Patna: ಮೇಘಾಲಯದ ಇಬ್ಬರು ಪಾದ್ರಿಗಳ ಮೇಲೆ ಅಪರಿಚಿತರಿಂದ ಹಲ್ಲೆ

|

Updated on: Apr 12, 2023 | 8:10 AM

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆಲಮ್​ಗಂಜ್ ಪೊಲೀಸರು ತಿಳಿಸಿದ್ದಾರೆ.

Patna: ಮೇಘಾಲಯದ ಇಬ್ಬರು ಪಾದ್ರಿಗಳ ಮೇಲೆ ಅಪರಿಚಿತರಿಂದ ಹಲ್ಲೆ
ಪೊಲೀಸ್
Follow us on

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆಲಮ್​ಗಂಜ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರೂ ಪಾದ್ರಿಗಳು ರಾತ್ರಿ ಊಟಕ್ಕೆ ಮನೆಗೆ ಹೋಗಿದ್ದರು, ಆಗ ಮಹಿಳೆಯರೂ ಸೇರಿದಂತೆ ಹಲವು ಮಂದಿ ಪಾದ್ರಿಗಳನ್ನು ಥಳಿಸಿದ್ದಾರೆ.

ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾದ್ರಿಗಳನ್ನು ತಕ್ಷಣವೇ ಠಾಣೆಗೆ ಕರೆತಂದಿದ್ದಾರೆ. ಪೊಲೀಸರು ದುಷ್ಕರ್ಮಿಗಳನ್ನು ಗುರುತಿಸುವಂತೆ ಕೇಳಿದರೂ, ಗುರುತಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರು ಮೇಘಾಲಯದ ಪ್ರೆಸ್ಬಿಟೇರಿಯನ್ ಚರ್ಚ್​ನ ಪಾದ್ರಿಗಳಾಗಿದ್ದಾರೆ. ಇಬ್ಬರೂ ತುಂಬಾ ಹೆದರಿದ್ದ ಕಾರಣ ಯಾವ ದೂರನ್ನೂ ನೀಡದೆ ತಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಮತ್ತಷ್ಟು ಓದಿ: Religion Conversion: ಶಿವಮೊಗ್ಗದಲ್ಲಿ ಮತಾಂತರ ಆರೋಪ, ಪಾದ್ರಿ ಮನೆಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು

ಪೊಲೀಸರು ಸಿಸಿಟಿವಿಯ ದೃಶ್ಯಾವಳಿಗಳನ್ನು ಪಶರಿಶೀಲಿಸಿ ಆರೋಪಿಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಮೇಘಾಲಯ ಪೊಲೀಸರು ಕೂಡ ಅವರನ್ನು ಸಂಪರ್ಕಿಸಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಟ್ವೀಟ್ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ಬಿಹಾರ ಮೂಲಕ ರೈಲಿನಲ್ಲಿ ಪ್ರಯಾಣಿಸುವ ಈಶಾನ್ಯ ರಾಜ್ಯಗಳ ಪ್ರಯಾಣಿಕರಿಗೆ ಕಿರುಕುಳ ಮತ್ತು ದೈಹಿಕ ಚಿತ್ರಹಿಂಸೆ ನೀಡುತ್ತಿರುವುದು ಇದೇ ಮೊದಲಲ್ಲ.

ರೈಲು ಬಿಹಾರದ ಮೂಲಕ ಹಾದು ಹೋಗುತ್ತಿದ್ದಾಗ ಈಶಾನ್ಯ ರಾಜ್ಯಗಳ ಹಲವಾರು ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳು ಈ ಹಿಂದೆ ಕೆಟ್ಟದಾಗಿ ನಡೆಸಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ