ಸನಾತನ ಧರ್ಮದ ಬಗೆಗಿನ ಹೇಳಿಕೆಗಳು ಇಂಡಿಯಾ ಮೈತ್ರಿಕೂಟದ ಮಾನಸಿಕ ದಿವಾಳಿತನ ಹಾಗೂ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತದೆ: ಧರ್ಮೇಂದ್ರ ಪ್ರಧಾನ್

ಹೆಸರನ್ನು ಬದಲಾಯಿಸುವುದರಿಂದ ವ್ಯಕ್ತಿಯ ಉದ್ದೇಶ ಅಥವಾ ಚಾರಿತ್ರ್ಯ ಬದಲಾಗುವುದಿಲ್ಲ ಎಂದು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್(Dharmendra Pradhan) ಕಿಡಿಕಾರಿದ್ದಾರೆ. ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕ ಎ ರಾಜಾ( A Raja) ನೀಡಿರುವ ಹೇಳಿಕೆಯನ್ನು ಸಚಿವ ಧರ್ಮೇಂದ್ರ ಪ್ರಧಾನ್ ಖಂಡಿಸಿದ್ದಾರೆ. ಸನಾತನ ಧರ್ಮ ಶಾಶ್ವತ ಹಾಗೂ ಸತ್ಯವಾದ್ದದ್ದು, ಸನಾತನ ಧರ್ಮದ ಬಗ್ಗೆ ನೀಡುವ ಅವಹೇಳನಕಾರಿ ಹೇಳಿಕೆಗಳು ಡಿಎಂಕೆ ನಾಯಕ ಎ ರಾಜಾ ಹಾಗೂ ಇಂಡಿಯಾ ಮೈತ್ರಿಕೂಟದ ಮಾನಸಿಕ ದಿವಾಳಿತನ ಹಾಗೂ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಸನಾತನ ಧರ್ಮದ ಬಗೆಗಿನ ಹೇಳಿಕೆಗಳು ಇಂಡಿಯಾ ಮೈತ್ರಿಕೂಟದ ಮಾನಸಿಕ ದಿವಾಳಿತನ ಹಾಗೂ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತದೆ: ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್Image Credit source: Economic Times
Follow us
ನಯನಾ ರಾಜೀವ್
|

Updated on: Sep 08, 2023 | 10:13 AM

ಹೆಸರನ್ನು ಬದಲಾಯಿಸುವುದರಿಂದ ವ್ಯಕ್ತಿಯ ಉದ್ದೇಶ ಅಥವಾ ಚಾರಿತ್ರ್ಯ ಬದಲಾಗುವುದಿಲ್ಲ ಎಂದು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್(Dharmendra Pradhan) ಕಿಡಿಕಾರಿದ್ದಾರೆ. ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕ ಎ ರಾಜಾ( A Raja) ನೀಡಿರುವ ಹೇಳಿಕೆಯನ್ನು ಸಚಿವ ಧರ್ಮೇಂದ್ರ ಪ್ರಧಾನ್ ಖಂಡಿಸಿದ್ದಾರೆ. ಸನಾತನ ಧರ್ಮ ಶಾಶ್ವತ ಹಾಗೂ ಸತ್ಯವಾದ್ದದ್ದು, ಸನಾತನ ಧರ್ಮದ ಬಗ್ಗೆ ನೀಡುವ ಅವಹೇಳನಕಾರಿ ಹೇಳಿಕೆಗಳು ಡಿಎಂಕೆ ನಾಯಕ ಎ ರಾಜಾ ಹಾಗೂ ಇಂಡಿಯಾ ಮೈತ್ರಿಕೂಟದ ಮಾನಸಿಕ ದಿವಾಳಿತನ ಹಾಗೂ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಉದ್ದೇಶಪೂರ್ವಕವಾಗಿ ಭಾರತದ ಮಾನಹಾನಿ ಮಾಡುತ್ತಿರುವುದನ್ನು ದೇಶದ ಜನತೆ ನೋಡುತ್ತಿದೆ ಎಂದು ಹೇಳಿದರು.

ಡಿಎಂಕೆ ನಾಯಕ ರಾಜಾ ಸನಾತನ ಧರ್ಮವನ್ನು ಏಡ್ಸ್​, ಕುಷ್ಠರೋಗದಂತಹ ಕಾಯಿಲೆಗಳಿಗೆ ಹೋಲಿಕೆ ಮಾಡಿದ್ದಾರೆ. ಈ ಮೊದಲು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿದ್ದರು, ಈ ರೋಗಗಳ ಜತೆ ಹೋರಾಡಿದರೆ ಸಾಲದು ಮುಡಸಮೇತ ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮದ ವಿರುದ್ಧ ಹೋರಾಡುವುದಲ್ಲ ಅದನ್ನು ನಿರ್ಮೂಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮತ್ತಷ್ಟು ಓದಿ: ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ?: ಯೋಗಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಪ್ರಶ್ನೆ ಮಾಡಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿದ್ದರು, ಇವುಗಳ ವಿರುದ್ಧ ಹೋರಾಡುವ ಬದಲು ಸನಾತನ ಧರ್ಮವನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.

ಧರ್ಮೇಂದ್ರ ಪ್ರಧಾನ್ ಟ್ವೀಟ್

ರಾವಣನ ಅಹಂಕಾರದಿಂದ, ಕಂಸನ ಘರ್ಜನೆಯಿಂದ ಅಲುಗಾಡದ, ಔರಂಗಜೇಬನ ದುಷ್ಕೃತ್ಯಗಳಿಂದ ನಾಶಮಾಡಲು ಸಾಧ್ಯವಾಗದ ಸನಾತನ ಧರ್ಮವನ್ನು ಪರಾವಲಂಬಿ ಜೀವಿ ಅಳಿಸಿಹಾಕಲು ಸಾಧ್ಯವೇ ಎಂದು ಕೇಳಿದ್ದಾರೆ.

ಸನಾತನ ಧರ್ಮದತ್ತ ಬೆರಳು ತೋರುವುದು ಮಾನವೀಯತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ದುರುದ್ದೇಶಪೂರ್ವಕ ಪ್ರಯತ್ನಕ್ಕೆ ಸಮನಾಗಿದೆ ಎಂದು ಹೇಳಿದರು. ಸನಾತನ ಧರ್ಮವು ಸೂರ್ಯನಂತೆ ಶಕ್ತಿಯ ಮೂಲ ಎಂದು ಬಣ್ಣಿಸಿದರು, ಮೂರ್ಖ ಮಾತ್ರ ಸೂರ್ಯನ ಮೇಲೆ ಉಗುಳುವ ಆಲೋಚನೆ ಮಾಡಬಹುದು, ಆದರೆ ಆ ಎಂಜಿಲು ಉಗುಳುವವನ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ