
ಮಿಗ್ ಯುದ್ಧ ವಿಮಾನಗಳ ಸಾವಿನ ಸರಣಿ ಮುಂದುವರಿದಿದೆ. ಮಿಗ್ 21 ಬೈಸನ್ ಯುದ್ಧ ವಿಮಾನವು ಇಂದು ಅಪಘಾತಕ್ಕೀಡಾಗಿದ್ದು, ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಎ ಗುಪ್ತಾ ಸಾವಿಗೀಡಾಗಿದ್ದಾರೆ. ಮಿಗ್ 21 ಬೈಸನ್ ಯುದ್ಧ ವಿಮಾನವು ಆಕಾಶಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ತುತ್ತಾಗಿದೆ.
ಮಧ್ಯ ಭಾರತದಲ್ಲಿ ಐಎಎಫ್ಗೆ ಸೇರಿದ ವಾಯುಪಡೆಯ ನೆಲೆಯಲ್ಲಿ ತರಬೇತಿಯಲ್ಲಿದ್ದಾಗ ಇಂದು ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಭಾರತೀಯ ವಾಯುಪಡೆಯು ದುರಂತದ ಬಗ್ಗೆ ವಿಚಾರಣೆಗೆ ಆದೇಶಿಸಿದೆ.
Published On - 2:28 pm, Wed, 17 March 21