ಕೊರೊನಾ ಮಧ್ಯೆಯೂ ಅಸೆಂಬ್ಲಿ ಚುನಾವಣೆ: ಆಯೋಗದ ದಿಟ್ಟ ನಿರ್ಧಾರ, ಬಿಹಾರಕ್ಕೆ 3 ಹಂತದ ಚುನಾವಣೆ
ದೆಹಲಿ: ಬಿಹಾರದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಇಂದು ಸುದ್ದಿಗೋಷ್ಠಿ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಸುದ್ದಿಗೋಷ್ಠಿ ನಡೆಸಿದರು. ನವೆಂಬರ್ 29 ಕ್ಕೆ ಬಿಹಾರದ ವಿಧಾನ ಸಭೆಯ ಅವಧಿ ಅಂತ್ಯವಾಗುತ್ತದೆ. ಹಾಗಾಗಿ, ಬಿಹಾರದ 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿಕೆ ನೀಡಿದ್ದಾರೆ. ನವೆಂಬರ್ 10ರಂದು ಬಿಹಾರ ಚುನಾವಣಾ ಫಲಿತಾಂಶ ಮೊದಲ ಹಂತದ ಚುನಾವಣೆಗೆ ಅ. 1ರಂದು ಅಧಿಸೂಚನೆ […]
ದೆಹಲಿ: ಬಿಹಾರದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಇಂದು ಸುದ್ದಿಗೋಷ್ಠಿ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಸುದ್ದಿಗೋಷ್ಠಿ ನಡೆಸಿದರು. ನವೆಂಬರ್ 29 ಕ್ಕೆ ಬಿಹಾರದ ವಿಧಾನ ಸಭೆಯ ಅವಧಿ ಅಂತ್ಯವಾಗುತ್ತದೆ. ಹಾಗಾಗಿ, ಬಿಹಾರದ 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿಕೆ ನೀಡಿದ್ದಾರೆ.
ನವೆಂಬರ್ 10ರಂದು ಬಿಹಾರ ಚುನಾವಣಾ ಫಲಿತಾಂಶ ಮೊದಲ ಹಂತದ ಚುನಾವಣೆಗೆ ಅ. 1ರಂದು ಅಧಿಸೂಚನೆ ಹೊರಡಿಸಲಾಗುವುದು. ಅ. 28ರಂದು ಬಿಹಾರದಲ್ಲಿ ಮೊದಲ ಹಂತದ ಮತದಾನ. ನ. 3ರಂದು ಬಿಹಾರದಲ್ಲಿ ಎರಡನೇ ಹಂತದ ಮತದಾನ. ನ. 7ರಂದು ಬಿಹಾರದಲ್ಲಿ ಮೂರನೇ ಹಂತದ ಮತದಾನ. ನವೆಂಬರ್ 10ರಂದು ಬಿಹಾರ ಚುನಾವಣಾ ಫಲಿತಾಂಶ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
70ಕ್ಕೂ ಹೆಚ್ಚು ದೇಶಗಳು ಚುನಾವಣೆಯನ್ನು ಮುಂದೂಡಿವೆ. ಆದರೆ, ಕೊರೊನಾ ಸಂಕಷ್ಟದ ನಡುವೆಯೂ ಚುನಾವಣೆ ನಡೆಸಲು ನಿರ್ಧಾರ ಕೈಗೊಂಡಿದ್ದೇವೆ. ಚುನಾವಣೆ ಪ್ರಜಾಪ್ರಭುತ್ವದಲ್ಲಿ ಜನರಿಗಿರುವ ಅಧಿಕಾರ. ಸುರಕ್ಷತೆ ಕ್ರಮಗಳೊಂದಿಗೆ ಚುನಾವಣೆಯನ್ನು ನಡೆಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿಕೆ ನೀಡಿದ್ದಾರೆ.
ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಮಾಡಲಾಗಿದೆ. ಒಂದು ಮತಗಟ್ಟೆಯಲ್ಲಿ ಒಂದು ಸಾವಿರ ಮತದಾರರಿಗೆ ಮಾತ್ರ ಅವಕಾಶವಿದೆ. ಜೊತೆಗೆ, ಚುನಾವಣೆಯಲ್ಲಿ 7 ಲಕ್ಷ ಹ್ಯಾಂಡ್ ಸ್ಯಾನಿಟೈಸರ್, 6 ಲಕ್ಷ PPE ಕಿಟ್, 6 ಲಕ್ಷ ಫೇಸ್ ಶೀಲ್ಡ್, 46 ಲಕ್ಷ ಮಾಸ್ಕ್ ಮತ್ತು 23 ಲಕ್ಷ ಗ್ಲೌಸ್‌ಗಳನ್ನು ಬಳಸಾಗುವುದು ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಒಟ್ಟು ಮತದಾರರ ಸಂಖ್ಯೆ 7.79 ಕೋಟಿ. ಹೀಗಾಗಿ, ಮತದಾನದ ಸಮಯವನ್ನು ಹೆಚ್ಚಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಐದಕ್ಕಿಂತ ಹೆಚ್ಚು ಜನ ಮನೆಗೆ ಹೋಗಿ ಪ್ರಚಾರ ಮಾಡಬಾರದು. ಜೊತೆಗೆ, ಕೊರೊನಾ ಸೋಂಕಿತರೂ ಮತದಾನವನ್ನು ಮಾಡಬಹುದು. ಕೊರೊನಾ ಪಾಸಿಟಿವ್ ಇರುವವರು ಕೊನೆಯಲ್ಲಿ ಮತದಾನ ಮಾಡಿ ಎಂದು ಕೇಂದ್ರ ಚುನಾವಣಾ ಆಯೋಗದ ತಿಳಿಸಿದೆ.
Published On - 1:19 pm, Fri, 25 September 20