Manipur attack: ಮಣಿಪುರದಲ್ಲಿ ಉಗ್ರರ ಬಾಂಬ್​​ ದಾಳಿ, ಇಬ್ಬರು ಯೋಧರು ಹುತಾತ್ಮ

|

Updated on: Apr 27, 2024 | 3:17 PM

ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಕುಕಿ ಉಗ್ರರರು ಬಾಂಬ್​​ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಿಂದ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ. ಶಂಕಿತ ಕುಕಿ ದಂಗೆಕೋರರ ಗುಂಪು ನರನ್ಸೇನಾ ಗ್ರಾಮದ ಬೆಟ್ಟದಿಂದ ಕಣಿವೆ ಪ್ರದೇಶದ ಕಡೆಗೆ ಕೇಂದ್ರ ಭದ್ರತಾ ಪಡೆ ಪೋಸ್ಟ್​​​ನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಲಾಗಿದೆ.

Manipur attack: ಮಣಿಪುರದಲ್ಲಿ ಉಗ್ರರ ಬಾಂಬ್​​ ದಾಳಿ, ಇಬ್ಬರು ಯೋಧರು ಹುತಾತ್ಮ
Follow us on

ಮಣಿಪುರ, ಏ.27; ಇಂದು ಮುಂಜಾನೆ ಮಣಿಪುರದ (Manipur attack)  ಬಿಷ್ಣುಪುರ್ ಜಿಲ್ಲೆಯಲ್ಲಿ ಶಂಕಿತ ಉಗ್ರರರು ನಡೆಸಿದ ಬಾಂಬ್​​ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಶಂಕಿತ ಕುಕಿ ದಂಗೆಕೋರರ ಗುಂಪು ನರನ್ಸೇನಾ ಗ್ರಾಮದ ಬೆಟ್ಟದಿಂದ ಕಣಿವೆ ಪ್ರದೇಶದ ಕಡೆಗೆ ಕೇಂದ್ರ ಭದ್ರತಾ ಪಡೆ ಪೋಸ್ಟ್​​​ನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿತು. ಔಟ್‌ಪೋಸ್ಟ್‌ನಲ್ಲಿ ಬಾಂಬ್ ದಾಳಿಯನ್ನು ನಡೆಸಲಾಗಿದೆ. ಇದರಿಂದ ನಾಲ್ವರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ತಕ್ಷಣ ಚಿಕಿತ್ಸೆ ನೀಡಿದರು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ದಂಗೆ ಹರುವ ಮುನ್ನವೇ ಈ ದಾಳಿ ನಡೆದಿದೆ. ಬೆಟ್ಟಗಳಲ್ಲಿ ಅಡಗಿರುವ ಉಗ್ರರು ಮುಂದಿನ ದಿನಗಳಲ್ಲಿ ದಾಳಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಹುತಾತ್ಮ ಯೋಧರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸೇರಿದವರು. ಈ ಇಬ್ಬರು ನರಂಸೇನಾದಲ್ಲಿ ನೆಲೆಸಿದ್ದರು, ಮೃತರನ್ನು ಸಿಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ಎನ್ ಸರ್ಕಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅರುಪ್ ಸೈನಿ ಎಂದು ಗುರುತಿಸಲಾಗಿದೆ.

ಇನ್ನು ಬಾಂಬ್​​ ದಾಳಿಯಲ್ಲಿ ಗಾಯಗೊಂಡವರು, ಇನ್ಸ್ ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್ ಸ್ಟೇಬಲ್ ಅಫ್ತಾಬ್ ದಾಸ್ ಎಂದು ಹೇಳಲಾಗಿದೆ. ಈ ಉಗ್ರರರು ಮಧ್ಯರಾತ್ರಿ ಸುಮಾರು 2:15ಕ್ಕೆ ದಾಳಿ ಮಾಡಲು ಶುರು ಮಾಡಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿ ಚುನಾವಣಾ ಕರ್ತವ್ಯಕ್ಕೆ ಸಿಆರ್‌ಪಿಎಫ್ ಸಿಬ್ಬಂದಿ ನೆಲೆಸಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಶಿಬಿರದ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ:ಕಾಂಗ್ರೆಸ್​​​ಗೆ ನಮ್ಮ ಮತ ಬೇಕು, ಆದರೆ ಮುಸ್ಲಿಮರ ನಾಯಕತ್ವ ಬೇಡ: ಕಾಂಗ್ರೆಸ್​​ ನಾಯಕ

ಈ ಶಿಬಿರವು ಬೆಟ್ಟಗಳಿಂದ 2 ಕಿಲೋಮೀಟರ್ ದೂರದಲ್ಲಿದೆ. ಶಿಬಿರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮೇಲ್ ಕಾಲುವೆ ಎಂದು ಕರೆಯಲ್ಪಡುವ ಪ್ರದೇಶವಿದೆ. ಇದನ್ನು ಕಳೆದ ವರ್ಷ ಮೇನಲ್ಲಿ ಮಣಿಪುರದಲ್ಲಿ ಹಿಂಸಾಚಾರ ನಡೆದಾಗ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಈ ಕಾರಣದಿಂದ ಇಲ್ಲಿ, ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಮೂಲಗಳ ಪ್ರಕಾರ ಶಿಬಿರದ ಮೇಲೆ ದಾಳಿಯನ್ನು ನಡೆಸಲು ಬಂಡುಕೋರರು “ಪಂಪಿ ಗನ್” ಎಂಬ ಕಚ್ಚಾ ಫಿರಂಗಿ ಶಸ್ತ್ರಾಸ್ತ್ರವನ್ನು ಬಳಸಿದರು. ಇದೀಗ ಈ ದಾಳಿಯ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:16 pm, Sat, 27 April 24