ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಮೇಘಸ್ಫೋಟ: 41 ಮಂದಿ ಸಾವು, ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು 7 ಮಂದಿ

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಜನರು ಮನೆಯೊಳಗೆ ಇರುವಂತೆ ಮತ್ತು ಚರಂಡಿ ಅಥವಾ ನದಿಗಳ ಬಳಿ ಹೋಗುವುದು ಬೇಡ ಎಂದು ಹೇಳಿದ್ದಾರೆ. ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಹೋಗುವಂತೆ ಜನರಲ್ಲಿ ಹೇಳಿದ್ದು, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡದಂತೆ ಪ್ರವಾಸಿಗರಲ್ಲಿ ವಿನಂತಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಮೇಘಸ್ಫೋಟ: 41 ಮಂದಿ ಸಾವು, ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು 7 ಮಂದಿ
ಹಿಮಾಚಲ ಪ್ರದೇಶದಲ್ಲಿ ಮಳೆಗೆ ಹಾನಿ ಸಂಭವಿಸಿದ ಕಟ್ಟಡ
Follow us
|

Updated on:Aug 14, 2023 | 6:48 PM

ದೆಹಲಿ ಆಗಸ್ಟ್ 14: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮಳೆ ಹಾನಿ ಮುಂದುವರಿದಿದ್ದು ಕಳೆದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ದುರಂತದಲ್ಲಿ, ಹಠಾತ್ ಪ್ರವಾಹಕ್ಕೆ (flash floods) ಸಿಲುಕಿ ಏಳು ಜನರು ಸಾವಿಗೀಡಾಗಿದ್ದಾರೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಹೇಳಿದ್ದಾರೆ. ಮಂಡಿ ಜಿಲ್ಲೆಯ ಸಂಬಾಲ್ ಗ್ರಾಮದಿಂದ ವಿಡಿಯೊವೊಂದನ್ನು ಹಂಚಿಕೊಂಡ ಅವರು, ಈ ಭಯಾನಕ ಪರಿಸ್ಥಿತಿಯನ್ನು ಪರಿಹರಿಸಲು ಸಕ್ರಿಯ ರಕ್ಷಣಾ, ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಹೇಳಿದರು. ಗುಡ್ಡಗಾಡು ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಇಲ್ಲಿವರೆಗೆ 41 ಜನರು ಸಾವಿಗೀಡಾಗಿದ್ದಾರೆಯ

ಸಂಭಾಲ್, ಪಾಂಡೋಹ್  ಜಿಲ್ಲೆಯ ಮಂಡಿಯಲ್ಲಿ ದುರಂತ ಸಂಭವಿಸಿದ್ದು ಸೋಮವಾರ ಏಳು ವ್ಯಕ್ತಿಗಳು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದಾರೆ.

ಈ ಭೀಕರ ಪರಿಸ್ಥಿತಿಯನ್ನು ಪರಿಹರಿಸಲು ಸಕ್ರಿಯ ರಕ್ಷಣಾ, ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಕೆಳಕ್ಕೆ ಧುಮ್ಮಿಕ್ಕುತ್ತಿರುವ ನೀರು ಕಾಣಿಸುತ್ತಿದ್ದು, ವ್ಯಕ್ತಿಯೊಬ್ಬರು “ಓ ದೇವರೇ” ಎಂದು ಪದೇ ಪದೇ ಹೇಳುವುದನ್ನು ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದು.

ಭಾರೀ ಮಳೆಗೆ ಎರಡು ಪ್ರತ್ಯೇಕ ಘಟನೆಗಳಲ್ಲಿ16  ಮಂದಿ ಸಾವಿಗೀಡಾಗಿದ್ದರು. ಕಳೆದ ರಾತ್ರಿ ಸೋಲನ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದ ನಂತರ ಏಳು ಜನರು ಸಾವಿಗೀಡಾಗಿದ್ದು, ಶಿಮ್ಲಾ ನಗರದ ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದಲ್ಲಿ ಭೂಕುಸಿತದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಮಳೆ ಪೀಡಿತ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರವಾಹದಿಂದಾಗಿ ಜೀವಹಾನಿ “ಅತ್ಯಂತ ದುಃಖಕರ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಜನರು ಮನೆಯೊಳಗೆ ಇರುವಂತೆ ಮತ್ತು ಚರಂಡಿ ಅಥವಾ ನದಿಗಳ ಬಳಿ ಹೋಗುವುದು ಬೇಡ ಎಂದು ಹೇಳಿದ್ದಾರೆ. ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಹೋಗುವಂತೆ ಜನರಲ್ಲಿ ಹೇಳಿದ್ದು, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡದಂತೆ ಪ್ರವಾಸಿಗರಲ್ಲಿ ವಿನಂತಿಸಿದ್ದಾರೆ.

ಶಿಮ್ಲಾ ನಗರದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ 15 ರಿಂದ 20 ಮಂದಿ ಸಮಾಧಿಯಾಗಿರುವ ಶಂಕೆ ಇದೆ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇನ್ನೊಂದು ಸೈಟ್ ಫಾಗ್ಲಿ ಪ್ರದೇಶದಲ್ಲಿದೆ, ಅಲ್ಲಿ ಹಲವಾರು ಮನೆಗಳು ಮಣ್ಣು ಮತ್ತು ಕೆಸರುಗಳ ಅಡಿಯಲ್ಲಿ ಹೂತುಹೋಗಿವೆ.

ಸೋಲನ್‌ನ ಕಂದಘಾಟ್ ಉಪವಿಭಾಗದ ಮಾಮ್ಲಿಗ್ ಗ್ರಾಮದಲ್ಲಿ ಮೇಘಸ್ಫೋಟದ ನಂತರ ಆರು ಜನರನ್ನು ರಕ್ಷಿಸಲಾಗಿದೆ. ಎರಡು ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಕೊಚ್ಚಿಹೋಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ವಿಪತ್ತಿನ ಕಾರಣ ರಾಜ್ಯದಲ್ಲಿ 752 ರಸ್ತೆಗಳನ್ನು ಮುಚ್ಚಲಾಗಿದೆ. ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೊಸ ಪಾಶ್ಚಾತ್ಯ ಪ್ರಕ್ಷುಬ್ಧತೆಯ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ.

ಇದನ್ನೂ ಓದಿ: ಪ್ರಾಣ ಕಳೆದುಕೊಳ್ಳಬೇಡಿ, ನೀಟ್ ರದ್ದು ಮಾಡಲಾಗುವುದು: ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್

ಮಾನ್ಸೂನ್ ಟ್ರೊ ಸ್ಥಳವು ಹಿಮಾಲಯದ ತಪ್ಪಲಿನಲ್ಲಿದೆ. ಆದ್ದರಿಂದ ನೈಋತ್ಯ ಅರೇಬಿಯನ್ ಸಮುದ್ರದ ಮಾನ್ಸೂನ್ ಮಾರುತಗಳು ಹಿಮಾಲಯದ ತಪ್ಪಲಿಗೆ ಅಪ್ಪಳಿಸುತ್ತಿವೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಮಾಚಲ ಪ್ರದೇಶವು ಪ್ರವಾಹ ಮತ್ತು ಭೂಕುಸಿತದಿಂದಾಗಿ ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದ್ದು, ಮುಂಗಾರು ಮಳೆಯ ವಿನಾಶಕಾರಿ ಪರಿಣಾಮದಿಂದಾಗಿ ₹ 7020.28 ಕೋಟಿ ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Mon, 14 August 23

ತಾಜಾ ಸುದ್ದಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?