Rahul Gandhi: ಸರ್ಕಾರ ಮಂಜೂರು ಮಾಡಿದ ಸಂಸದರ ಬಂಗಲೆ ಖಾಲಿ ಮಾಡಲು ರಾಹುಲ್ ಗಾಂಧಿಗೆ ನೋಟಿಸ್
2004 ರಲ್ಲಿ ಯುಪಿಯ ಅಮೇಠಿಯಿಂದ ರಾಹುಲ್ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ, ಅವರಿಗೆ ಲುಟ್ಯೆನ್ಸ್‌ನ ದೆಹಲಿಯ 12 ತುಘಲಕ್ ಲೇನ್‌ನಲ್ಲಿರುವ 5 ಬೆಡ್‌ರೂಮ್ ಬಂಗಲೆಯನ್ನು ನೀಡಲಾಗಿತ್ತು.
ದೆಹಲಿ: ಲೋಕಸಭೆಯಿಂದ (Loksabha) ಅನರ್ಹಗೊಂಡ ನಂತರ ಇದೀಗ ಲೋಕಸಭೆಯ ಹೌಸಿಂಗ್ ಕಮಿಟಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಸರ್ಕಾರ ಮಂಜೂರು ಮಾಡಿದ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. 2004 ರಲ್ಲಿ ಯುಪಿಯ ಅಮೇಠಿಯಿಂದ (Amethi)ರಾಹುಲ್ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ, ಅವರಿಗೆ ದೆಹಲಿ ಲುಟ್ಯೆನ್ಸ್‌ನ 12 ತುಘಲಕ್ ಲೇನ್‌ನಲ್ಲಿರುವ 5 ಬೆಡ್‌ರೂಮ್ ಬಂಗಲೆಯನ್ನು ನೀಡಲಾಗಿತ್ತು. ಏತನ್ಮಧ್ಯೆ, ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್ ಕಮಿಟಿಯಿಂದ ಈ ನೋಟಿಸ್ ಬಂದಿದೆ.
After being disqualified from the Lok Sabha, now the Lok Sabha Housing Committee has given notice to Congress leader Rahul Gandhi to vacate the government-allotted bungalow: Sources
(file photo) pic.twitter.com/noZHOFsVt0
— ANI (@ANI) March 27, 2023
ಕಳೆದ ವಾರ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ಮಾರ್ಚ್ 23 ರಿಂದ ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿತು.
ತಕ್ಷಣ ಜಾಮೀನು ನೀಡಿದ ನ್ಯಾಯಾಲಯವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ರಾಹುಲ್ಗೆ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ ಉನ್ನತ ನ್ಯಾಯಾಲಯವು ಅವರ ಅಪರಾಧ ಮತ್ತು ಶಿಕ್ಷೆಗೆ ತಡೆ ನೀಡದ ಹೊರತು ರಾಹುಲ್ ಗಾಂಧಿ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.
ನಿಯಮಗಳ ಪ್ರಕಾರ, ಅವರು ಅನರ್ಹಗೊಳಿಸುವ ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: Bilkis Bano case: 11 ಅಪರಾಧಿಗಳ ಬಿಡುಗಡೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್ ಜಾರಿ
ಭದ್ರತಾ ವ್ಯವಸ್ಥೆಯನ್ನು ಕಡಿಮೆ ಮಾಡಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜುಲೈ 2020ರಲ್ಲಿ ತಮ್ಮ ಅಧಿಕೃತ ಲೋಧಿ ಎಸ್ಟೇಟ್ ಬಂಗಲೆಯನ್ನು ಖಾಲಿ ಮಾಡಿದ್ದರು,
ರಾಹುಲ್ ಗಾಂಧಿಯ ಅಪರಾಧ ಮತ್ತು ಅನರ್ಹತೆಯ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನು ರೀತಿಯಲ್ಲಿ ಹೋರಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Mon, 27 March 23