ಹಿಮಾಚಲ ಪ್ರದೇಶ(Himachal Pradesh)ದ ಕುಲುವಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ, ನೋಡ ನೋಡುತ್ತಿದ್ದಂತೆ ಹತ್ತಾರು ಮನೆಗಳು ನೆಲಕಚ್ಚಿವೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಭೂಕುಸಿತದಿಂದ ಹಲವು ಮನೆಗಳು ಕುಸಿದಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ 8 ರಿಂದ 9 ಕಟ್ಟಡಗಳು ಕುಸಿದುಬಿದ್ದಿವೆ.
ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳಿಂದ ತೆರವು ಮಾಡಿದ್ದರಿಂದ ಈ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ವಾಸಿಸದಿರುವುದು ಖುಷಿಯ ಸಂಗತಿಯಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿ ಈ ಅವಘಡ ಸಂಭವಿಸಿದೆ.
ಸಿರಾಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಹೇಗೋ ಜನ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಕಂಗ್ರಾದ ಕೋಟ್ಲಾದಲ್ಲೂ ಪ್ರಕೃತಿ ವಿಕೋಪ ಸೃಷ್ಟಿಸಿದೆ. ಇಲ್ಲಿ ಭೂಕುಸಿತದ ನಂತರ ಅವಶೇಷಗಳು ಮನೆಗಳಿಗೆ ನುಗ್ಗಿದ್ದು, ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಮತ್ತಷ್ಟು ಓದಿ: ಹಿಮಾಚಲ ಪ್ರದೇಶ ಮಳೆ ಅನಾಹುತಕ್ಕೆ 55 ಸಾವು; ಉತ್ತರಾಖಂಡದಲ್ಲಿ ಮೂವರು ದುರ್ಮರಣ
ಹಿಮಾಚಲ ಪ್ರದೇಶದಲ್ಲಿ ಒಂದೆಡೆ ಭೂಕುಸಿತದಿಂದ ಅನಾಹುತವಾದರೆ, ಮತ್ತೊಂದೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ನದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ಜನರು ಅಹಿತಕರ ಘಟನೆಗಳ ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ.
Disturbing visuals emerge from Anni, Kullu, depicting a massive commercial building collapsing amidst a devastating landslide.
It’s noteworthy that the administration had identified the risk and successfully evacuated the building two days prior. pic.twitter.com/cGAf0pPtGd
— Sukhvinder Singh Sukhu (@SukhuSukhvinder) August 24, 2023
ಮಂಡಿಯಲ್ಲಿ ಪ್ರಕೃತಿಯ ಪ್ರಕೋಪ ಕಾಣುತ್ತಿದ್ದರೆ ಶಿಮ್ಲಾದಲ್ಲಿಯೂ ರೋದನ ಮುಗಿಲು ಮುಟ್ಟಿದೆ. ಮಳೆಯಿಂದಾಗಿ ಶಿಮ್ಲಾದ ಮಾಲ್ ರಸ್ತೆಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಮಳೆಯಿಂದಾಗಿ ರಸ್ತೆಗಳು ರಾಜಕಾಲುವೆಗಳಾಗಿ ಮಾರ್ಪಟ್ಟಿವೆ.
ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ಇಂದು ಹಾನಿಗೊಳಗಾದ ಕುಲು-ಮಂಡಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ. ಈ ಮುಂಗಾರಿನಲ್ಲಿ ಭಾರಿ ಮಳೆಯಿಂದಾಗಿ ಒಟ್ಟು 709 ರಸ್ತೆಗಳನ್ನು ಮುಚ್ಚಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ