ಪ್ರಾಣ ಕಳೆದುಕೊಳ್ಳಬೇಡಿ, ನೀಟ್ ರದ್ದು ಮಾಡಲಾಗುವುದು: ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಗರದ ಕ್ರೋಮ್‌ಪೇಟೆಯ ವಿದ್ಯಾರ್ಥಿ, ವೈದ್ಯಕೀಯ ಆಕಾಂಕ್ಷಿ ಜಗದೀಶ್ವರನ್ ಅವರ ಇತ್ತೀಚಿನ ನಿಧನದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಗದೀಶ್ವರನ್ ಅವರ ತಂದೆ ಸೆಲ್ವಶೇಖರ್ ಸಹ ಮರುದಿನ ಆತ್ಮಹತ್ಯೆ ಮಾಡಿಕೊಂಡರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ನಾನು ಗೊಂದಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು.

ಪ್ರಾಣ ಕಳೆದುಕೊಳ್ಳಬೇಡಿ, ನೀಟ್ ರದ್ದು ಮಾಡಲಾಗುವುದು: ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್
ಎಂ ಕೆ ಸ್ಟಾಲಿನ್
Follow us
|

Updated on:Aug 14, 2023 | 5:26 PM

ಚೆನ್ನೈ ಆಗಸ್ಟ್ 14: ವೈದ್ಯಕೀಯ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (MK Stalin) ಅವರು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಗಳು ಈ ರೀತಿಯ ಯಾವುದೇ ನಿರ್ಧಾರ ಕೈಗೊಳ್ಳದೆ ಆತ್ಮಸ್ಥೈರ್ಯದಿಂದ ಜೀವನವನ್ನು ಎದುರಿಸುವಂತೆ ಸೋಮವಾರ ಮನವಿ ಮಾಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ ರಾಜಕೀಯ ಬದಲಾವಣೆಯಾದಾಗ NEET ಅಡೆತಡೆಗಳು ಕಮ್ಮಿಯಾಗುತ್ತವೆ ಎಂದು ಸ್ಟಾಲಿನ್ ಹೇಳಿದ್ದಾರೆ. ಆಗ,‘ನಾನು ಸಹಿ ಹಾಕುವುದಿಲ್ಲ’ ಎಂದು ಹೇಳುವವರೆಲ್ಲ ಕಾಣೆಯಾಗುತ್ತಾರೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯದ ನೀಟ್ ವಿರೋಧಿ ಮಸೂದೆ ವಿರುದ್ಧ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹೇಳಿದರು.

ವಿದ್ಯಾರ್ಥಿ ಜಗದೀಶ್ವರನ್ ಮತ್ತು ಅವರ ತಂದೆ ಸೆಲ್ವಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ನಿಧನಕ್ಕೆ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನೀಟ್ ವಿಷಯದಲ್ಲಿ ಅವರ ಸಾವು ಕೊನೆಯ ಪ್ರಕರಣ ಆಗಿರಲಿ ಎಂದು ಸ್ಟಾಲಿನ್ ಹೇಳಿದ್ದಾರೆ.

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಗರದ ಕ್ರೋಮ್‌ಪೇಟೆಯ ವಿದ್ಯಾರ್ಥಿ, ವೈದ್ಯಕೀಯ ಆಕಾಂಕ್ಷಿ ಜಗದೀಶ್ವರನ್ ಅವರ ಇತ್ತೀಚಿನ ನಿಧನದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಗದೀಶ್ವರನ್ ಅವರ ತಂದೆ ಸೆಲ್ವಶೇಖರ್ ಸಹ ಮರುದಿನ ಆತ್ಮಹತ್ಯೆ ಮಾಡಿಕೊಂಡರು, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ನಾನು ಗೊಂದಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಚೆನ್ನಾಗಿ ಓದುತ್ತಿದ್ದ ಮಗನನ್ನು ವೈದ್ಯನನ್ನಾಗಿ ನೋಡಬೇಕೆಂದು ಅವನ ಹೆತ್ತವರು ಬಯಸಿದ್ದರು. ಆದರೆ ಜಗದೀಶ್ವರನ್ “ನೀಟ್ ಪರೀಕ್ಷೆಯ ಬಲಿಪೀಠದ ಮೇಲೆ ಬಲಿಯಾದವರ ಪಟ್ಟಿಗೆ ಸೇರಿಕೊಂಡಿದ್ದಾರೆ, ಇದು ಅತ್ಯಂತ ಭಯಾನಕ ಘಟನೆಯಾಗಿದೆ” ಎಂದಿದ್ದಾರೆ ಸ್ಟಾಲಿನ್.  ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ NEET ಸಂಬಂಧಿತ ಆತ್ಮಹತ್ಯೆಗಳು ವರದಿಯಾಗಿವೆ.

ಯಾವುದೇ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ NEET ಅನ್ನು ರದ್ದುಗೊಳಿಸಲಾಗುವುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕಾನೂನು ಉಪಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡಿಗೆ ನೀಟ್ ವಿನಾಯಿತಿಗೆ ಒತ್ತಾಯಿಸುವ ವಿಧಾನಸಭೆ ನಿರ್ಣಯಗಳನ್ನು ನೆನಪಿಸಿಕೊಂಡ ಅವರು, ರಾಜ್ಯಪಾಲರು ಮೊದಲ ನಿರ್ಣಯವನ್ನು ಹಿಂದಿರುಗಿಸಿದ್ದು, ಎರಡನೆಯದನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದರು. ರಾಜ್ಯಪಾಲ ರವಿ ಅವರು ಮಸೂದೆಯನ್ನು ರದ್ದುಪಡಿಸಲು ಬಯಸುತ್ತಿರುವಂತೆ ಕಂಡುಬರುತ್ತಿದೆ. ನೀಟ್ ಪರೀಕ್ಷೆ ದುಬಾರಿಯಾಗಿದ್ದು, ಶ್ರೀಮಂತರು ಮಾತ್ರ ಅದನ್ನು ಭರಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಅಪಾರ ಹಣ ಖರ್ಚು ಮಾಡಿ ಓದಲು ಸಾಧ್ಯವಾಗದವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದ ಅವರು, ಕೇವಲ ನೀಟ್‌ನಲ್ಲಿ ತೇರ್ಗಡೆಯಾದವರು ಹಣವಿದ್ದರೆ ವೈದ್ಯಕೀಯ ಕಾಲೇಜಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ವೈದ್ಯಕೀಯ ಶಿಕ್ಷಣ ಹಣ ಉಳ್ಳವರಿಗೆ ಮಾತ್ರ ಎಂದು ಹೇಳಿದರು.

ಹೀಗಿದ್ದರೂ ರಾಜ್ಯ ಸರ್ಕಾರವು ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7.5ರಷ್ಟು ಮೀಸಲಾತಿ ತಂದಿದೆ.ಆದರೆ, ರಾಜ್ಯಪಾಲರು ಇದನ್ನು ಅರ್ಥಮಾಡಿಕೊಳ್ಳಲು ನಿರಾಕರಿಸಿದ್ದಾರೆ.ಅವರು ಕೋಚಿಂಗ್ ಸೆಂಟರ್‌ಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬ ಅನುಮಾನವಿದ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳನ್ನು ಆಹ್ವಾನಿಸುವ ಮೂಲಕ ರವಿ ರಾಜಭವನದಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿ, ಸೇಲಂನ ವಿದ್ಯಾರ್ಥಿಯ ತಂದೆ ಪ್ರಸ್ತಾಪಿಸಿದ ವಿಷಯವಾಗಿ ನೀಟ್ ವಿನಾಯಿತಿ ಮಸೂದೆಗೆ ಸಹಿ ಹಾಕುವುದಿಲ್ಲ ಎಂದು ಟೀಕಿಸಿದಾಗ ರಾಜ್ಯಪಾಲರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯದಿನದಲ್ಲಿ ಭಾಗಿಯಾಗಲು ಕಾರ್ಮಿಕರು, ರೈತರು, ಮೀನುಗಾರರಿಗೆ ಪ್ರಧಾನಿ ಮೋದಿ ವಿಶೇಷ ಆಹ್ವಾನ

“ಮಸೂದೆ ಅವರ ಸಹಿಗಾಗಿ ಕಾಯುತ್ತಿಲ್ಲ. ಅದು ರಾಷ್ಟ್ರಪತಿಗಳ ಕೈಯಲ್ಲಿದೆ. ರಾಜ್ಯಪಾಲರಿಗೆ ಈ ಮಟ್ಟಿಗೆ ಅಧಿಕಾರವಿಲ್ಲ, ಆದರೆ ಅವರು ಅಧಿಕಾರ ಚಲಾಯಿಸುತ್ತಾರೆ ಎಂಬ ಭಾವನೆಯನ್ನು ಅವರು ನೀಡುತ್ತಿದ್ದಾರೆ. ಜಗದೀಶ್ವರನ್ ಅವರಂತೆ ಎಷ್ಟೇ ಜೀವಗಳನ್ನು ಕಳೆದುಕೊಂಡರೂ ಪರವಾಗಿಲ್ಲ. ರಾಜ್ಯಪಾಲ ಆರ್.ಎನ್.ರವಿ ಅವರ ಹೃದಯ ಕರಗುವುದಿಲ್ಲ, ಇಂತಹ ಕಲ್ಲುಹೃದಯದ ಜನರ ಕಾಲದಲ್ಲಿ ಮಾನವನ ಪ್ರಾಣಕ್ಕೆ ಬೆಲೆ ಇಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

“ನೀಟ್‌ನ ಬಲಿಪೀಠದ ಮೇಲೆ ಅವರ ಸಾವು ಅಂತಿಮವಾಗಲಿ. ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಾದಿದೆ. ಆತ್ಮಸ್ಥೈರ್ಯದಿಂದಿರಿ. ಬದುಕಿ ಮತ್ತು ಇತರರನ್ನು ಬದುಕಲು ಬಿಡಿ. ಯಾವುದೇ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಡಿ ಎಂದು ತಮಿಳುನಾಡು ಸಿಎಂ ಮನವಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Mon, 14 August 23

ತಾಜಾ ಸುದ್ದಿ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ