ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​​ ಫೋಟೋಗೆ ಕ್ಷೀರಾಭಿಷೇಕ ಮಾಡಿ, ಸನಾತನ ಧರ್ಮದ ಹೇಳಿಕೆ ಸಮರ್ಥಿಸಿಕೊಂಡ ಸಂಘಟನೆಗಳು

|

Updated on: Sep 08, 2023 | 2:25 PM

ಆಂಧ್ರಪ್ರದೇಶದ ಒಂಗೋಲ್‌ನಲ್ಲಿ ಉದಯನಿಧಿ ಸ್ಟಾಲಿನ್ ಕಾಮೆಂಟ್‌ಗಳನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಸನಾತನ ಧರ್ಮದ ಕೆಲವು ಮೂಢನಂಬಿಕೆಗಳನ್ನು ಹೋಗಲಾಡಿಸಲು ಉದಯನಿಧಿ ಅವರ ಮಾತುಗಳು ಸರಿಯಾಗಿವೆ. ಆದರೆ ಕೆಲವು ಹಿಂದೂ ಸಂಘಟನೆಗಳು ಅವರ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸಿ ಅಪಪ್ರಚಾರ ಮಾಡುತ್ತಿವೆ ಎಂದಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​​ ಫೋಟೋಗೆ ಕ್ಷೀರಾಭಿಷೇಕ ಮಾಡಿ, ಸನಾತನ ಧರ್ಮದ ಹೇಳಿಕೆ ಸಮರ್ಥಿಸಿಕೊಂಡ ಸಂಘಟನೆಗಳು
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​​ ಫೋಟೋಗೆ ಕ್ಷೀರಾಭಿಷೇಕ
Follow us on

ಒಂಗೋಲ್​ (ಆಂಧ್ರ ಪ್ರದೇಶ), ಸೆಪ್ಟೆಂಬರ್ 08: ಸಿನಿಮಾ ನಟ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರಿಂದಾಗಿ ಸನಾತನ ಧರ್ಮದ ವಿಚಾರ ದೇಶಾದ್ಯಂತ ರಾಜಕೀಯ ಬಿಸಿಯೇರಿಸಿದೆ. ಉದಯನಿಧಿ ಹೇಳಿಕೆಗೆ ಬಿಜೆಪಿ ಸೇರಿದಂತೆ ಅಧ್ಯಾತ್ಮವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನುಕೆಲವರು ಉದಯನಿಧಿ ಅವರನ್ನು ಬೆಂಬಲಿಸುತ್ತಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಕಾಮೆಂಟ್‌ಗಳು ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಸನಾತನ ಧರ್ಮದ ಕುರಿತು ಅವರ ಹೇಳಿಕೆಯನ್ನು ಬೆಂಬಲಿಸಿ ಅವರ ಅಭಿಮಾನಿಗಳು ಸ್ಟಾಲಿನ್ ಅವರ ಭಾವಚಿತ್ರಕ್ಕೆ ಹಾಲಿನ ಸುರಿಮಳೆ ಮಾಡಿರುವ ಪ್ರಸಂಗಗಳೂ ನಡೆಯುತ್ತಿವೆ ಇದು ತೀವ್ರ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಆಂಧ್ರಪ್ರದೇಶದ ಒಂಗೋಲ್‌ನಲ್ಲಿ ಉದಯನಿಧಿ ಸ್ಟಾಲಿನ್ ಕಾಮೆಂಟ್‌ಗಳನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಸನಾತನ ಧರ್ಮದ ಕೆಲವು ಮೂಢನಂಬಿಕೆಗಳನ್ನು ಹೋಗಲಾಡಿಸಲು ಉದಯನಿಧಿ ಅವರ ಮಾತುಗಳು ಸರಿಯಾಗಿವೆ. ಆದರೆ ಕೆಲವು ಹಿಂದೂ ಸಂಘಟನೆಗಳು ಅವರ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸಿ ಅಪಪ್ರಚಾರ ಮಾಡುತ್ತಿವೆ ಎಂದಿದ್ದಾರೆ. ಬಾಪಟ್ ಜಿಲ್ಲೆ ಅಡ್ಡಕಿಯಲ್ಲಿ ದಲಿತ ಮತ್ತು ಪ್ರಜಾ ಸಂಘಗಳ ನೇತೃತ್ವದಲ್ಲಿ ಉದಯನಿಧಿ ಅವರನ್ನು ಬೆಂಬಲಿಸಿ ಫ್ಲೆಕ್ಸಿಗೆ ಹಾಲಿ ಅಭಿಷೇಕ ಮಾಡಿ, ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನೂ ಕೆಲ ಸಾರ್ವಜನಿಕ ಸಂಘಟನೆಗಳ ಮುಖಂಡರು ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರ ಭಾವಚಿತ್ರ, ಫ್ಲೆಕ್ಸ್​​ಗಳಿಗೆ ಹಾರ ಹಾಕಿ ಆಶೀರ್ವಾದ ಮಾಡಿದ್ದಾರೆ. ಸನಾತನ ಧರ್ಮದ ಕುರಿತು ಉದಯನಿಧಿ ಅವರ ಹೇಳಿಕೆಗಳನ್ನು ಬೆಂಬಲಿಸಿ, ಎಸ್‌ಸಿ, ಎಸ್‌ಟಿ, ಬಿಸಿ, ಅಲ್ಪಸಂಖ್ಯಾತರ ಐಕ್ಯ ವೇದಿಕೆಯ ಆಶ್ರಯದಲ್ಲಿ ಉದಯನಿಧಿ ಅವರನ್ನು ಬೆಂಬಲಿಸಿ ಬಾಪಟ ಜಿಲ್ಲೆಯ ಅಡ್ಡಕಿಯ ಅಂಬೇಡ್ಕರ್ ಪ್ರತಿಮೆ ಬಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಹೃದಯರನ್ನು ಸಮಾನವಾಗಿ ಗೌರವಿಸದ ಸನಾತನ ಧರ್ಮ ಬೇಕಿಲ್ಲ ಎಂದು ಸಂಘಗಳ ಮುಖಂಡರು ಅಭಿಪ್ರಾಯಪಟ್ಟರು. ಭಾರತ ಸಂವಿಧಾನವನ್ನು ಮಾತ್ರ ಅನುಸರಿಸುತ್ತೇವೆ ಎಂದೂ ಇದೇ ವೇಳೆ ಸಂಘಗಳ ಮುಖಂಡರು ಹೇಳಿದರು.

Also read: ಸನಾತನ ಧರ್ಮದ ಬಗೆಗಿನ ಹೇಳಿಕೆಗಳು ಇಂಡಿಯಾ ಮೈತ್ರಿಕೂಟದ ಮಾನಸಿಕ ದಿವಾಳಿತನ ಹಾಗೂ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತದೆ: ಧರ್ಮೇಂದ್ರ ಪ್ರಧಾನ್

ಹಿಂದೂ ಧರ್ಮದಲ್ಲಿ ಇನ್ನೂ ಮೂಢನಂಬಿಕೆಗಳಿದ್ದು, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿದ್ದು, ಇದನ್ನು ಹೋಗಲಾಡಿಸಬೇಕು ಎಂದರು. ಕೆಲ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಇದನ್ನು ಆಸರೆಯಾಗಿ ಬಳಸಿಕೊಂಡು ನಾಶ ಮಾಡಲು ಯತ್ನಿಸುತ್ತಿವೆ ಎಂದು ಆರೋಪಿಸಿದರು. ಈ ಕಾರ್ಯಕ್ರಮದಲ್ಲಿ ಸಂಯುಕ್ತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ಶ್ರೀಮನ್ನಾರಾಯಣ, ಉಪಾಧ್ಯಕ್ಷ ಅಂಕಂ ನಾಗರಾಜು, ಬಿ.ಎಸ್.ಪಿ. ಸಂಚಾಲಕ ಮಂದಾ ಜೋಸೆಫ್ ಹಾಗೂ ಇತರೆ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಸನಾತನ ಧರ್ಮದ ಕುರಿತು ಉದಯನಿಧಿ ಹೇಳಿಕೆಗಳು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿರುವ ಬೆನ್ನಲ್ಲೇ ಇದೀಗ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:24 pm, Fri, 8 September 23