ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ?: ಯೋಗಿ

ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿದ್ದರು, ಇವುಗಳ ವಿರುದ್ಧ ಹೋರಾಡುವ ಬದಲು ಸನಾತನ ಧರ್ಮವನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ರಾವಣನ ಅಹಂಕಾರದಿಂದ, ಕಂಸನ ಘರ್ಜನೆಯಿಂದ ಅಲುಗಾಡದ, ಔರಂಗಜೇಬನ ದುಷ್ಕೃತ್ಯಗಳಿಂದ ನಾಶಮಾಡಲು ಸಾಧ್ಯವಾಗದ ಸನಾತನ ಧರ್ಮವನ್ನು ಪರಾವಲಂಬಿ ಜೀವಿ ಅಳಿಸಿಹಾಕಲು ಸಾಧ್ಯವೇ ಎಂದು ಕೇಳಿದ್ದಾರೆ.

ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ?: ಯೋಗಿ
ಯೋಗಿ ಆದಿತ್ಯನಾಥ್Image Credit source: Indian Express
Follow us
ನಯನಾ ರಾಜೀವ್
|

Updated on: Sep 08, 2023 | 9:19 AM

ರಾವಣನ ಅಹಂಕಾರ, ಕಂಸನ ಘರ್ಜನೆಯಿಂದ ಅಲುಗಾಡದ ಸನಾತನ ಧರ್ಮವನ್ನು ಈಗ ಅಳಿಸಲು ಸಾಧ್ಯವೇ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಪ್ರಶ್ನೆ ಮಾಡಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿದ್ದರು, ಇವುಗಳ ವಿರುದ್ಧ ಹೋರಾಡುವ ಬದಲು ಸನಾತನ ಧರ್ಮವನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ರಾವಣನ ಅಹಂಕಾರದಿಂದ, ಕಂಸನ ಘರ್ಜನೆಯಿಂದ ಅಲುಗಾಡದ, ಔರಂಗಜೇಬನ ದುಷ್ಕೃತ್ಯಗಳಿಂದ ನಾಶಮಾಡಲು ಸಾಧ್ಯವಾಗದ ಸನಾತನ ಧರ್ಮವನ್ನು ಪರಾವಲಂಬಿ ಜೀವಿ ಅಳಿಸಿಹಾಕಲು ಸಾಧ್ಯವೇ ಎಂದು ಕೇಳಿದ್ದಾರೆ.

ಸನಾತನ ಧರ್ಮದತ್ತ ಬೆರಳು ತೋರುವುದು ಮಾನವೀಯತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ದುರುದ್ದೇಶಪೂರ್ವಕ ಪ್ರಯತ್ನಕ್ಕೆ ಸಮನಾಗಿದೆ ಎಂದು ಹೇಳಿದರು. ಸನಾತನ ಧರ್ಮವು ಸೂರ್ಯನಂತೆ ಶಕ್ತಿಯ ಮೂಲ ಎಂದು ಬಣ್ಣಿಸಿದರು, ಮೂರ್ಖ ಮಾತ್ರ ಸೂರ್ಯನ ಮೇಲೆ ಉಗುಳುವ ಆಲೋಚನೆ ಮಾಡಬಹುದು, ಆದರೆ ಆ ಎಂಜಿಲು ಉಗುಳುವವನ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಭಾರತದ ಸಂಪ್ರದಾಯದ ಬಗ್ಗೆ ಹೆಮ್ಮೆ ಪಡಬೇಕು, ಈಗಿನವರ ದುಷ್ಕೃತ್ಯದಿಂದ ಮುಂದಿನ ಪೀಳಿಗೆ ಅವಮಾನದಿಂದ ಬದುಕುವಂತಾಗುತ್ತದೆ. ದೇವರನ್ನು ನಾಶ ಮಾಡಲು ಯತ್ನಿಸಿದವರೆಲ್ಲ ತಾವೇ ನಾಶವಾದರು, 500 ವರ್ಷಗಳ ಹಿಂದೆ ಸನಾತನ ಸಂಸ್ಥೆಗೆ ಅವಮಾನ ಮಾಡಲಾಗಿತ್ತು, ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ, ಪ್ರತಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡಲು ಯತ್ನಿಸುತ್ತಿವೆ, ಭಾರತದ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸುತ್ತಿವೆ ಎಂದರು.

ಮತ್ತಷ್ಟು ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ

ಪ್ರತಿ ಯುಗದಲ್ಲೂ ಸತ್ಯವನ್ನು ಸುಳ್ಳಾಗಿಸುವ ಪ್ರಯತ್ನಗಳು ನಡೆದಿವೆ. ರಾವಣ ಸುಳ್ಳು ಹೇಳಲು ಪ್ರಯತ್ನಿಸಲಿಲ್ಲವೇ? ಅದಕ್ಕೂ ಮೊದಲು ಹಿರಣ್ಯಕಶ್ಯಪ ದೇವರನ್ನು ಮತ್ತು ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಲಿಲ್ಲವೇ? ಕಂಸನು ದೈವಿಕ ಅಧಿಕಾರಕ್ಕೆ ಸವಾಲು ಹಾಕಲಿಲ್ಲವೇ? ಆದರೆ, ಅವರು ಅವರ ದುರುದ್ದೇಶಪೂರಿತ ಯತ್ನದಲ್ಲಿ ಅವರೆಲ್ಲರೂ ನಾಶವಾಗಿದ್ದಾರೆ. ಸನಾತನ ಧರ್ಮವೇ ಶಾಶ್ವತ ಸತ್ಯ ಎಂಬುದನ್ನು ಮರೆಯಬಾರದು ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ