ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಜುಲೈ 12 ರಂದು ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಹೊಂದಿರುವ ಎಲ್ಲ ಪಕ್ಷಗಳ ಸಮಾಲೋಚನಾ ಸಭೆ ನಡೆಸಿ ಮೇಕೆದಾಟು ಅಣೆಕಟ್ಟು ಕುರಿತು ಚರ್ಚಿಸಲಿದ್ದಾರೆ. ರೈತರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ತಮಿಳುನಾಡಿನ ಎಲ್ಲ ವರ್ಗಗಳ ಸರ್ವಾನುಮತದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಸಭೆ ನಡೆಯಲಿದೆ ಎಂದು ಸರ್ಕಾರರ ಮೂಲಗಳು ಹೇಳಿವೆ.
ಈ ವಿಷಯದ ಬಗ್ಗೆ ಸರ್ಕಾರ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಕೆಲವು ದಿನಗಳ ಹಿಂದೆ ಸ್ಟಾಲಿನ,ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವಿತ ಅಣೆಕಟ್ಟು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿದೆ ಮತ್ತು ತಮಿಳುನಾಡು ರೈತರ ಹಿತಾಸಕ್ತಿಗೆ ಸಹ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.
ಆದ್ದರಿಂದ, ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎಂದಿಗೂ ಅವಕಾಶ ನೀಡುವುದಿಲ್ಲ ಮತ್ತು ಇದನ್ನು ಯಡಿಯೂರಪ್ಪ ಅವರಿಗೆ ಸ್ಟಾಲಿನ್ ಬರೆದ ಪತ್ರದಲ್ಲಿ ಕರ್ನಾಟಕಕ್ಕೆ ತಿಳಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಕೆದಾಟು ಅಣೆಕಟ್ಟಿಗೆ ವಿರೋಧ ಬೇಡ ಎಂದು ತಮಿಳುನಾಡು ಸರ್ಕಾರಕ್ಕೆ ಪ್ರತಿಕ್ರಿಯೆಯಾಗಿ ಯಡಿಯೂರಪ್ಪ ಪತ್ರ ಬರೆದಿದ್ದರು.
ಇತ್ತೀಚೆಗೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ಜಲಸಂಪನ್ಮೂಲ ಸಚಿವ ದುರೈಮುರುಗನ್ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ತಮಿಳುನಾಡಿನ ರೈತರ ಹಿತಾಸಕ್ತಿಗಳನ್ನು ಕಾಪಾಡಬೇಕು ಮತ್ತು ಸೂಕ್ತ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಉಭಯ ನಾಯಕರು ಮೋದಿ ಮತ್ತು ಶೇಖಾವತ್ ಅವರನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು, ವಿಧಾನಸಭೆಯ ಎಲ್ಲಾ ಶಾಸಕಾಂಗ ಪಕ್ಷಗಳಿಗೆ ಸ್ಟಾಲಿನ್ ಆಹ್ವಾನ ನೀಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
(Mekedatu dam row Tamil Nadu CM M K Stalin has convened a consultative meeting on July 12 )