‘ಹಿಮ ಪರ್ವತದಲ್ಲಿರಿ, ಮರುಭೂಮಿಯಲ್ಲಿರಿ.. ನಿಮ್ಮ ಜೊತೆಯೇ ದೀಪಾವಳಿ ಆಚರಿಸಿದ್ರೆ ಮಾತ್ರ ಅದು ಪರಿಪೂರ್ಣ’
ಜೈಪುರ: ರಾಜಸ್ಥಾನದ ಜೈಸಲ್ಮೇರ್ನಲ್ಲಿ ಇಂದು BSF ಪಡೆಯ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ಆಚರಿಸಿದರು. ದೇಶದ ಜನತೆಗೆ ದೀಪಾವಳಿ ಶುಭಾಶಯ ತಿಳಿಸಿದ ಮೋದಿ ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೂ ಸಹ ಧನ್ಯವಾದ ತಿಳಿಸಿದರು. ಮರಭೂಮಿಯಲ್ಲಿರಿ, ಹಿಮದಿಂದ ಆವೃತವಾದ ಪ್ರದೇಶದಲ್ಲಿರಿ. ನಿಮ್ಮೊಂದಿಗೆ ದೀಪಾವಳಿ ಆಚರಿಸಿದಾಗ ಮಾತ್ರ ನನಗೆ ಸಂತೋಷ. ನಿಮ್ಮ ಮೊಗದಲ್ಲಿ ಸಂತೋಷ ನೋಡಿದಾಗ ನನಗೆ ಸಂತೋಷವಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಮ್ಮ ಸೇನೆಯ ಮುಂದೆ ಯಾರಿಗೂ ನಿಲ್ಲುವ ಧೈರ್ಯವಿಲ್ಲ. ದೇಶ ಸೇವೆಯಲ್ಲಿ […]
ಜೈಪುರ: ರಾಜಸ್ಥಾನದ ಜೈಸಲ್ಮೇರ್ನಲ್ಲಿ ಇಂದು BSF ಪಡೆಯ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ಆಚರಿಸಿದರು. ದೇಶದ ಜನತೆಗೆ ದೀಪಾವಳಿ ಶುಭಾಶಯ ತಿಳಿಸಿದ ಮೋದಿ ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೂ ಸಹ ಧನ್ಯವಾದ ತಿಳಿಸಿದರು.
ಮರಭೂಮಿಯಲ್ಲಿರಿ, ಹಿಮದಿಂದ ಆವೃತವಾದ ಪ್ರದೇಶದಲ್ಲಿರಿ. ನಿಮ್ಮೊಂದಿಗೆ ದೀಪಾವಳಿ ಆಚರಿಸಿದಾಗ ಮಾತ್ರ ನನಗೆ ಸಂತೋಷ. ನಿಮ್ಮ ಮೊಗದಲ್ಲಿ ಸಂತೋಷ ನೋಡಿದಾಗ ನನಗೆ ಸಂತೋಷವಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮ್ಮ ಸೇನೆಯ ಮುಂದೆ ಯಾರಿಗೂ ನಿಲ್ಲುವ ಧೈರ್ಯವಿಲ್ಲ. ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ನನ್ನ ಧನ್ಯವಾದ. ಯೋಧರಿದ್ದರೆ ಈ ದೇಶ, ಅವರಿಂದಲೇ ದೇಶದ ಜನರು ನೆಮ್ಮದಿಯಾಗಿ ಹಬ್ಬ ಆಚರಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನೀವು ಎಂದು ಪ್ರಧಾನಿ ಯೋಧರನ್ನು ಶ್ಲಾಘಿಸಿದರು.
‘ಹಬ್ಬದ ದಿನ ಕುಟುಂಬಸ್ಥರನ್ನು ಬಿಟ್ಟು ದೇಶ ಕಾಯುತ್ತಿದ್ದೀರಿ’ ಹಬ್ಬದ ದಿನ ಕುಟುಂಬಸ್ಥರನ್ನು ಬಿಟ್ಟು ದೇಶ ಕಾಯುತ್ತಿದ್ದೀರಿ. ದೇಶ ಸೇವೆಯಲ್ಲಿ ತೊಡಗಿರುವ ನಿಮಗೆ ಧನ್ಯವಾದ.ದೇಶದ ಜನರ ಪರವಾಗಿ ನಾನು ಶುಭಾಶಯ ತಂದಿದ್ದೇನೆ ಎಂದು ಜೈಸಲ್ಮೇರ್ ಗಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮ್ಮ ಸೇನೆಯ ಮುಂದೆ ಯಾರಿಗೂ ನಿಲ್ಲುವ ಧೈರ್ಯವಿಲ್ಲ. ಲೋಂಗೆವಾಲಾ ಗಡಿಯಲ್ಲಿ ಪಾಕ್‌ಗೆ ತಕ್ಕ ಪಾಠ ಕಲಿಸಿದ್ದೆವು. ಲೋಂಗೆವಾಲಾ ಹೋರಾಟಕ್ಕೆ 2021ಕ್ಕೆ 50 ವರ್ಷ ಆಗಲಿದೆ. ಲೋಂಗವಾಲಾ ಗಡಿ ಬಗ್ಗೆ ಈಗಲೂ ನೆನಪಿಸಿಕೊಳ್ಳುತ್ತಾರೆ. ನಿಮ್ಮ ಸಹೋದ್ಯೋಗಿಗಳು ಅಂತಹ ಶೌರ್ಯ ಮೆರೆದಿದ್ದಾರೆ ಎಂದು ಮೋದಿ ಹೇಳಿದರು.
Published On - 11:50 am, Sat, 14 November 20