ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸುವ ಶಕ್ತಿ ನಿಮಗಿಲ್ಲ: ಕಾಂಗ್ರೆಸ್​​ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​​​ ಜೋಶಿ ವಾಗ್ದಾಳಿ

ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸುವ ಶಕ್ತಿ ನಿಮಗಿಲ್ಲ. ಇದು ಅಧಿಕಾರದ ತುಷ್ಟೀಕರಣದ ಪರಾಕಾಷ್ಠೆ. ಕಾಂಗ್ರೆಸ್ ಪಕ್ಷದ ನಿಲುವೇನು. ಇದನ್ನು ಖಂಡನೇ ಮಾಡದೆ ಹೋದರೆ ನೀವೆ ಹೇಳಿಕೆ ಕೊಡಿಸಿದ್ದೀರಿ ಎಂದರ್ಥ. ಅಷ್ಟೇ ಅಲ್ಲದೆ ತುಷ್ಟೀಕರಣ ರಾಜಕಾರಣ‌ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​​​ ಜೋಶಿ ವಾಗ್ದಾಳಿ ಮಾಡಿದ್ದಾರೆ.

ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸುವ ಶಕ್ತಿ ನಿಮಗಿಲ್ಲ: ಕಾಂಗ್ರೆಸ್​​ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​​​ ಜೋಶಿ ವಾಗ್ದಾಳಿ
ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ದಾದ್​​​ ಜೋಶಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2023 | 3:08 PM

ಹುಬ್ಬಳ್ಳಿ, ಸೆಪ್ಟೆಂಬರ್​​​ 7: ಸಚಿವ ಉದಯನಿಧಿ ಸ್ಟಾಲಿನ್ ಅಚಾನಕ್​ ಆಗಿ ಕೊಟ್ಟ ಹೇಳಿಕೆ ಅಲ್ಲ. ಸ್ಟಾಲಿನ್ ಹೇಳಿಕೆ ಖಂಡಿಸುವ ಶಕ್ತಿ ನಿಮಗಿಲ್ಲ. ಇದು ಅಧಿಕಾರದ ತುಷ್ಟೀಕರಣದ ಪರಾಕಾಷ್ಠೆ. ಇದಕ್ಕೆ ಕಾಂಗ್ರೆಸ್ ಪಕ್ಷದ ನಿಲುವೇನು. ಇದನ್ನು ಖಂಡನೇ ಮಾಡದೆ ಹೋದರೆ ನೀವೆ ಹೇಳಿಕೆ ಕೊಡಿಸಿದ್ದೀರಿ ಎಂದರ್ಥ. ಅಷ್ಟೇ ಅಲ್ಲದೆ ತುಷ್ಟೀಕರಣ ರಾಜಕಾರಣ‌ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​​​ ಜೋಶಿ (Pralhad Joshi) ವಾಗ್ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಯನಿಧಿಯನ್ನು ಸಚಿವ ಪ್ರಿಯಾಂಕ್ ಖರ್ಗೆ​ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟರೂ ಕಾಂಗ್ರೆಸ್​ನವರು ವಿರೋಧ ಮಾಡಿಲ್ಲ. ಚುನಾವಣೆ ಬಂದಾಗ ಕಾಂಗ್ರೆಸ್ ಪಾರ್ಟ್ ಟೈಂ ಹಿಂದೂ ಆಗುತ್ತೆ ಎಂದು ಕಿಡಿಕಾರಿದ್ದಾರೆ.

ಹಿಂದೂ ಬಗ್ಗೆ ನಂಬಿಕೆ ಇಟ್ಟವರು ಕೋಟ್ಯಂತರ ಜನರು ಇದ್ದಾರೆ. ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ​, ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಲಿ. ಸನಾತನ ಧರ್ಮ ಒಂದು ಜೀವನ ಪದ್ಧತಿ. ಸಂವಿಧಾನ 85 ರ ಕಲಂ ಪ್ರಕಾರ ನಾವು ರಾಷ್ಟ್ರಪತಿಗಳಿಗೆ ನಿವೇದನೆ ಮಾಡುತ್ತೇವೆ. ಸಂಸತ್ ಅಧಿವೇಶನ ಕರೆಯುತ್ತಾರೆ. 92 ಸಲ ಕಾಂಗ್ರೆಸ್ ಪಕ್ಷ ಚುನಾಯಿತ ಸರ್ಕಾರಗಳನ್ನ ಕಿತ್ತೆಸದ ಪಾರ್ಟಿ ಕಾಂಗ್ರೆಸ್. ಸರ್ಕಾರಗಳನ್ನ ಕಣ್ಮುಚ್ಚಿ ತಗೆಯೋ ಅಷ್ಟರಲ್ಲಿ ಚುನಾಯಿತ ಸರ್ಕಾರ ಕಿತ್ತೆಸೆದ ಪಕ್ಷ. ಇವತ್ತು ನಮಗೆ ಬುದ್ದಿ ಹೇಳುತ್ತೀರಾ ನೀವು ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಶೀಘ್ರ ಪ್ರತಿಪಕ್ಷ ನಾಯಕನ ಆಯ್ಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ರಾಜ್ಯಾದ್ಯಂತ ಪ್ರತಿಭಟನೆ; ಬಿಎಸ್ ಯಡಿಯೂರಪ್ಪ

ಸಚಿವ ಜಾರಕಿಹೊಳಿ‌ ಹಿಂದೂ ಅಶ್ಲೀಲ ಎಂದಿದ್ದರು. ರಾಹುಲ್ ಗಾಂಧಿ ಅಮೇರಿಕಾದಲ್ಲಿ ಮುಸ್ಲಿಂ ಲೀಕ್ ಸೆಕ್ಯುಲರ್ ಎಂದಿದ್ದರು. ಇದೇ ಮುಸ್ಲಿಂ ಲೀಗ್​ನಿಂದ ದೇಶ ವಿಭಜನೆ ಆಗಿದ್ದು. ಚುನಾವಣೆ ಬಂದಾಗ ಕಾಂಗ್ರೆಸ್ ಪಾರ್ಟ್ ಟೈಮ್ ಹಿಂದೂ ಆಗತ್ತೆ. ಘಮಂಡಿಯಾ ಘಟಬಂಧನ‌ ಉಳಿಸಲು ಈ ಹೇಳಿಕೆ ಖಂಡಿಸಿಲ್ಲ ಎಂದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮುಂದಾಗಿದೆ ಎಂದ ಜೋಶಿ

ಹಿಂದೂ ಧರ್ಮದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಾ.ಪರಮೇಶ್ವರ್​ ಯಾವುದೇ ಪಕ್ಷದಲ್ಲಿರಲಿ ಸೃಜನಶೀಲ ರಾಜಕಾರಣಿ. ಆದರೆ ಓಲೈಕೆಗಾಗಿ ಇಂತಹ ಮಾತು ಬಳಸುತ್ತಾರೆ ಅಂದುಕೊಂಡಿರಲಿಲ್ಲ. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿದರು.

ಬಕೆಟ್ ರಾಜಕಾರಣಕ್ಕೆ ಉತ್ತರಿಸಲ್ಲ, ನಮ್ಮದು ಕಾರ್ಯಕರ್ತರ ಪಕ್ಷ

ಬಕೆಟ್​ ಹಿಡಿದವರಿಗೆ ಟಿಕೆಟ್​ ಕೊಟ್ಟಿದ್ದಾರೆ ಎಂಬ ಪ್ರದೀಪ್ ಶೆಟ್ಟರ್​ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಕೆಟ್ ರಾಜಕಾರಣಕ್ಕೆ ಉತ್ತರಿಸಲ್ಲ, ನಮ್ಮದು ಕಾರ್ಯಕರ್ತರ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಕೂಡ ಚಹಾ ಮಾರಿ ಪ್ರಧಾನಮಂತ್ರಿ ಆದವರು. ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಆಗಿರಲಿ, ಯಾರೇ ಆಗಿರಲಿ, ಸಾರ್ವಜನಿಕವಾಗಿ ಮಾತಾಡಬಾರದು. ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೆಗೆ ಅವತ್ತೇ ಉತ್ತರಿಸಿದ್ದೇನೆ ಎಂದರು.

ಕೇಂದ್ರದ ಮೇಲೆ ಗೂಬೆ ಕುರಿಸಲು ತುದಿಗಾಲ ಮೇಲೆ ನಿಂತಿದ್ದಾರೆ   

ಭಾರತ ನಾಮಕರಣ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನಾವು ಯಾರೂ ಅಧಿಕೃತವಾಗಿ ಹೇಳಿಲ್ಲ. ಇದು ಚರ್ಚೆಯ ಅಗತ್ಯವಲ್ಲ. ನಿಮಗೆ ಬೇಕಾದರೆ ಇಂಡಿಯಾ ಅಂತಾ ಕರೀರಿ, ಇಲ್ಲಿ ಭಾರತ ಅಂತಾ ಕರೀರಿ. ಅನುರಾಗ್ ಸಿಂಗ ಠಾಕೂರ ಇದನ್ನು ಸ್ಪಷ್ಟಪಡಿಸಿದ್ದಾರೆ. NDRF ನಾರ್ಮ್ಸ್ ಕಾಲ ಕಾಲಕ್ಕೆ ಬದಲಾಗಿದೆ. ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕುರಿಸುವ ಕೆಲಸ ಆಗುತ್ತಿದೆ. ಎಲ್ಲರೂ ಗೂಬೆ ಕುರಿಸುವುದಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್