ಮರ್ಯಾದಾ ಹತ್ಯೆ: ಪ್ರೀತಿಸಿ ವಿವಾಹವಾಗಿದ್ದಕ್ಕೆ ಪ್ರಿಯಕರನ ಹತ್ಯೆ, ಪ್ರಿಯತಮೆ ಬಚಾವ್
ಹೈದರಾಬಾದ್: ದೇಶಾದ್ಯಾಂತ ಸಂಚಲನ ಮೂಡಿಸಿದ್ದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದಂತೆಯೇ ಹೈದರಾಬಾದ್ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದೆ. ಪ್ರೀತಿಸಿ ವಿವಾಹವಾಗಿದ್ದ ಹೇಮಂತ್ ಹಾಗೂ ಆವಂತಿಯನ್ನು ಹೈದರಾಬಾದ್ ಗಚ್ಚಿಬೌಲಿಯಿಂದ ಇಬ್ಬರನ್ನೂ ಕಿಡ್ನ್ಯಾಪ್ ಮಾಡಿದ ನಂತರ, ಪತಿ ಹೇಮಂತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹೇಮಂತ್ ಹಾಗೂ ಆವಂತಿ ಇಬ್ಬರೂ ಪ್ರೀತಿಸಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬದಲ್ಲಿ ವಿರೋಧವಿತ್ತು. ಹೀಗಾಗಿ ಕುಟುಂಬದ ವಿರೋಧದ ನಡುವೆಯೇ ಇವರಿಬ್ಬರು ಮದುವೆಯಾಗಿ ಜೀವನ ಸಾಗಿಸುತ್ತಿದ್ದರು. ಯುವತಿ ಸಂಬಂಧಿಕರು ಕಾರ್ನಲ್ಲಿ ನವಜೋಡಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಈ ವೇಳೆ […]
ಹೈದರಾಬಾದ್: ದೇಶಾದ್ಯಾಂತ ಸಂಚಲನ ಮೂಡಿಸಿದ್ದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದಂತೆಯೇ ಹೈದರಾಬಾದ್ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದೆ.
ಪ್ರೀತಿಸಿ ವಿವಾಹವಾಗಿದ್ದ ಹೇಮಂತ್ ಹಾಗೂ ಆವಂತಿಯನ್ನು ಹೈದರಾಬಾದ್ ಗಚ್ಚಿಬೌಲಿಯಿಂದ ಇಬ್ಬರನ್ನೂ ಕಿಡ್ನ್ಯಾಪ್ ಮಾಡಿದ ನಂತರ, ಪತಿ ಹೇಮಂತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹೇಮಂತ್ ಹಾಗೂ ಆವಂತಿ ಇಬ್ಬರೂ ಪ್ರೀತಿಸಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬದಲ್ಲಿ ವಿರೋಧವಿತ್ತು. ಹೀಗಾಗಿ ಕುಟುಂಬದ ವಿರೋಧದ ನಡುವೆಯೇ ಇವರಿಬ್ಬರು ಮದುವೆಯಾಗಿ ಜೀವನ ಸಾಗಿಸುತ್ತಿದ್ದರು.
ಯುವತಿ ಸಂಬಂಧಿಕರು ಕಾರ್ನಲ್ಲಿ ನವಜೋಡಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಈ ವೇಳೆ ಯುವತಿ ಆವಂತಿ ಕಾರಿನಿಂದ ಜಿಗಿದು ಪರಾರಿಯಾಗಿದ್ದಾಳೆ. ಆದರೆ ಪತಿ ಹೇಮಂತ್ನನ್ನು ಉಳಿಸಲಾಗಿಲ್ಲ. ನಂತರ ನಿರ್ಜನ ಪ್ರದೇಶಕ್ಕೆ ಹೇಮಂತ್ನನ್ನು ಕರೆದೊಯ್ದು ಸುಪಾರಿ ಕಿಲ್ಲರ್ಗಳ ಮೂಲಕ ಯುವತಿ ಕುಟುಂಬ ಹತ್ಯೆ ಮಾಡಿಸಿದೆ.
ಯುವತಿ ಸೋದರಮಾವ ಯುಗೆಂದರರೆಡ್ಡಿ, ಕೆಲ ಸುಪಾರಿ ಕಿಲ್ಲರ್ಗಳು ಸೇರಿ ಹೇಮಂತ ಹತ್ಯೆ ಮಾಡಿದ್ದಾರೆ. ಸಂಗಾರೆಡ್ಡಿಯ ಕಿಷ್ಟನ್ ಗೂಡಾದ ನಿರ್ಜನ ಪ್ರದೇಶದಲ್ಲಿ ಹತ್ಯೆಗೀಡಾದ ಹೇಮಂತ್ ಶವ ಪತ್ತೆಯಾಗಿದೆ. ಗಚ್ಚಿಬೌಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.