AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Libya Desert: ಲಿಬಿಯಾ ಮರುಭೂಮಿಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವು

ಲಿಬಿಯಾ ಮರುಭೂಮಿ (Libya Desert)ಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಛಾಡ್ ಗಡಿಯಲ್ಲಿ ಈ ಘಟನೆ ನಡೆದಿದೆ.

Libya Desert: ಲಿಬಿಯಾ ಮರುಭೂಮಿಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವು
Libya DesertImage Credit source: Reuters
TV9 Web
| Edited By: |

Updated on: Jun 30, 2022 | 12:25 PM

Share

ಲಿಬಿಯಾ ಮರುಭೂಮಿ (Libya Desert)ಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಛಾಡ್ ಗಡಿಯಲ್ಲಿ ಈ ಘಟನೆ ನಡೆದಿದೆ. ಮೃತರು ವಲಸಿಗರು ಎಂದು ಗುರುತಿಸಲಾಗಿದೆ, 320 ಕಿಲೋಮೀಟರ್ ದೂರದಲ್ಲಿರುವ ಕುಫ್ರಾದಿಂದ ಕಪ್ಪು ಪಿಕಪ್ ಟ್ರಕ್ ಒಂದು ಬಂದಿತ್ತು, ಆ ಟ್ರಕ್​ನಲ್ಲಿದ್ದ 20 ಮಂದಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.

20 ಮಂದಿ ತೆರಳುತ್ತಿದ್ದ ವಾಹನವು ಮಾರ್ಗಮಧ್ಯದಲ್ಲಿ ಕೈಕೊಟ್ಟಿತ್ತು, ಬಳಿಕ ತಮ್ಮ ಗುರಿ ಮುಟ್ಟಲಾಗದೆ ಹಿಂದಿರುಗಿಯೂ ಹೋಗಲಾಗದೆ, ಬಾಯಾರಿಕೆ, ಹಸಿವಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಟ್ರಕ್ ಚಾಲಕರೊಬ್ಬರು ಕೆಟ್ಟು ನಿಂತಿರುವ ಟ್ರಕ್ ಗಮನಿಸಿದ್ದಾರೆ, ಬಳಿಕ ಹತ್ತಿರ ಹೋಗಿ ನೋಡಿದಾಗ ಶವಗಳು ಕಣ್ಣಿಗೆ ಬಿದ್ದಿವೆ.

14 ದಿನಗಳ ಹಿಂದೆಯೇ ಇವರೆಲ್ಲರೂ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಅವರ ಮೊಬೈಲ್ ಗಮನಿಸಿದಾಗ ಜೂನ್ 13ರಂದು ಕೊನೆಯ ಕರೆ ಮಾಡಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ, ಲಿಬಿಯಾ ಕರಾವಳಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಮಂದಿ ಹಡಗಿನಲ್ಲಿ ತೆರಳುತ್ತಿದ್ದಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದಾರೆ. ಡಜನ್​ಗೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಸೇರಿ ಐದು ಮಂದಿ ನಾಪತ್ತೆಯಾಗಿದ್ದು, ಮೃತಪಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ