ಜೀವಂತವಾಗಿರಲು ಟಾಯ್ಲೆಟ್​ನ ನೀರು ಕುಡಿದಿದ್ದೆವು, 6 ತಿಂಗಳ ಬಳಿಕ ಲಿಬಿಯಾದಿಂದ ಹಿಂದಿರುಗಿದ ಭಾರತೀಯರ ಮಾತು

ಇಟಲಿಗೆ ಹೋಗಬೇಕಾದ 17 ಮಂದಿ ಲಿಬಿಯಾದಲ್ಲಿ ಸಿಲುಕಿದ್ದರು, ಅವರು ಅನುಭವಿಸಿದ ಮಾನಸಿಕ ದೈಹಿಕ ಹಿಂಸೆಗಳ ಬಗ್ಗೆ ಕೆಲವು ಮಂದಿ ಮಾತನಾಡಿದ್ದಾರೆ.  ರವೀಂದರ್ ಕುಮಾರ್ ಮತ್ತವರ ಕುಟುಂಬಕ್ಕೆ ಫೆಬ್ರವರಿ 6 ಅತ್ಯಂತ ಸಂತೋಷದಾಯಕ ದಿನವಾಗಿತ್ತು. ಏಕೆಂದರೆ ಕುಟುಂಬದ ಮೂವರು ಇಟಲಿಗೆ ಹೊರಟು ನಿಂತಿದ್ದರು. ಒಳ್ಳೆಯ ಕೆಲಸವಾಗಿತ್ತು, ಭಾರತೀಯ ಕರೆನ್ಸಿಗೆ ಹೋಲಿಸಿದರೆ ತಿಂಗಳಿಗೆ 1 ಲಕ್ಷ ರೂ. ಕೆಲಸ ಅದಾಗಿತ್ತು.

ಜೀವಂತವಾಗಿರಲು ಟಾಯ್ಲೆಟ್​ನ ನೀರು ಕುಡಿದಿದ್ದೆವು, 6 ತಿಂಗಳ ಬಳಿಕ ಲಿಬಿಯಾದಿಂದ ಹಿಂದಿರುಗಿದ ಭಾರತೀಯರ ಮಾತು
ಲಿಬಿಯಾದಲ್ಲಿ ಸಿಲುಕಿದ್ದ ಭಾರತೀಯರು
Follow us
ನಯನಾ ರಾಜೀವ್
|

Updated on: Aug 24, 2023 | 11:10 AM

ಇಟಲಿಗೆ ಹೋಗಬೇಕಾದ 17 ಮಂದಿ ಲಿಬಿಯಾದಲ್ಲಿ ಸಿಲುಕಿದ್ದರು, ಅವರು ಅನುಭವಿಸಿದ ಮಾನಸಿಕ, ದೈಹಿಕ ಹಿಂಸೆಗಳ ಬಗ್ಗೆ ಕೆಲವು ಮಂದಿ ಮಾತನಾಡಿದ್ದಾರೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಉತ್ತಮ ಕೆಲಸ ಪಡೆಯಬೇಕು ಎನ್ನುವ ಕನಸನ್ನು ಹೊತ್ತು ತೆರಳಿದ್ದವರ ಆಸೆ ನುಚ್ಚು ನೂರಾಗಿತ್ತು.  ರವೀಂದರ್ ಕುಮಾರ್ ಮತ್ತವರ ಕುಟುಂಬಕ್ಕೆ ಫೆಬ್ರವರಿ 6 ಅತ್ಯಂತ ಸಂತೋಷದಾಯಕ ದಿನವಾಗಿತ್ತು. ಏಕೆಂದರೆ ಕುಟುಂಬದ ಮೂವರು ಇಟಲಿಗೆ ಹೊರಟು ನಿಂತಿದ್ದರು. ಒಳ್ಳೆಯ ಕೆಲಸವಾಗಿತ್ತು, ಭಾರತೀಯ ಕರೆನ್ಸಿಗೆ ಹೋಲಿಸಿದರೆ ತಿಂಗಳಿಗೆ 1 ಲಕ್ಷ ರೂ. ಕೆಲಸ ಅದಾಗಿತ್ತು.

ಆದರೆ ಅವರು ಅಂದುಕೊಂಡಂತೆ ಏನೂ ಆಗಿಲ್ಲ, ಪಂಜಾಬ್ ಹಾಗೂ ಹರ್ಯಾಣದ ಇತರೆ 14 ಮಂದಿ ಜತೆಗೆ ಈ ಮೂವರು ಕೂಡ ಲಿಬಿಯಾದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ರವೀಂದ್ರ ಅವರ ಕುಟುಂಬದ ಹತ್ತಿರದವನಾಗಿದ್ದ ಹರ್ಯಾಣ ಮೂಲದ ಏಜೆಂಟ್​ ಮದನ್​ಲಾಲ್​ಗೆ ಈಗಾಗಲೇ 49 ಲಕ್ಷ ರೂ. ಪಾವತಿಸಿರುತ್ತಾರೆ, ಆದರೆ ಆತ ಹಣ ತೆಗೆದುಕೊಂಡು ಪರಾರಿಯಾಗುತ್ತಾನೆ, ಆಗ ಈ 17 ಮಂದಿ ಸಂಕಷ್ಟದಲ್ಲಿ ಸಿಲುಕುತ್ತಾರೆ.

ರವೀಂದರ್ ಅವರ ಸಹೋದರ ಸಂದೀಪ್ ಹಾಗೂ ಸೋದರ ಮಾವ ಧರಂವೀರ್ ಲಿಬಿಯಾದಲ್ಲಿ ಸಾಕಷ್ಟು ಕಷ್ಟಗಳನ್ನೆದುರಿಸಿ ಮನೆಗೆ ಮರಳಿದ್ದರೆ, ಅವರ ಮಗ ಟೋನಿ ತಪ್ಪಿಸಿಕೊಳ್ಳಲು 4ನೇ ಮಹಡಿಯ ಕಟ್ಟಡದಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆಂಬುದು ತಿಳಿದುಬಂದಿದೆ. ಎರಡು ತಿಂಗಳುಗಳ ಕಾಲ ತನ್ನ ಮಗ ಸತ್ತಿರುವ ಕುರಿತು ಮಾಹಿತಿಯೇ ಇರಲಿಲ್ಲ. ಟ್ರಾವೆಲ್ ಏಜೆಂಟ್​ ಊರಿಗೆ ಮರಳಿದಾಗ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ:ಲಿಬಿಯಾದಲ್ಲಿ ಒತ್ತೆಯಾಳುಗಳಾಗಿದ್ದ 17 ಭಾರತೀಯರು ಬಂಧಮುಕ್ತರಾಗಿ ಸ್ವದೇಶಕ್ಕೆ

ಸಿಕ್ಕಿಬಿದ್ದ ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರು ಮೇ 26 ರಂದು ಟ್ಯುನಿಸ್‌ನಲ್ಲಿರುವ ರಾಯಭಾರ ಕಚೇರಿಯ ಗಮನಕ್ಕೆ ತಂದರು. ಭಾರತದಿಂದ ಕಳ್ಳಸಾಗಣೆ ಮಾಡಿದ ನಂತರ ಲಿಬಿಯಾದ ಜ್ವಾರಾ ನಗರದಲ್ಲಿ ಭಾರತೀಯರನ್ನು ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿರಿಸಲಾಗಿತ್ತು. ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿರುವವರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸಲಾಗುತ್ತಿತ್ತು.

ಈ ಕುರಿತು ರಾಹುಲ್ ಎಂಬುವವರು ಮಾತನಾಡಿ, ಕತ್ತಲೆ ಕೋಣೆಯಲ್ಲಿ ನಮ್ಮನ್ನು ಲಾಕ್ ಮಾಡಿದ್ದರು, ನಾವು 12 ಜನ ಇದ್ದೆವು, ತಿನ್ನಲು ಬನ್ ರೀತಿಯದ್ದು ಏನೋ ನೀಡುತ್ತಿದ್ದರು, ಇಡೀ ದಿನ ಕುಡಿಯಲು ನೀರು ಇರುತ್ತಿರಲಿಲ್ಲ ಹಾಗಾಗಿ ಶೌಚಾಲಯದ ನೀರನ್ನೇ ಕುಡಿಯುತ್ತಿದ್ದೆವು. ಒಬ್ಬ ಯುವಕ ಹೇಗೋ ಮಾಡಿ ತನ್ನೊಂದಿಗೆ ಫೋನ್ ಇಟ್ಟುಕೊಂಡಿದ್ದ ಅದರಿಂದಾಗಿ ವಿಕ್ರಂಜೀತ್​ ಅವರನ್ನು ತಲುಪುವಲ್ಲಿ ಯಶಸ್ವಿಯಾದೆವು.

ರಾಹುಲ್ ಕುಮಾರ್ ಕರ್ನಾಲ್ ನಿವಾಸಿ, ಮೊದಲು ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದರು, 10ನೇ ತರಗತಿಯವರೆಗೆ ಮಾತ್ರ ಓದಿದ್ದರು. ಟ್ರಾವೆಲ್ ಏಜೆಂಟ್​ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದ. ನಿನಗೆ ತಿಂಗಳಿಗೆ 2-3 ಲಕ್ಷ ರೂ ಬರುವ ಕೆಲಸವನ್ನು ಕೊಡಿಸುತ್ತೇನೆ ಆದರೆ ಮೊದಲು ನೀನು 12 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಆದರೆ ಕಷ್ಟಪಟ್ಟರೂ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.

ಫೆಬ್ರವರಿ ಮತ್ತು ಏಪ್ರಿಲ್ ನಡುವೆ ದುಬೈಗೆ ತೆರಳಿದ್ದ ಬ್ರಿಜ್‌ಮೋಹನ್, ಟ್ರಾವೆಲ್ ಏಜೆಂಟ್ ಸರ್ಬಿಯಾದಲ್ಲಿ ಆರು ತಿಂಗಳು ಕೆಲಸ ಮಾಡಿದ ನಂತರ ಯುರೋಪ್‌ನಲ್ಲಿ ವರ್ಕ್ ಪರ್ಮಿಟ್ ನೀಡುವುದಾಗಿ ಭರವಸೆ ನೀಡಿದ್ದರು. ಅವರನ್ನು ಸರ್ಬಿಯಾಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್