Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಬಿಯಾದಲ್ಲಿ ಒತ್ತೆಯಾಳುಗಳಾಗಿದ್ದ 17 ಭಾರತೀಯರು ಬಂಧಮುಕ್ತರಾಗಿ ಸ್ವದೇಶಕ್ಕೆ

Libya: ಈ ಪ್ರಕರಣವನ್ನು ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರು ಟುನಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ. ರಾಯಭಾರ ಕಚೇರಿಯು ಕುಟುಂಬಗಳೊಂದಿಗೆ ನಿಕಟ ಸಂಪರ್ಕದಲ್ಲಿತ್ತು, ಇದು ಮೇ ಮತ್ತು ಜೂನ್‌ನಲ್ಲಿ ಲಿಬಿಯಾ ಅಧಿಕಾರಿಗಳೊಂದಿಗೆ ನಿಯಮಿತವಾಗಿ ವಿಷಯವನ್ನು ವಿನಿವ ಮಾಡಿದ್ದು,"ಅನೌಪಚಾರಿಕ ಮೂಲಗಳ" ಮೂಲಕವೂ ಇವರನ್ನು ಬಂಧಮುಕ್ತಗೊಳಿಸುವ ಪ್ರಯತ್ನ ಮಾಡಲಾಗಿತ್ತು,

ಲಿಬಿಯಾದಲ್ಲಿ ಒತ್ತೆಯಾಳುಗಳಾಗಿದ್ದ 17 ಭಾರತೀಯರು ಬಂಧಮುಕ್ತರಾಗಿ ಸ್ವದೇಶಕ್ಕೆ
ಲಿಬಿಯಾImage Credit source: Twitter/@vikramsahney
Follow us
ರಶ್ಮಿ ಕಲ್ಲಕಟ್ಟ
|

Updated on: Aug 21, 2023 | 1:15 PM

ಟ್ರಿಪೋಲಿ: ಲಿಬಿಯಾದಲ್ಲಿ (Libya) ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿದ್ದ 17 ಭಾರತೀಯರ ಗುಂಪನ್ನು ಹಲವಾರು ತಿಂಗಳುಗಳ ಸೆರೆಯಲ್ಲಿ ಮುಕ್ತಗೊಳಿಸಲಾಗಿದೆ. ಇವರನ್ನು ಟುನಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian embassy) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನದಿಂದ ಸ್ವದೇಶಕ್ಕೆ ಮರಳಿ ಕರೆತರಲಾಯಿತು ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬಂಧಿಯಾಗಿದ್ದವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರ್ಯಾಣದವರು.ಈ ವರ್ಷದ ಮೇ 26 ರಂದು ಈ ಬಗ್ಗೆ ಟುನಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತರಲಾಯಿತು. ಭಾರತದಿಂದ ಕಳ್ಳಸಾಗಣೆ ಮಾಡಿದ ನಂತರ ಲಿಬಿಯಾದ ಜ್ವಾರಾ ನಗರದಲ್ಲಿ ಸಶಸ್ತ್ರ ಗುಂಪು ಇವರನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಘಟನೆ ನಡೆದದ್ದು ಯಾವಾಗ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಟುನಿಸ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಪ್ರವೇಶದ ನಂತರ, 17 ಜನರ ಗುಂಪನ್ನು ಲಿಬಿಯಾದಿಂದ ಸ್ಥಳಾಂತರಿಸಲಾಯಿತು. ಅವರು ಆಗಸ್ಟ್ 20 ರಂದು ಸಂಜೆ ನವದೆಹಲಿಗೆ ತಲುಪಿದ್ದಾರೆ.

ಈ ಪ್ರಕರಣವನ್ನು ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರು ಟುನಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ. ರಾಯಭಾರ ಕಚೇರಿಯು ಕುಟುಂಬಗಳೊಂದಿಗೆ ನಿಕಟ ಸಂಪರ್ಕದಲ್ಲಿತ್ತು, ಇದು ಮೇ ಮತ್ತು ಜೂನ್‌ನಲ್ಲಿ ಲಿಬಿಯಾ ಅಧಿಕಾರಿಗಳೊಂದಿಗೆ ನಿಯಮಿತವಾಗಿ ವಿಷಯವನ್ನು ವಿನಿಮಯ ಮಾಡಿದ್ದು,”ಅನೌಪಚಾರಿಕ ಮೂಲಗಳ” ಮೂಲಕವೂ ಇವರನ್ನು ಬಂಧಮುಕ್ತಗೊಳಿಸುವ ಪ್ರಯತ್ನ ಮಾಡಲಾಗಿತ್ತು,

ಜೂನ್ 13 ರಂದು, ಲಿಬಿಯಾ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ರಕ್ಷಿಸಿದ್ದರು. ಆದರೆ ಈ ಭಾರತೀಯರು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಾರೆಂದು ಅವರನ್ನು ತಮ್ಮ ವಶದಲ್ಲಿ ಇರಿಸಿಕೊಂಡರು ಎಂದು ಮೂಲಗಳು ಹೇಳಿವೆ. ಟುನಿಸ್‌ನಲ್ಲಿರುವ ಭಾರತೀಯ ರಾಯಭಾರಿ ಎನ್‌ಜೆ ಗ್ಯಾಂಗ್ಟೆ ಮತ್ತು ನವದೆಹಲಿಯ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಮಧ್ಯಸ್ಥಿಕೆಯ ನಂತರ, ಲಿಬಿಯಾ ಅಧಿಕಾರಿಗಳು ಭಾರತೀಯರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು.

ಅವರು ಲಿಬಿಯಾದಲ್ಲಿದ್ದ ಸಮಯದಲ್ಲಿ, ಭಾರತೀಯ ರಾಯಭಾರ ಕಚೇರಿಯು ಆಹಾರ, ಔಷಧಗಳು ಮತ್ತು ಬಟ್ಟೆ ಸೇರಿದಂತೆ ಭಾರತೀಯರ ಅಗತ್ಯಗಳನ್ನು ನೋಡಿಕೊಳ್ಳುತ್ತಿತ್ತು. ಅವರು ಪಾಸ್‌ಪೋರ್ಟ್‌ಗಳನ್ನು ಹೊಂದಿಲ್ಲದ ಕಾರಣ, ಅವರ ಭಾರತಕ್ಕೆ ಪ್ರಯಾಣಿಸಲು ತುರ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.

17 ಭಾರತೀಯರಿಗೆ ಟಿಕೆಟ್‌ಗಳನ್ನು ಭಾರತೀಯ ರಾಯಭಾರ ಕಚೇರಿಯಿಂದ ಒದಗಿಸಿದ್ದು ಅದಕ್ಕೆ ರಾಯಭಾರ ಕಚೇರಿಯೇ ಪಾವತಿ ಮಾಡಿತ್ತು.

ಮೇ ತಿಂಗಳಲ್ಲಿ, ಮೂರು ತಿಂಗಳಿಗೂ ಹೆಚ್ಚು ಕಾಲ ಲಿಬಿಯಾದಲ್ಲಿ ಸೇನೆಯ ವಶದಲ್ಲಿದ್ದ ವ್ಯಾಪಾರಿ ಹಡಗಿನ ಒಂಬತ್ತು ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಚಂದ್ರಯಾನ 3 : ವಿಕ್ರಮ್ ಲ್ಯಾಂಡರ್ ತೆಗೆದ ಚಂದ್ರನ ಹೊಸ ಚಿತ್ರಗಳನ್ನು ಹಂಚಿಕೊಂಡ ಇಸ್ರೋ

ಎಂ.ಟಿ ಮಾಯಾ 1 ಸಿಬ್ಬಂದಿಯ ಭಾಗವಾಗಿದ್ದ ನಾವಿಕರನ್ನು ಫೆಬ್ರವರಿ 15 ರಂದು ಲಿಬಿಯಾದ ಕರಾವಳಿಯ ಬಳಿ ಹಡಗು ಮುರಿದು ಬಿದ್ದ ನಂತರ ಅವರನ್ನು ಅಲ್ಲಿನ ಪಡೆ ವಶಪಡಿಸಿಕೊಂಡಿದೆ ಎಂದು ಮೂಲಗಳು ಟುನೀಶಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ತಿಳಿಸಿವೆ. ಭಾರತೀಯ ನಾವಿಕರು ಮೇ 31 ರಂದು ಬಿಡುಗಡೆ ಮಾಡಲಾಗಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್