. ಬಳಿಕ ಇದಕ್ಕೆ ವಿರೋಧ ವ್ಯಕ್ತವಾದ ನಂತರ ಹಾಸ್ಟೆಲ್‌ನಲ್ಲಿ ತಾಲ್ಲೂಕು ಕಚೇರಿ ಆರಂಭಿಸಬೇಕೆಂದು ಅಧಿಕಾರಿಗಳು ಯೋಜನೆಗೆ ತಡೆ ಬಿದ್ದಿತ್ತು.

ಇತ್ತೀಚೆಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಕಾರ್ಯಕರ್ತರುಗಳು ಹಾಸ್ಟಲ್​ನಲ್ಲಿ ತಾಲ್ಲೂಕು ಕಚೇರಿ ಆರಂಭಿಸಬಾರದು ಎಂದು ಪ್ರತಿಭಟನೆ ನಡೆಸಿದ್ದರು. ಬಳಿಕ ಕಾರ್ಯಕ್ರಮವನ್ನು ವಾಪಸ್ ಪಡೆಯಲಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಶಾಸಕರು, ಚೇಳೂರು ಕಚೇರಿ ಉದ್ಘಾಟನೆ ಬಗ್ಗೆ ಹಠಾತ್ ಆಗಿ ಬಾಗೇಪಲ್ಲಿ ತಹಶೀಲ್ದಾರ್ ಆಹ್ವಾನಿಸಿದ್ದರು. ಆದರೆ ಚೇಳೂರಿಗೆ ಬಂದಾಗ ಕಾರ್ಯಕ್ರಮ ರದ್ದಾಗಿರುವುದು ತಿಳಿಯಿತು. ಪ್ರತಿಭಟನೆಗೆ ನಾನು ಕಾರಣನಲ್ಲ. ಚೇಳೂರು ಆಸು ಪಾಸುನಲ್ಲಿ ಕಚೇರಿ ಪ್ರಾರಂಬಿಸಲು ಸಹಕಾರ ನೀಡುವುದಾಗಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!