Priyanka Sharma: ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಶರ್ಮಾ

| Updated By: ನಯನಾ ರಾಜೀವ್

Updated on: Dec 23, 2022 | 12:43 PM

ಮಹಿಳೆಯರಿಗೆಲ್ಲಿ ವಾಹನ ಸರಿಯಾಗಿ ಚಲಾಯಿಸಲು ಬರುತ್ತದೆ ಎಂದು ವ್ಯಂಗ್ಯವಾಡುವವರು ಕೂಡ ಪ್ರಿಯಾಂಕಾ ಶರ್ಮಾರ ಡ್ರೈವಿಂಗ್ ನೋಡಿ ಬೆರಗಾಗಲೇಬೇಕು. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರಿಯಾಂಕಾ ಸಾಕ್ಷಿಯಾಗಿದ್ದಾರೆ.

Priyanka Sharma: ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಶರ್ಮಾ
Priyanka Sharma
Follow us on

ಮಹಿಳೆಯರಿಗೆಲ್ಲಿ ವಾಹನ ಸರಿಯಾಗಿ ಚಲಾಯಿಸಲು ಬರುತ್ತದೆ ಎಂದು ವ್ಯಂಗ್ಯವಾಡುವವರು ಕೂಡ ಪ್ರಿಯಾಂಕಾ ಶರ್ಮಾರ ಡ್ರೈವಿಂಗ್ ನೋಡಿ ಬೆರಗಾಗಲೇಬೇಕು. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರಿಯಾಂಕಾ ಸಾಕ್ಷಿಯಾಗಿದ್ದಾರೆ. ಪ್ರಿಯಾಂಕಾ ಶರ್ಮಾ, ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಯುಪಿಎಸ್‌ಆರ್‌ಟಿಸಿ) ನೇಮಿಸಿಕೊಂಡ 26 ಮಹಿಳಾ ಚಾಲಕರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ.

ತನ್ನ ಕಷ್ಟ ಕಾರ್ಪಣ್ಯಗಳ ನಡುವೆಯೇ ಛಲಬಿಡದೆ ಡ್ರೈವಿಂಗ್ ಕಲಿತಿದ್ದಾರೆ. ಈ ಕುರಿತು ಎಎನ್​ಐ ಜತೆಗೆ ಮಾತನಾಡಿರುವ ಅವರು,  ಅತಿಯಾದ ಕುಡಿತದ ಚಟದಿಂದ ನನ್ನ ಪತಿ ಮದುವೆಯಾಗಿ ಸ್ವಲ್ಪ ವರ್ಷದಲ್ಲೇ ನಿಧನರಾದರು. ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನನ್ನ ಮೇಲಿತ್ತು ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ದೃಷ್ಟಿಯಿಂದ ತಾನು ಕೆಲಸಕ್ಕೆ ಸೇರಲೇಬೇಕಾಯಿತು ಎಂದು ಹೇಳಿದರು.

ಈ ಬಸ್​ ಡ್ರೈವರ್ ಕೆಲಸ ಮಹಿಳೆಯರಿಗೆ ಅಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಅವಕಾಶ ಸಿಕ್ಕರೆ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಫೈಟರ್ ಪ್ಲೇನ್ ಹಾರಿಸುವುದೋ ಅಥವಾ ಬಸ್ ಡ್ರೈವರ್ ಆಗುವುದೋ ಎನ್ನುವ ಗೊಂದಲವಿತ್ತು. ಕೆಲಸ ಹುಡುಕಿಕೊಂಡು ಪ್ರಿಯಾಂಕಾ ದೆಹಲಿಗೆ ಬಂದಿದ್ದರು. ಇಲ್ಲಿ ಅವನಿಗೆ ಕಾರ್ಖಾನೆಯೊಂದರಲ್ಲಿ ಸಹಾಯಕಳಾಗಿ ಕೆಲಸ ಮಾಡಿದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು ಡ್ರೈವಿಂಗ್ ಕೋರ್ಸ್‌ಗೆ ಪ್ರವೇಶ ಪಡೆದರು.

ಪ್ರಿಯಾಂಕಾ ಡ್ರೈವಿಂಗ್ ಕೋರ್ಸ್ ಮಾಡಿ ದೆಹಲಿಯಿಂದ ಮುಂಬೈಗೆ ಬಂದಿದ್ದರು. ಇಲ್ಲಿಗೆ ಬಂದ ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದರು. ಈ ಸಮಯದಲ್ಲಿ ಅವರು ಅಸ್ಸಾಂ ಮತ್ತು ಬಂಗಾಳ ರಾಜ್ಯಗಳಿಗೂ ಹೋದರು, ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳಾ ಚಾಲಕರಿಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಿಯಾಂಕಾ ಶರ್ಮಾ ಧನ್ಯವಾದ ತಿಳಿಸಿದ್ದಾರೆ. ಅವರು 2020 ರಲ್ಲಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ