ನವದೆಹಲಿ: ಕೇಂದ್ರ ಸರಕಾರವು (Central Government) ಮೇ 2022ರಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ (GST) ಆದಾಯವನ್ನು ಪ್ರಕಟಿಸಿದೆ. ಮೇ (May) ತಿಂಗಳಲ್ಲಿ ₹1.40 ಲಕ್ಷ ಕೋಟಿಗಿಂತ ಹೆಚ್ಚು ಆದಯಾ ಸಂಗ್ರಹವಾಗಿದೆ ಎಂದು ಬುಧವಾರ ಸರ್ಕಾರ ತನ್ನ ಅಂಕಿ ಅಂಶಗಳಲ್ಲಿ ತಿಳಿಸಿದೆ. ಮೇ 2022 ರ ಆದಾಯವು ಕಳೆದ ವರ್ಷದ ಮೇ ತಿಂಗಳ ₹97,821 ಕೋಟಿಯ GST ಆದಾಯಕ್ಕಿಂತ 44% ಹೆಚ್ಚಾಗಿದೆ. ಆದರೆ ಹಿಂದಿನ ತಿಂಗಳ ಆದಾಯಕ್ಕಿಂತ ಶೇ 16% ಕಡಿಮೆಯಾಗಿದೆ. ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ₹1.67 ಲಕ್ಷ ಕೋಟಿಯನ್ನು ಮುಟ್ಟಿತ್ತು.
ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿಗೆ ಇಡಿ ಸಮನ್ಸ್
ಮೇ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ ₹1,40,885 ಕೋಟಿ ಇದರಲ್ಲಿ ಸಿಜಿಎಸ್‌ಟಿ ₹25,036 ಕೋಟಿ, ಎಸ್‌ಜಿಎಸ್‌ಟಿ ₹32,001 ಕೋಟಿ, ಐಜಿಎಸ್‌ಟಿ ₹73,345 ಕೋಟಿ ಮತ್ತು ಸೆಸ್ ₹10,502 ಕೋಟಿ ಇದೆ. “ಆರ್ಥಿಕ ವರ್ಷದ ಮೊದಲ ತಿಂಗಳ ಏಪ್ರಿಲ್‌ನ ಆದಾಯಕ್ಕಿಂತ ಮೇ ತಿಂಗಳ ಸಂಗ್ರಹಣೆಯು ಯಾವಾಗಲೂ ಕಡಿಮೆಯಿರುತ್ತದೆ. ಇದು ಆರ್ಥಿಕ ವರ್ಷದ ಮುಕ್ತಾಯದ ಮಾರ್ಚ್‌ನ ಆದಾಯಕ್ಕೆ ಸಂಬಂಧಿಸಿದೆ. ಆದಾಗ್ಯೂ, 2022 ರ ಮೇ ತಿಂಗಳಿನಲ್ಲಿಯೂ ಸಹ ಒಟ್ಟು ಜಿಎಸ್‌ಟಿ ಸಂಗ್ರಹವು ₹ 1.40 ಲಕ್ಷ ಕೋಟಿಯ ಗಡಿಯನ್ನು ದಾಟಿರುವುದು ಉತ್ತೇಜನಕಾರಿಯಾಗಿದೆ, ”ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಮಿಂಟ್ ವರದಿ ಮಾಡಿದೆ.
ಇದನ್ನು ಓದಿ: ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ ಮನವಿ ವಾಪಸ್ ಪಡೆದ ಬಿಷ್ಣೋಯ್, ಪಂಜಾಬ್ ಕೋರ್ಟ್ ಮೆಟ್ಟಿಲೇರಲು ನಿರ್ಧಾರ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್‌ಟಿ ಸಂಗ್ರಹವು ನಾಲ್ಕನೇ ಬಾರಿಗೆ ₹1.40 ಲಕ್ಷ ಕೋಟಿ ದಾಟಿದೆ. ತಿಂಗಳ ಅವಧಿಯಲ್ಲಿ, ಸರಕುಗಳ ಆಮದು ಆದಾಯವು ಶೇ 43 ರಷ್ಟು ಹೆಚ್ಚಾಗಿದೆ . ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವನ್ನು ಕಳೆದ ವರ್ಷ ಮೇಗೆ ಹೋಲಿಸದರೆ ಶೇ 44 ರಷ್ಟು ಹೆಚ್ಚಾಗಿದೆ. ಏಪ್ರಿಲ್ 2022 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 7.4 ಕೋಟಿಯಾಗಿದೆ, ಇದು ಸರ್ಕಾರದ ಅಂಕಿಅಂಶಗಳ ಪ್ರಕಾರ ಮಾರ್ಚ್ 2022 ರಲ್ಲಿ ಉತ್ಪತ್ತಿಯಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇ 4 ರಷ್ಟು ಕಡಿಮೆಯಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:00 pm, Wed, 1 June 22