AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Election 2024: ಬಿಜೆಪಿಗೆ ಸಿಖ್ಖರ ಬಲ, ದೆಹಲಿಯಲ್ಲಿ 1,500 ಮಂದಿ ಸಿಖ್ಖರು ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಯ ನಡುವೆ ಬಿಜೆಪಿಗೆ ಸಿಖ್ ಸಮುದಾಯದ ಬೆಂಬಲ ಸಿಕ್ಕಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಸಿಖ್ ಸಮುದಾಯದ 1,500 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು.

Lok Sabha Election 2024: ಬಿಜೆಪಿಗೆ ಸಿಖ್ಖರ ಬಲ, ದೆಹಲಿಯಲ್ಲಿ 1,500 ಮಂದಿ ಸಿಖ್ಖರು ಬಿಜೆಪಿಗೆ ಸೇರ್ಪಡೆ
ಸಿಖ್ಖರು ಬಿಜೆಪಿಗೆ ಸೇರ್ಪಡೆ
Follow us
ನಯನಾ ರಾಜೀವ್
|

Updated on: Apr 28, 2024 | 8:10 AM

ಲೋಕಸಭಾ ಚುನಾವಣೆ(Lok Sabha Election)ಯ ಹೊಸ್ತಿಲಲ್ಲೇ 1,500 ಮಂದಿ ಸಿಖ್ಖರು(Sikhs) ಬಿಜೆಪಿ(BJP)ಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಭಾರಿ ಬಲ ಬಂದಂತಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಸಿಖ್ ಸಮುದಾಯದ ಜನರು ಪಕ್ಷಕ್ಕೆ ಸೇರ್ಪಡೆಗೊಂಡರು.

ದೇಶದಲ್ಲಿ 2024ರ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿರುವ ಹೊತ್ತಿನಲ್ಲೇ ಇವರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡ ಮಾತನಾಡಿ, ನಮ್ಮ ಸಿಖ್ ಸಹೋದರರು ದೇಶಕ್ಕಾಗಿ ಹೇಗೆ ಪ್ರಾಣ ತ್ಯಾಗ ಮಾಡಿದರು ಎಂಬುದು ನಮಗೆ ಗೊತ್ತಿದೆ. ದೇಶದ ಮೇಲೆ ನಡೆದ ಎಲ್ಲಾ ದಾಳಿಗಳಿಗೆ ತಕ್ಕ ಉತ್ತರ ನೀಡಿದ್ದ ಸಿಖ್ ಸಹೋದರರು ಅಪಾರ ಕೊಡುಗೆ ನೀಡಿದ್ದಾರೆ.

ಇಂತಹ ಸಿಖ್ ಸಮುದಾಯದವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ನಮಗೆ ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗಿದೆ ಎಂದರು.

ಪ್ರಧಾನಿ ಮೋದಿ ಸಿಖ್ ಸಮುದಾಯಕ್ಕಾಗಿ ಕೆಲಸ ಮಾಡಿದ್ದಾರೆ: ಜೆಪಿ ನಡ್ಡಾ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ನಾವು ಮುನ್ನಡೆಸುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಇದರಲ್ಲಿ ನಿಮ್ಮ ದೊಡ್ಡ ಕೊಡುಗೆ ಇದೆ, ನಿಮ್ಮ ಸಹಭಾಗಿತ್ವದೊಂದಿಗೆ ನಾವು ಈ ಕಾರ್ಯವನ್ನು ತ್ವರಿತಗತಿಯಲ್ಲಿ ಮುನ್ನಡೆಸುತ್ತೇವೆ. ಯಾರಾದರೂ ನಿಜವಾಗಿಯೂ ಸಿಖ್ ಸಮುದಾಯಕ್ಕಾಗಿ ಕೆಲಸ ಮಾಡಿದ್ದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ . ಮೋದಿಯವರು ಅವರು ಬಹಳ ಸಮಯದಿಂದ ಪಂಜಾಬ್‌ನ ಉಸ್ತುವಾರಿ ವಹಿಸಿದ್ದಾರೆ.

1984ರ ಗಲಭೆ ಕುರಿತು ಪ್ರಧಾನಿ ಮೋದಿ ಎಸ್‌ಐಟಿ ರಚಿಸಿದ್ದಾರೆ: ನಡ್ಡಾ

1984ರ ಗಲಭೆಗಳ ಕುರಿತು ಪ್ರಧಾನಿ ಮೋದಿ ಅವರು ಎಸ್‌ಐಟಿ ರಚಿಸಿದರು ಮತ್ತು ಇಂದು ಆ ಗಲಭೆಗಳ ಅಪರಾಧಿಗಳು ಜೈಲಿನಲ್ಲಿದ್ದಾರೆ ಎಂದರು.

ಕಾಂಗ್ರೆಸ್ ನಮ್ಮ ಮೇಲೆ ದೌರ್ಜನ್ಯ ನಡೆಸಿದೆ: ಮಂಜಿಂದರ್ ಸಿಂಗ್ ಸಿರ್ಸಾ

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, 1947ರಿಂದ ಇಲ್ಲಿಯವರೆಗೆ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು. ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸಿತು ಮತ್ತು 1984 ರ ಸಿಖ್ ದಂಗೆಯಲ್ಲಿ ಜನರನ್ನು ಸಜೀವ ದಹನ ಮಾಡಲಾಯಿತು. ಆ ಗಲಭೆಯ ಹೊಣೆಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ವಹಿಸಿಕೊಂಡಿದ್ದರು ಎಂದಿದ್ದಾರೆ.

ಜಸ್ಮೆನ್ ಸಿಂಗ್ ನೋನಿ, ಪರ್ಮಿಂದರ್ ಸಿಂಗ್ ಲಕ್ಕಿ, ಭೂಪೇಂದರ್ ಸಿಂಗ್ ಗಿನ್ನಿ, ರಮಣದೀಪ್ ಸಿಂಗ್ ಥಾಪರ್, ರಾಮನ್ಜೋತ್ ಸಿಂಗ್ ಮೀಟಾ, ಹರ್ಜೀತ್ ಸಿಂಗ್ ಪಪ್ಪಾ ಮತ್ತು ಮಂಜೀತ್ ಸಿಂಗ್ ಔಲಾಖ್ ಮುಂತಾದ ಸಿಖ್ಖರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ