[lazy-load-videos-and-sticky-control id=”cTwsSHPiMpI”]
ಚೆನ್ನೈ: ಗಾನ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಶಾಶ್ವತವಾಗಿ ತಮ್ಮ ಗಾಯನವನ್ನ ನಿಲ್ಲಿಸಿದ್ದಾರೆ. ಕೊನೆ ಉಸಿರಿನವೆರೆಗೆ ಗಾಯನದ ಮೂಲಕ ಜನರನ್ನು ತಲುಪಿದ್ದ ಗಾಯಕನ ಅಂತಿಮ ಯಾತ್ರೆ ಶುರುವಾಗಿದೆ.
ಆಸ್ಪತ್ರೆಯಿಂದ SPB ಅವರಿಗೆ ನೆಗೆಟಿವ್ ರಿಪೋರ್ಟ್ ಬಂದ್ರೆ ಸತ್ಯಂ ಥಿಯೇಟರ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಒಂದು ವೇಳೆ ಕೊರೊನಾ ಪಾಸಿಟಿವ್ ಅಂತ ಮಾಹಿತಿ ಬಂದ್ರೆ ಚೆನ್ನೈನ ಹೊರ ಭಾಗದ ನೆಲ್ಲೂರು ರಸ್ತೆಯ ತಾಮರೈ ಪಾಕಂನಲ್ಲಿರುವ SPB ಅವರ ಫಾರ್ಮ್ ಹೌಸ್ನಲ್ಲಿ ಅಂತಿಮ ವಿಧಿ ವಿಧಾನ ಮಾಡಲಾಗುತ್ತೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಎಂಬಾಲ್ಮಿಂಗ್ ಮಾಡಿ ಎಸ್ಪಿಬಿ ಪಾರ್ಥಿವ ಶರೀರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತೆ ಎಂಬ ಮಾಹಿತಿಯೂ ಸಿಕ್ಕಿದೆ. ಎಂಬಾಲ್ಮಿಂಗ್.. ಮೃತದೇಹ ಕೆಡದಂತೆ ಸಂರಕ್ಷಣೆ ಮಾಡುವ ವಿಧಾನ.
MGM ಆಸ್ಪತ್ರೆಯಿಂದ 40 ಕಿ.ಮೀ ದೂರದಲ್ಲಿರುವ ರೆಡ್ ಹಿಲ್ಸ್ ಫಾರ್ಮ್ ಹೌಸ್ನಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆಗೆ ನಿರ್ಧರಿಸಲಾಗಿದೆ.
ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿರುವ ಕುಟುಂಬಸ್ಥರು:
ಇನ್ನು ತಮಿಳುನಾಡು ಸರ್ಕಾರದ ಅನುಮತಿಗಾಗಿ SPBಕುಟುಂಬಸ್ಥರು ನಿರೀಕ್ಷೆಯಲ್ಲಿದ್ದಾರೆ. ನಾಳೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಅನುಮತಿ ನೀಡಿದರೆ ಕೋಡಂಬಾಕಂ ಮನೆಯಲ್ಲಿಟ್ಟು ರಾತ್ರಿಯೆಲ್ಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಸರ್ಕಾರ ಅವಕಾಶ ಕೊಡದಿದ್ರೆ ನಾಳೆ ಬೆಳಗ್ಗೆ ರೆಡ್ ಹಿಲ್ಸ್ ಫಾರ್ಮ್ ಹೌಸ್ನಲ್ಲಿ ಅಂತ್ಯಕ್ರಿಯೆಗೆ ನೆರವೇರಿಸಲಾಗುತ್ತೆ.
Published On - 2:12 pm, Fri, 25 September 20